ವಿಡಿಯೋದಿಂದ ಸಾರ್ವಜನಿಕರಿಗೆ ಜಾಗೃತಿ


Team Udayavani, Nov 2, 2018, 11:26 AM IST

cyber-crime.jpg

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಮಾಡುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಪ್ರತಿ ನಿತ್ಯ ಕನಿಷ್ಠ 40-50 ಆನ್‌ಲೈನ್‌ ವಂಚನೆ ಪ್ರಕರಣಗಳು ಸೈಬರ್‌ ಅಪರಾಧ ಠಾಣೆಯಲ್ಲಿ ದಾಖಲಾಗುತ್ತಿವೆ.

ಇದೀಗ ಸೈಬರ್‌ ಅಪರಾಧ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾರಾದರೂ ಅಪರಿಚಿತ ವ್ಯಕ್ತಿ ಕರೆ ಮಾಡಿ ನಿಮ್ಮ ಬಳಿ ಬ್ಯಾಂಕ್‌ ಖಾತೆ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಕೇಳಿದರೆ ಏನಾಗುತ್ತದೆ. ಅದಕ್ಕೆ ನೀವೇಗೆ ಉತ್ತರಿಸಬೇಕು? ಎಂಬುದನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಖಾತೆಯಲ್ಲಿ “ಸೈಬರ್‌ ಸ್ನೇಹಿತ-ಸಂಚಿಕೆ-1′ ಎಂಬ ಶೀರ್ಷಿಕೆ ಅಡಿಯಲ್ಲಿ 1.51 ನಿಮಿಷದ ವಿಡಿಯೋ ತುಣುಕು ಬಿಡುಗಡೆ ಮಾಡಿದ್ದಾರೆ.

ವಿಶೇಷವೆಂದರೆ ನಟ ರೆಬಲ್‌ಸ್ಟಾರ್‌ ಅಂಬರೀಶ್‌ ಧ್ವನಿ ಮಾದರಿಯ ವಿಡಿಯೋ ಇದಾಗಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಸ್ಕೀಮಿಂಗ್‌, ಫೇಸ್‌ಬುಕ್‌, ಓಎಲ್‌ಎಕ್ಸ್‌ ಸೇರಿ ಆನ್‌ಲೈನ್‌ ಮೂಲಕ ಆಗುವಂತ ಎಲ್ಲ ಮಾದರಿಯ ವಂಚನೆ ಪ್ರಕರಣಗಳ ಬಗ್ಗೆ ಕನ್ನಡ, ಇಂಗ್ಲೀಷ್‌ ಹಾಗೂ ಹಿಂದಿ ಭಾಷೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸೈಬರ್‌ ವಿಭಾಗದ ಪೊಲೀಸರು ಹೇಳಿದರು.

ವಿಡಿಯೋದಲ್ಲಿ ಏನಿದೆ?: “ನಮ್ಮ ಕಿರಣ, ಮಾಮಾ ಅಂತಾ ಅಳುತ್ತ ಓಡಿ ಬಂದ. ಏನಾಯೊ¤à ಎಂದೆ. ಅವನ ಹೆಂಡತಿಗೆ ಬ್ಯಾಂಕ್‌ನ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ಕೊಟ್ಟಿದ್ದಾನೆ. ಆಕೆಗೇ ಯಾರೋ ಕರೆ ಮಾಡಿ ಹಿಂದಿಲೋ, ಇಂಗ್ಲಿಷ್‌ನಲ್ಲೋ ಮಾತಾಡಿದ್ದಾರೆ. ಬ್ಯಾಂಕ್‌ ಮ್ಯಾನೇಜರ್‌ ಅಂತಾ ಹೇಳಿದ್ದಾನೆ.

ಆಕೆಯಿಂದ ಡೆಬಿಟ್‌ ಕಾರ್ಡ್‌ನ ಸಿವಿವಿ ಮತ್ತು ಓಟಿಪಿ ನಂಬರ್‌ ಕೇಳಿದ್ದಾನೆ. ಪಟ ಪಟ ಅಂತಾ ಮಾತಾಡುತ್ತಾನೆ. ಮಾಹಿತಿ ಕೊಟ್ರೆ ಕೆಟ್ರಿ. ಬ್ಯಾಂಕ್‌ ಅಧಿಕಾರಿಗಳು ಎಂದಿಗೂ ಕರೆ ಮಾಡಿ ಖಾತೆದಾರರ ವೈಯಕ್ತಿಕ ಮಾಹಿತಿ ಕೇಳಲ್ಲ. ಹೀಗಾಗಿ ದಯವಿಟ್ಟು ಯಾವುದೇ ವ್ಯಕ್ತಿ ಆ ರೀತಿ ಮಾಹಿತಿ ಕೇಳಿದಲ್ಲಿ ಕನ್ನಡದಲ್ಲೇ ಮಾತನಾಡಿ.

ಈ  ರೀತಿ ಮಾತನಾಡಿದವರು ಆಂಗ್ಲದಲ್ಲಿ ಮಾತನಾಡಿದರೆ,”ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ’ ಅಂತಾ ಕನ್ನಡದಲ್ಲಿ ಮಾತನಾಡಿ. ಆತನಿಗೆ ಅರ್ಥವಾಗದೆ ಕರೆ ಕಟ್‌ ಮಾಡುತ್ತಾನೆ. ಆಗ ನಮ್ಮ ಜನ ಯಾರು ಹಣ ಕಳೆದುಕೊಳ್ಳುವುದಿಲ್ಲ. ಸೈಬರ್‌ ವಂಚನೆ ಆಗುವುದು ದುರಾಸೆ. ಮತ್ತೂಂದು ಅಜ್ಞಾನ. ಹೀಗಾಗಿ ಬ್ಯಾಂಕ್‌ ಅಧಿಕಾರಿಗಳು ಎಂದು ಹೇಳಿಕೊಂಡ ಕರೆ ಮಾಡಿದರೆ ಎಚ್ಚರವಹಿಸಿ ಎಂದು ನಟ ಅಂಬರೀಷ್‌ ಧ್ವನಿ ಮಾದರಿಯಲ್ಲಿ ಹೇಳಲಾಗಿದೆ.

ಸೈಬರ್‌ ಪೊಲೀಸರ ಎಡವಟ್ಟು: ಈ ನಡುವೆ 2.50 ನಿಮಿಷದ ಮತ್ತೂಂದು ವಿಡಿಯೋದಲ್ಲಿ, ನಮಸ್ಕಾರ, ನಾನು ರೆಬಲ್‌ ಸ್ಟಾರ್‌ ಅಂಬರೀಷ್‌ ಸೈಬರ್‌ ಸ್ನೇಹಿತ ವಿಡಿಯೋಗೆ ಧ್ವನಿ ಕೊಟ್ಟಿದ್ದಾನೆ ಎಂದು ಯೋಚನೆ ಮಾಡುತ್ತಿದ್ದಿರಾ ಎಂದು ಮಾತು ಆರಂಭವಾಗುವ ವಿಡಿಯೋ ಹರಿದಾಡುತ್ತಿದೆ. ಈ ಮೂಲಕ ಸೈಬರ್‌ ಪೊಲೀಸರು ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಧ್ವನಿ ಅನುಕರಣೆ ಮಾಡುವ ಮೊದಲು ಸಂಬಂಧಿತ ವ್ಯಕ್ತಿಯ ಅನುಮತಿ ಪಡೆಯಬೇಕು. ಆದರೆ, ಸ್ಯಾಂಡಲ್‌ವುಡ್‌ನ‌ ಹಿರಿಯ ನಟ ಅಂಬರೀಷ್‌ ಧ್ವನಿ ಬಳಸಲು ಅವರಿಂದ ಸೈಬರ್‌ ಪೊಲೀಸರು ಅನುಮತಿ ಪಡೆದಿಲ್ಲ ಎಂಬುದು ತಿಳಿದು ಬಂದಿದೆ. ಯಾವುದೇ ವ್ಯಕ್ತಿ ಧ್ವನಿ ಅನುಕರಣೆ ಮಾಡುವ ಮೊದಲು ಆತನ ಅನುಮತಿ ಪಡೆಯಬೇಕು.

ಒಂದು ವೇಳೆ ಸಂಬಂಧಿತ ವ್ಯಕ್ತಿ ಧ್ವನಿ ಬಳಕೆ ಮಾಡಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬಹುದು ಎನ್ನುತ್ತಾರೆ ತಜ್ಞರು. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಿಸಿಬಿ ಡಿಸಿಪಿ ಎಸ್‌. ಗಿರೀಶ್‌, ಅಂಬರೀಷ್‌ ಮಾದರಿಯಲ್ಲಿ ಧ್ವನಿ ಇರಬಹುದು. ಅಂಬರೀಷ್‌ ಅವರ ಮಿಮಿಕ್ರಿ ಕೂಡ ನಾವು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಟಾಪ್ ನ್ಯೂಸ್

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-cm

Waqf: ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.