ಚಂದ್ರಶೇಖರ್ ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಿಲ್ಲ: ಡಿವಿಎಸ್
Team Udayavani, Nov 2, 2018, 6:00 AM IST
ಬೆಂಗಳೂರು: ಬಿಜೆಪಿಯ ತತ್ವಾದರ್ಶ, ನರೇಂದ್ರ ಮೋದಿಯವರನ್ನು ಒಪ್ಪಿ ಪಕ್ಷ ಸೇರಿದ್ದ ಚಂದ್ರಶೇಖರ್ ಯಾವುದೋ ಸಣ್ಣ ಪುಟ್ಟ ಆಸೆ, ಆಕಾಂಕ್ಷೆಗಳಿಗೆ ಬಲಿಯಾಗಿ ದ್ರೋಹ ಮಾಡಿದ್ದು, ಇಂತಹ ದ್ರೋಹಿ ಖಂಡಿತವಾಗಿಯೂ ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರ ಜೊತೆ ಮಾತನಾಡಿ, ಪಕ್ಷ ಸಂಘಟನೆಯಾಗುವ ಸಂದರ್ಭದಲ್ಲಿ ಹಲವಾರು ಜನರು ಪಕ್ಷ ಸೇರುತ್ತಾರೆ. ಯೋಗೇಶ್ವರ್ ಕಳೆದ ಚುನಾವಣೆಯಲ್ಲಿ ಹಲವಾರು ಜನರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿದ್ದರು. ಅದೇ ರೀತಿ, ಕಾಂಗ್ರೆಸ್ ಬಗ್ಗೆ ಅತೃಪ್ತಿಯಿದ್ದ ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಸಂಪೂರ್ಣ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದರು. ಆದರೆ, ಆತ ಎಲ್ಲರಿಗೂ ದ್ರೋಹ ಮಾಡಿದ್ದು ತುಂಬಾ ನೋವು ಹಾಗೂ ಬೇಸರವಾಗಿದೆ ಎಂದು ಹೇಳಿದರು.
ಬಿಜೆಪಿ ರಾಮನಗರ ಭಾಗದಲ್ಲಿ ಬೆಳವಣಿಗೆಯಾಗಬೇಕೆಂಬ ಉದ್ದೇಶದಿಂದ ಚಂದ್ರಶೇಖರ್ ಅಭ್ಯರ್ಥಿಯಾಗುತ್ತೇನೆಂದು ಕೇಳಿದಾಗ ನಾವು ಸಹಮತ ನೀಡಿ ಅಭ್ಯರ್ಥಿಯನ್ನಾಗಿಸಿದ್ದೇವು. ಆದರೆ, ಅವರ ಕಾಂಗ್ರೆಸ್ ಬುದ್ದಿ ಬಿಟ್ಟು ಅವರು ಬಿಜೆಪಿಗೆ ಬಂದಿರಲಿಲ್ಲ. ಅವರ ರಕ್ತದಲ್ಲಿದ್ದ ಕಾಂಗ್ರೆಸ್ ವಿದ್ರೋಹಿ ಘಟನೆಗಳು ಅವರ ಮನಸ್ಸಿನಲ್ಲಿಯೇ ಉಳಿದಿತ್ತು. ಹೀಗಾಗಿ ಅವರು ನಮಗೆ ಕೈಕೊಟ್ಟಿದ್ದು, ಇಂತಹ ದ್ರೋಹಿಗೆ ದೇವರೇ ಬುದ್ದಿ ಕಲಿಸುತ್ತಾನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್.ಆರ್. ಗವಿಯಪ್ಪ ಒತ್ತಾಯ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.