![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 1, 2018, 4:33 PM IST
ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್ ಇದರ ಸ್ಥಾಪನಾ ದಿನಾಚರಣೆಯು ಸೇವಾ ಮಂಡಲದ ಸಯಾನ್ ಪೂರ್ವದಲ್ಲಿರುವ ಶ್ರೀ ಗುರುಗಣೇಶ್ ಪ್ರಸಾದ ಸಭಾಗೃಹದಲ್ಲಿ ಜರಗಿತು.
ಬೆಳಗ್ಗೆ ಗಣಹೋಮ, ಅನಂತರ ಭಜನೆ, ಅರಸಿನ ಕುಂಕುಮ ಇನ್ನಿತರ ಕಾರ್ಯಕ್ರಮಗಳು ನೆರವೇರಿದವು. ಸಂಸ್ಥೆಯ ಯಕ್ಷಗಾನ ಕಲಾ ಮಂಡ ಳದ ಕಲಾವಿದರಿಂದ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ರತಿ ಕಲ್ಯಾಣ ಯಕ್ಷಗಾನ ಜರಗಿತು.
ಯಕ್ಷಗಾನ ಪ್ರದರ್ಶನದ ಮಧ್ಯಂ ತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಸುರೇಶ್ ಕಿಣಿ, ಮಾಜಿ ಸಹಾಯಕ ಪ್ರಬಂಧಕ ಜಿ. ಎನ್. ಪೈ, ಸೇವಾ ಮಂಡಳದ ಟ್ರಸ್ಟಿ ರಾಮನಾಥ ಕಿಣಿ, ಸೇವಾ ಮಂಡಳದ ಟ್ರಸ್ಟಿ ಯೋಗೇಶ್ ಡಾಂಗೆ, ಖ್ಯಾತ ಭಾಗವತರಾದ ಪೊಲ್ಯ ಲಕ್ಷಿ¾àನಾರಾಯಣ ಶೆಟ್ಟಿ, ಪತ್ರಕರ್ತ ರಮೇಶ್ ಭಿರ್ತಿ, ಜಿಎಸ್‌ಬಿ ಸೇವಾ ಮಂಡಳದ ಉಪಾಧ್ಯಕ್ಷ ಎಸ್. ವಿ. ಪೈ ಅವರನ್ನು ಜನಪ್ರಿಯ ಯಕ್ಷಗಾನ ಕಲಾಮಂಡಳದ ಅಧ್ಯಕ್ಷ ಮೇಲ್‌ಗಂಗೊಳ್ಳಿ ರವೀಂದ್ರ ಪೈ ಅವರು ಗೌರವಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆಯನ್ನು ಆಯೋಜಿಸ ಲಾಗಿತ್ತು, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಲಾಭಿಮಾ ನಿಗಳು, ತುಳು- ಕನ್ನಡಿಗರು, ಸಮಾಜ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
You seem to have an Ad Blocker on.
To continue reading, please turn it off or whitelist Udayavani.