ನಾಯಕಿಯರ ದರ್ಬಾರ್‌

Team Udayavani, Nov 2, 2018, 6:00 AM IST

s-25.jpg

“ಒಬ್ಬಳು ಆರ್ಟಿಸ್ಟ್‌ ಆರತಿ, ಮತ್ತೊಬ್ಬಳು ಮೀಟ್ರಾ ಮಂಜುಳ, ಇನ್ನೊಬ್ಬಳು ಬಾಯºಡುಕಿ ಭವ್ಯಾ, ಮಗದೊಬ್ಬಳು ಸುಳ್ಳಿ ಸುಜಾತ…’
– ಇಷ್ಟು ಹೇಳಿದ ಮೇಲೆ ಇದೊಂದು ಪಕ್ಕಾ ಗಂಡುಬೀರಿ ಹುಡುಗಿಯರ ಕಥೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೌದು, ಇದು ನಾಯಕಿಯರ ಪ್ರಧಾನ ಚಿತ್ರ. ಹೆಸರು “ಪುಣ್ಯಾತ್‌ಗಿತ್ತೀರು’. ಹೆಸರಲ್ಲೇ ಎಲ್ಲವೂ ಇದೆ. ಹಾಗಂತ, ಇನ್ನೇನೋ ಕಲ್ಪನೆ ಮಾಡಿಕೊಳ್ಳೋದು ಬೇಡ. ಇದೊಂದು ಸಮಾಜಕ್ಕೆ ಸಂದೇಶ ಸಾರುವ ಚಿತ್ರ. ಹಾಗಂತ ದೊಡ್ಡ ಸಂದೇಶ ಸಾರದಿದ್ದರೂ, ನಮ್ಮ ನಡುವಿನ ಸತ್ಯಘಟನೆಗಳನ್ನು ವಿವರಿಸುವಂತಹ ಚಿತ್ರ. ಈ ಚಿತ್ರಕ್ಕೆ ರಾಜು ಬಿ.ಎನ್‌. ನಿರ್ದೇಶಕರು. ಸತ್ಯನಾರಾಯಣ ಮನ್ನೆ ನಿರ್ಮಾಪಕರು. ಚಿತ್ರ ಪೂರ್ಣಗೊಂಡಿದ್ದು, ಇನ್ನೇನು ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್‌ ಅಂತ್ಯ ಇಲ್ಲವೇ ಡಿಸೆಂಬರ್‌ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಹಾಡಿನ ತುಣುಕು ಮತ್ತು ಟ್ರೇಲರ್‌ ತೋರಿಸುವ ಮೂಲಕ ಚಿತ್ರದ ಮಾಹಿತಿ ಹಂಚಿಕೊಳ್ಳಲೆಂದು ತಂಡದೊಂದಿಗೆ ಮಾಧ್ಯಮ ಮುಂದೆ ಬಂದಿದ್ದರು ನಿರ್ದೇಶಕ ರಾಜು ಬಿ.ಎನ್‌.

ಮೊದಲು ಮಾತಿಗಿಳಿದ ರಾಜು ಹೇಳಿದ್ದಿಷ್ಟು. “ಮೊದಲರ್ಧ ಚಿತ್ರ ನೋಡುವಾಗ, ಈ ನಾಯಕಿಯರನ್ನು ಬೈಯೋರ ಸಂಖ್ಯೆ ಜಾಸ್ತಿ. ಅದೇ ದ್ವಿತಿಯಾರ್ಧದಲ್ಲಿ ಬೈಯ್ದವರೇ ಹೊಗಳುವುದು ಗ್ಯಾರಂಟಿ. ಇಲ್ಲಿ ನಾಲ್ವರು ಹುಡುಗಿಯರು, ತಮ್ಮ ಬದುಕಿಗಾಗಿ ಹೋರಾಡುತ್ತಾರೆ. ತಮಗೆ ಅವಮಾನ ಆದಾಗ ಸಿಡಿದೇಳುತ್ತಾರೆ, ಪಕ್ಕಾ ಮಾಸ್‌ ಅಂಶಗಳೊಂದಿಗೆ ಚಿತ್ರ ಮಾಡಿದ್ದೇನೆ. ಇದೊಂದು ಮನರಂಜನೆ ಜೊತೆಗೆ ಬದುಕಿನ ಮೌಲ್ಯ, ವಾಸ್ತವತೆಯ ಸ್ಥಿತಿಯನ್ನು ಬಿಂಬಿಸುವ ಚಿತ್ರ. ನಾಯಕಿಯರೆಲ್ಲರೂ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿ, ಸಹಕರಿಸಿದ್ದರಿಂದಲೇ ಚಿತ್ರ ನಿರೀಕ್ಷೆ ಮೀರಿ ಮೂಡಿಬಂದಿದೆ’ ಎಂದು ವಿವರ ಕೊಟ್ಟರು ರಾಜು.

ನಿರ್ಮಾಪಕ ಸತ್ಯನಾರಾಯಣ ಮನ್ನೆ ಅವರಿಗೆ ಇದು ಮೊದಲ ಅನುಭವ. ಕಥೆ ಕೇಳಿದ ಕೂಡಲೇ, ಸಮಾಜಕ್ಕೊಂದು ಸಂದೇಶ ಕೊಡುವ ಚಿತ್ರವಾಗಿದ್ದರಿಂದ ನಿರ್ಮಾಣಕ್ಕೆ ಮುಂದಾದರಂತೆ. ಇಲ್ಲಿ ನಾಲ್ವರು ನಾಯಕಿಯರ ಬದುಕು, ಬವಣೆ ಕಥೆ ಇದೆ. ಅವರೆಲ್ಲರೂ ಬದುಕಿಗಾಗಿ ಏನೆಲ್ಲಾ ಮಾಡ್ತಾರೆ ಎಂಬುದು ಕಥೆ. ಆರಂಭದಲ್ಲಿ ನಾಯಕಿಯರನ್ನು ಬೈದುಕೊಳ್ಳುವ ಜನರ, ದ್ವಿತಿಯಾರ್ಧದಲ್ಲಿ ಹೊಗಳುತ್ತಾರೆ. ಯಾಕೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎಂಬುದು ನಿರ್ಮಾಪಕರ ಮಾತು.

ಮಮತಾ ರಾವತ್‌ ಇಲ್ಲಿ ಆರ್ಟಿಸ್ಟ್‌ ಆರತಿ ಪಾತ್ರ ಮಾಡಿದ್ದಾರೆ. ಅವರಿಗೆ ಈ ಚಿತ್ರದ ಪಾತ್ರ ನೆನಪಿಸಿಕೊಂಡರೆ, ಇಷ್ಟು ವರ್ಷಗಳಲ್ಲಿ ಮಾಡಿದ್ದಕ್ಕಿಂತಲೂ ಭಿನ್ನ ಎನಿಸುತ್ತದೆಯಂತೆ. ಸಿನಿಮಾ ರಂಗದಲ್ಲಿ ಆರ್ಟಿಸ್ಟ್‌ ಆರತಿ ಅವಕಾಶಕ್ಕಾಗಿ ಎಷ್ಟೊಂದು ಸ್ಟ್ರಗಲ್‌ ಮಾಡ್ತಾಳೆ. ಅವಳಿಗೆ ಒಂದು ಹಂತದಲ್ಲಿ ಅವಮಾನ ಆದಾಗ, ಹೇಗೆ ರಗಡ್‌ ಹುಡುಗಿಯಾಗ್ತಾಳೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ಮಮತಾ. ದಿವ್ಯಾಶ್ರೀ ಇಲ್ಲಿ ಮೀಟ್ರಾ ಮಂಜುಳ ಪಾತ್ರ ಮಾಡಿದ್ದು, ಅವರು ಲಾಂಗ್‌ ಹಿಡಿದಿದ್ದಾರಂತೆ. ಅದೊಂದು ರೀತಿಯ ಟಾಮ್‌ಬಾಯ್‌ ಪಾತ್ರವಂತೆ. ಮೊದಲ ಚಿತ್ರದಲ್ಲೇ ಒಳ್ಳೇ ಅವಕಾಶ ಸಿಕ್ಕ ಖುಷಿ ಅವರದು. ಇನ್ನು, “ಜಂತರ್‌ ಮಂತರ್‌’ ಚಿತ್ರದಲ್ಲಿ ನಟಿಸಿದ್ದ ಸಂಭ್ರಮಶ್ರೀ, ಸುಳ್ಳಿ ಸುಜಾತ ಪಾತ್ರ ಮಾಡಿದ್ದಾರಂತೆ. ಲೈಫ‌ಲ್ಲಿ ಸುಳ್ಳು ಹೇಳಿ ಹೇಗೆಲ್ಲಾ ಯಾಮಾರಿಸುತ್ತಾಳೆ ಎಂಬ ಪಾತ್ರದ ಮೂಲಕ ಗಮನಸೆಳೆಯುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಇವರೊಂದಿಗೆ ಬಾಯºಡುಕಿ ಭವ್ಯಾ ಪಾತ್ರದಲ್ಲಿ ಐಶ್ವರ್ಯ ನಟಿಸಿದ್ದು, ಬರೀ ಬಜಾರಿಯಾಗಿ ಹುಡುಗಿಯಾಗಿ ಪಟ ಪಟ ಮಾತಾಡುವ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಶೋಭರಾಜ್‌, ಸುಧಿ, ಕುರಿ ರಂಗ ಇತರರು ನಟಿಸಿದ್ದಾರೆ. 

ತ್ರಿಭುವನ್‌ ಎಲ್ಲಾ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಈ ಪುಣ್ಯಾತ್‌ಗಿತ್ತೀರು ಪುಂಡರ ಜೊತೆ ಯದ್ವಾ ತದ್ವಾ ಫೈಟ್‌ ಮಾಡಿದ್ದಾರೆ. ಶರತ್‌ ಛಾಯಾಗ್ರಹಣವಿದೆ. ರಾಮಾನುಜಂ ಸಂಗೀತವಿದೆ.

ಟಾಪ್ ನ್ಯೂಸ್

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Ayogya 2: ಇಲ್ಲಿ ಎಲ್ಲವೂ ಡಬಲ್‌ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.