ಮಾಲಿನ್ಯದಿಂದ ಹೃದಯಾಘಾತ


Team Udayavani, Nov 2, 2018, 11:26 AM IST

malinya.jpg

ಬೆಂಗಳೂರು: ಕೆನಡಾದಲ್ಲಿ ಕಳೆದ ಎಂಟು ವರ್ಷಗಳಲ್ಲಿ ದಾಖಲಾದ ಹೃದಯಾಘಾತ ಪ್ರಕರಣಗಳು ನಗರದಲ್ಲಿ ಕೇವಲ ಎಂಟು ತಿಂಗಳಲ್ಲಿ ದಾಖಲಾಗಿವೆ! ಅಚ್ಚರಿ ಎನಿಸಿದರೂ ಇದು ಸತ್ಯ. ಕಳೆದ ವರ್ಷದ ಎಂಟು ತಿಂಗಳ ಅಂತರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 1,127 ಹೃದಯಾಘಾತ ಪ್ರಕರಣಗಳು ನೋಂದಣಿಯಾಗಿವೆ.

ಆದರೆ, ಎಂಟು ವರ್ಷಗಳಲ್ಲಿ ಕೆನಡಾದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1,100. ಇದಕ್ಕೆ ಕಾರಣ ನಗರದಲ್ಲಿ ವಾಹನಗಳು ಉಗುಳುತ್ತಿರುವ ಹೊಗೆ. ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಹೃದಯಾಘಾತಕ್ಕೆ ತುತ್ತಾಗುವುದು ಸರ್ವೆಸಾಮಾನ್ಯ. ಆದರೆ, ನಗರದ ಜನ ವಾಯುಮಾಲಿನ್ಯದಿಂದಲೂ ಹೃದಯಾಘಾತಕ್ಕೀಡಾಗುತ್ತಿದ್ದು, ಇದು ಗಣನೀಯವಾಗಿ ಏರಿಕೆಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ “ಕ್ಲೈಮೇಟ್‌ ಟ್ರೆಂಡ್ಸ್‌’ ಎಂಬ ತಂಡದ ಅಧ್ಯಯನ ವರದಿಯಲ್ಲಿ ಇದು ಜಾಹೀರಾಗಿದೆ. ನಗರದ ವಾಯುಮಾಲಿನ್ಯವು ನಿರಂತರ ಕೆಮ್ಮು, ಅಸ್ತಮಾ, ಶ್ವಾಸ ಸಂಬಂಧಿತ ಸಮಸ್ಯೆಗಳಿಗೆ ಸೀಮಿತವಾಗಿತ್ತು. ಆದರೆ, ವಾಹನಗಳು ಉಗುಳುವ ದಟ್ಟ ಹೊಗೆಯಿಂದಾಗಿ ಜೀವ ಮಾರಕ ರೋಗಕ್ಕೆ ಕಾರಣವಾಗುತ್ತಿದೆ ಎಂಬುದು ಅಧ್ಯಯನ ವರದಿಯಲ್ಲಿ ಉಲ್ಲೇಖೀಸಲಾಗಿದೆ. 

ಏಷ್ಯಾದ ಅತಿದೊಡ್ಡ ಹೃದ್ರೋಗ ಆಸ್ಪತ್ರೆ ಜಯದೇವವೊಂದರಲ್ಲೇ ಕಳೆದ ಐದು ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸರಾಸರಿ ಶೇ. 22ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ. ಇವರಲ್ಲಿ ಬಹುತೇಕರು 40 ವರ್ಷದ ಒಳಗಿನವರು. ವಿಚಿತ್ರವೆಂದರೆ ಹೀಗೆ ಹೃದಯಾಘಾತಕ್ಕೀಡಾದವರಾರೂ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಬಳಲುತ್ತಿರುವವರಲ್ಲ ಎಂಧೂಳು ಅಲ್ಲಿನ ಜಯದೇವ ಇನ್‌ಸ್ಟಿಟ್ಯೂಟ್‌ ಆಫ್ ಕಾರ್ಡಿಯಾವಸ್ಕಾéಲರ್‌ ಸೈನ್ಸಸ್‌ ಆಂಡ್‌ ರಿಸರ್ಚ್‌ನ ಡಾ.ರಾಹುಲ್‌ ಪಾಟೀಲ ತಜ್ಞರಿಗೆ ಸ್ಪಷ್ಟಪಡಿಸಿದ್ದಾರೆ. 

ವಾಯುಮಾಲಿನ್ಯ ಹೇಗೆ ಕಾರಣ?: ಇವರೆಲ್ಲಾ ವಾಯುಮಾಲಿನ್ಯದಿಂದಲೇ ಹೃದಯಾಘಾತಕ್ಕೀಡಾಗಿದ್ದಾರೆ ಎಂದು ಹೇಗೆ ಹೇಳುತ್ತೀರಾ ಎಂದು ಕ್ಲೈಮೇಟ್‌ ಟ್ರೆಂಡ್ಸ್‌ ತಂಡ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಡಾ.ಪಾಟೀಲ, “ಕಳೆದ ವರ್ಷ ನಾವು ಪ್ರಾಯೋಗಿಕವಾಗಿ 1,200 ರೋಗಿಗಳನ್ನು ಮಾದರಿಯಾಗಿ ತೆಗೆದುಕೊಂಡಿದ್ದೆವು.

ಅದರಲ್ಲಿ ಕೇವಲ ಶೇ. 10ರಷ್ಟು ಅಧಿಕ ರಕ್ತದೊತ್ತಡ ಮತ್ತು ಶೇ. 10ರಷ್ಟು ಮಧುಮೇಹದಿಂದ ಬಳಲುತ್ತಿರುವವರಾಗಿದ್ದರು. ಉಳಿದ ಶೇ. 80ರಷ್ಟು ರೋಗಿಗಳು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ. ಇದರಲ್ಲಿ ಶೇ. 48ರಷ್ಟು ಮಾತ್ರ ಧೂಮಪಾನ ಮಾಡುತ್ತಿದ್ದರು. ಉಳಿದವರು ಇದೆಲ್ಲದರಿಂದ ಹೊರತಾಗಿದ್ದರು. ಆದರೂ ಅವರೆಲ್ಲಾ ಹೃದಯಾಘಾತಕ್ಕೀಡಾಗಿದ್ದರು’.

ಇದಕ್ಕೆ ಕಾರಣಗಳನ್ನು ಹುಡುಕಿದಾಗ, ಅವರೆಲ್ಲಾ ಆಟೋ ಅಥವಾ ಟ್ಯಾಕ್ಸಿ ಚಾಲಕರಾಗಿದ್ದು, ದಿನದ ಬಹುತೇಕ ಅವಧಿ ಸಂಚಾರದಟ್ಟಣೆಯಲ್ಲೇ ಕಳೆಯುತ್ತಿದ್ದರು. ಇದು ಹೃದಯಾಘಾತಕ್ಕೆ ಕಾರಣವಾಗಿದೆ. ಈ ರೋಗಿಗಳೊಂದಿಗೆ ಮಾತಿಗಿಳಿದಾಗ, ಸಾಮಾನ್ಯವಾಗಿ ಟ್ರಾಫಿಕ್‌ನಲ್ಲಿ ಈ ಚಾಲಕರು ಫ್ರೆಶ್‌ ಗಾಳಿಗಾಗಿ ಕಾರಿನ ಎಸಿ ಅನ್ನು ಆಫ್ ಮಾಡಿರುತ್ತಾರೆ.

ಇದರಿಂದ ಗಂಟೆಗಟ್ಟಲೆ ವಾಹನಗಳು ಉಗುಳುವ ಹೊಗೆ ಅವರ ಶರೀರ ಪ್ರವೇಶಿಸುತ್ತದೆ. ಇದರ ಪರಿಣಾಮ ಹೃದಯಾಘಾತಕ್ಕೀಡಾಗುತ್ತಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು. ಇದು ಕೇವಲ ಜಯದೇವ ಆಸ್ಪತ್ರೆಗೆ ಸೀಮಿತವಾಗಿಲ್ಲ. ನಗರದ ಬಹುತೇಕ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆಗಳಲ್ಲೂ ಇದೇ ಮಾದರಿಯ ಹೃದಯಾಘಾತ ಪ್ರಕರಣಗಳಿವೆ. 

ಹೃದಯಾಘಾತ ಮಾತ್ರವಲ್ಲ ಮಧುಮೇಹ, ಆಟಿಸಂ, ಬುದ್ಧಿಮಾಂದ್ಯತೆ ಸೇರಿದಂತೆ ಮತ್ತಿತರ ಕಾಯಿಲೆಗಳ ಪ್ರಮಾಣವೂ ಏರಿಕೆಯಾಗಿದೆ. ಆದರೆ, ಇಂತಿಷ್ಟೇ ಎಂದು ಹೇಳುವುದು ಕಷ್ಟ. ಇನ್ನು ಅದೇ ರೀತಿ, ಶೇ. 25ರಷ್ಟು ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ. ನಿರಂತರ ಕೆಮ್ಮಿನಿಂದ ಬಳಲುತ್ತಿರುವವರ ಸಂಖ್ಯೆ ಕಳೆದ ಒಂಧೂಳುವರೆ ದಶಕದಲ್ಲಿ ದುಪ್ಪಟ್ಟಾಗಿದೆ. ಇದೆಲ್ಲದಕ್ಕೂ ಕಾರಣ ಪಿಎಂ 2.5 (ಉಸಿರಾಡಲ್ಪಡುವಾಗ ದೇಹ ಸೇರಲ್ಪಡುವ ಧೂಳುಳಿನ ಕಣಗಳು) ಎಂದು ಶ್ವಾಸಕೋಶ ತಜ್ಞ ಡಾ.ಎಚ್‌. ಪರಮೇಶ ತಿಳಿಸುತ್ತಾರೆ.

ಬೈಸಿಕಲ್‌ ಏರಬೇಡಿ…!: ನಗರದಲ್ಲಿ ಕಾಲ್ನಡಿಗೆ ಮತ್ತು ಬೈಸಿಕಲ್‌ ಸವಾರಿ ಅಪಾಯಕಾರಿ ಎನ್ನುತ್ತಾರೆ ವೈದ್ಯರು! ಪ್ರಮುಖ ರಸ್ತೆಗಳು ಮತ್ತು ಸಿಗ್ನಲ್‌ಗ‌ಳಲ್ಲಿ ವಾಯುಮಾಲಿನ್ಯದ ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಇದರಿಂದ ಬಚಾವಾಗಲು ನಗರದ ಪ್ರಮುಖ ರಸ್ತೆಗಳಲ್ಲಿ ಬೈಸಿಕಲ್‌ನಲ್ಲಿ ಓಡಾಟ ಮತ್ತು ಕಾಲ್ನಡಿಗೆಯಲ್ಲಿ ಸಂಚರಿಸದಿರುವುದು ಒಳ್ಳೆಯದು. ಹೀಗೆ ಹೇಳುವುದು ತುಂಬಾ ಕಷ್ಟ. ಆದರೆ, ಅನಿವಾರ್ಯ ಕೂಡ. ಸಂಚಾರದಟ್ಟಣೆ ತಗ್ಗಿಸುವುದು ತುರ್ತು ಅವಶ್ಯಕತೆ ಇದೆ ಎಂಧೂಳು ವರದಿಯಲ್ಲಿ ತಿಳಿಸಲಾಗಿದೆ. 

ಪಿಎಂ2.5 ಯಾವುದರ ಪಾಲು ಎಷ್ಟು?
-ವಾಹನಗಳು- ಶೇ. 26.5
-ಧೂಳುಳು- ಶೇ. 23
-ಕೈಗಾರಿಕೆ- ಶೇ. 2.1
-ವಸತಿ ಪ್ರದೇಶ- ಶೇ. 9.9
-ಕಸ ಸುಡುವುದರಿಂದ- ಶೇ. 16.1
-ಡೀಸೆಲ್‌ ಜನರೇಟರ್‌ ಸೆಟ್‌- ಶೇ. 4.0

ಪಿಎಂ 2.5- 2015ಕ್ಕೆ    2030ಕ್ಕೆ (ಟನ್‌ನಲ್ಲಿ)
-ವಾಹನಗಳು- 12,550    19,050
-ಧೂಳುಳು- 6,400    11,700
-ವಸತಿ- 2,050    2,400
-ಕೈಗಾರಿಕೆ- 2,650    4,750
-ಕಸ ಸುಡುವಿಕೆ- 3,500    5,50
-ಡೀಸೆಲ್‌ ಜನರೇಟರ್‌- 1,250    1,450

ಶೇ. 93ರಷ್ಟು ಮಕ್ಕಳು: ಜಗತ್ತಿನಲ್ಲಿರುವ ಶೇ. 93ರಷ್ಟು ಮಕ್ಕಳು ನಿತ್ಯ ಸಣ್ಣ ಗಾತ್ರದ ಧೂಳುಳಿನ ಕಣ (ಪಿಎಂ2.5)ಗಳನ್ನು ಸೇವಿಸುತ್ತಿದ್ದಾರೆ. ಇದು ಅವರ ಶ್ವಾಸಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಟ್ಟಾರೆ ಶೇ. 93ರಷ್ಟು ಮಕ್ಕಳಲ್ಲಿ 63 ಕೋಟಿ 5 ವರ್ಷದ ಒಳಗಿನ ಹಾಗೂ 1.8 ಬಿಲಿಯನ್‌ ಮಕ್ಕಳು 15 ವರ್ಷದ ಒಳಗಿನವರಾಗಿದ್ದಾರೆ. ಈಚೆಗೆ ಜಿನೆವಾದಲ್ಲಿ ನಡೆದ ವಾಯುಮಾಲಿನ್ಯ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ ಕುರಿತು ನಡೆದ ಮೊದಲ ಜಾಗತಿಕ ಸಮಾವೇಶದಲ್ಲಿ ಇದನ್ನು ಸ್ವತಃ ವಿಶ್ವಸಂಸ್ಥೆ ತಿಳಿಸಿದೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.