ಹಬ್ಬದ ಸಂಭ್ರಮಕ್ಕೆ ಸೀರೆಯ ಮೆರುಗು


Team Udayavani, Nov 2, 2018, 12:45 PM IST

2-november-10.gif

ಹಬ್ಬಕ್ಕೂ ಸೀರೆಗೂ ಅದೇನೊ ನಂಟು. ಹಬ್ಬ ಬಂತೆಂದರೆ ಸಾಕು ಹೆಣ್ಮಕ್ಕಳು ಸಹಿತ ಮಹಿಳೆಯರವರೆಗೂ ಸೀರೆ ಖರೀದಿಸಲು ಮನಸ್ಸು ಮಾಡುತ್ತಾರೆ. ನವನವೀನ ವಿನ್ಯಾಸಗಳನ್ನು ಹುಡುಕಿ ಆಯ್ಕೆ ಮಾಡುವ ಚಾಕಚಾಕ್ಯತೆ ಬೆಳೆಸಿಕೊಳ್ಳುತ್ತಾರೆ. ಸೀರೆ ಉಡುಗೊರೆ ಕೊಡುವುದೆಂದರೆ ಮತ್ತೂ ಖುಷಿ. ಹೊಚ್ಚ ಹೊಸ ಮಾದರಿಯ ಸೀರೆಗಳೇ ಈಗಿನ ಫೇವರೆಟ್‌ ಹಬ್ಬ-ಹರಿದಿನಗಳು ಬಂತೆಂದರೆ ಸಾಕು ಜೀನ್ಸ್‌ ತೊಟ್ಟು ಮಿನುಗುತ್ತಿದ್ದ ಯುವತಿಯರು, ಮಹಿಳೆಯರು ಸಾಂಪ್ರದಾಯಿಕ ಧಿರಿಸಿನತ್ತ ಮುಖ ಮಾಡುತ್ತಾರೆ. ಹಬ್ಬಕ್ಕೆ ಸಾರಿ ಉಟ್ಟು ಸ್ವಲ್ಪ ಸ್ಟೈಲಿಶ್‌ ಆಗಿ ಕಾಣಬೇಕು ಅಂದುಕೊಳ್ಳುತ್ತಾರೆ. ಅದಕ್ಕಾಗಿ ವಿನೂತನ ಶೈಲಿಯ ಹೊಸ ಟ್ರೆಂಡಿ ಸೀರೆಗಳ ಆಯ್ಕೆ ಮಾಡಿಕೊಳ್ಳಲು ಉತ್ಸುಹರಾಗುತ್ತಾರೆ.

ಯುವತಿಯರು ಹಾಗೂ ಮಹಿಳೆಯರಿಗೆ ಸೀರೆಯ ಮೇಲಿನ ವ್ಯಾಮೋಹ ಹಬ್ಬಗಳನ್ನು ಹೊರತುಪಡಿಸಿಯೂ ಇರುತ್ತದೆ. ಈ ಕಾರಣದಿಂದಲೇ ಹೊಸ ಟ್ರೆಂಡಿ ಸೀರೆಗಳು ದಿನಕ್ಕೊಂದರಂತೆ ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತದೆ. ಪ್ರಸ್ತುತ ಸುಂದರವಾದ ಸೀರೆಯ ಡಿಸೈನ್‌ಗಳು ಚಾಲ್ತಿಯಲ್ಲಿದೆ. ಸಿನೆಮಾ ಸೇರಿದಂತೆ ರಿಯಾಲಿಟೋ ಶೋಗಳಲ್ಲಿ ನಟಿಯರು ಧರಿಸುವ ಸೀರೆಗಳನ್ನು ನೋಡಿ ಅದೇ ವಿನ್ಯಾಸಗಳಲ್ಲಿ ಸೀರೆಗಳ ಖರೀದಿಗೆ ಯುವತಿಯರು ಮುಂದಾಗುತ್ತಾರೆ. ದಸರಾ ಸಂಭ್ರಮ ಮುಗಿದಿದೆ. ದೀಪಗಳ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಹಬ್ಬಕ್ಕಾಗಿ ಹೊಸ ಮಾದರಿಯ ಸೀರೆಗಳ ಖರೀದಿಗೆ ಹಂಬಲಿಸುವವರು ಈ ಸೀರೆಗಳನ್ನು ನೋಡಬಹುದು.

ರಫಲ್ಡ್‌ ಸಾರಿ
ಈ ಬಾರಿ ಸೀರೆಯ ಲೋಕದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದ ರಫಲ್ಡ್‌ ಸೀರೆಗಳು ನೋಡಲು ಆಕರ್ಷಕವಾಗಿ ಕಾಣುತ್ತದೆ.

ಬೆಲ್ಟ್ ಹೊಂದಿರುವ ಸೀರೆಗಳು
ಪ್ರಸ್ತುತ ಹೊಸ ಟ್ರೆಂಡಿ ಸೀರೆಗಳಲ್ಲಿ ಬೆಲ್ಟ್ ಧರಿಸುವ ಫ್ಯಾಷನ್‌ ಆರಂಭಗೊಂಡಿದೆ. ಸಿಂಪಲ್‌ ಸಾಫ್ಟ್‌ ಫ್ಯಾನ್ಸಿ ವಿಧದ ಸೀರೆಗಳಿಗೆ ಅದಕ್ಕೊಪ್ಪುವ ಬೆಲ್ಟ್ ಧರಿಸಿ ಸಂಭ್ರಮಿಸಲಾಗುತ್ತಿದೆ. ರೇಷ್ಮೆ, ಕಾಟನ್‌ ಸಾರಿಗಳನ್ನು ಹೊರತುಪಡಿಸಿ ಮಾಡರ್ನ್ ಲುಕ್‌ ಇರುವ ಸೀರೆಗಳಿಗೆ ಮಾತ್ರವೇ ಬೆಲ್ಟ್ ಧರಿಸಬಹುದಾಗಿದೆ.

ಪೆಪ್ಲಮ್‌ ಬ್ಲೌಸ್‌ನ ಸೀರೆಗಳು
ಪೆಪ್ಲಮ್‌ ಬ್ಲೌಸ್‌ನಲ್ಲಿ ಸೀರೆಗಿಂತ ಬ್ಲೌಸ್‌ ಆಕರ್ಷಣೀಯವಾಗಿರುತ್ತದೆ. ಸುಂದರ ಸೀರೆಗೆ ಶರ್ಟ್‌ ತರಹದ ಬ್ಲೌಸ್‌ಗಳನ್ನು ಧರಿಸಲಾಗುತ್ತದೆ. ಇದನ್ನು ಸೀರೆಯ ಮೇಲ್ಮಾಗಕ್ಕೂ ಧರಿಸಲಾಗುತ್ತದೆ.

ಜಾಕೆಟ್‌ ಮಾದರಿಯ ಸೀರೆಗಳು
ಇದರಲ್ಲಿ ಸೀರೆಗೆ ಧರಿಸುವ ಬ್ಲೌಸ್‌ಗಳು ಜಾಕೆಟ್‌ ಮಾದರಿಯಲ್ಲಿ ಆವರಿಸಿಕೊಳ್ಳುತ್ತದೆ. ಹಾಗಾಗಿ ಸೀರೆಗಿಂತ ಬ್ಲೌಸ್‌ ಹೆಚ್ಚು ಆಕರ್ಷಣೀಯವಾಗಿರುತ್ತದೆ. ಟೀ ಶರ್ಟ್‌ ಮೇಲೆ ಓವರ್‌ ಕೋಟ್‌ ಧರಿಸಿದಂತೆ ಸೀರೆಯ ಬ್ಲೌಸ್‌ ಇರುತ್ತದೆ.

ಸೀರೆಯೊಂದಿಗೆ ಪ್ಯಾಂಟ್‌
ಸಂಪ್ರದಾಯ ಪ್ರತಿಬಿಂಬಿಸುವ ಸೀರೆಗಳಿಗೆ ಮಾಡರ್ನ್ ಲುಕ್‌ ನೀಡುವ ಪ್ರಯತ್ನ ಫ್ಯಾಷನ್‌ ಲೋಕದಲ್ಲಿ ನಡೆಯುತ್ತಿದೆ. ಸೀರೆಯನ್ನು ಪ್ಯಾಂಟ್‌ ನೊಂದಿಗೆ ಧರಿಸುವ ನಟಿಯರನ್ನು ಕಾಣಬಹುದಾಗಿದೆ. ಬಹುತೇಕ ಸಿನೆಮಾ ನಟಿಯರ ಪಾರ್ಟಿಗಳಲ್ಲಿ ಇಂತಹ ಟ್ರೆಂಡ್‌ ಕಾಣಿಸಿಕೊಳ್ಳುತ್ತಿದೆ.

ಸೀರೆಗಳ ಆಯ್ಕೆ ಹೀಗಿದ್ದರೆ ಚೆಂದ 
 ರೇಷ್ಮೆ , ಕಾಟನ್‌ ಸಿಲ್ಕ್, ರಾ ಸಿಲ್ಕ್ ಸೀರೆ ಸೆಲೆಕ್ಟ್ ಮಾಡಿಕೊಳ್ಳಿ.
 ನಿಮಗೆ ಯಾವುದರಲ್ಲಿ ಹೆಚ್ಚು ಕಂಫರ್ಟ್‌ ಇರುತ್ತೋ ಅದನ್ನು ಆಯ್ಕೆ ಮಾಡಿ
 ಕ್ಯಾರಿ ಮಾಡಲು ಬಾರದೇ ಇರಿಸು ಮುರಿಸು ಉಂಟಾಗೋ ಅಲಂಕಾರ ಬೇಡ.
 ಇತ್ತೀಚೆಗೆ ಕಲಂಕಾರಿ ಹೆಚ್ಚು ಟ್ರೆಂಡ್‌ ಆಗಿದೆ. ಅದರಲ್ಲಿ ನಾನಾ ವೆರೈಟಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಕಲಂಕಾರಿ ಬ್ಲೌಸ್‌ ಜತೆಗೆ ರೇಷ್ಮೆ ಸೀರೆ ಉಡುವುದು ಹೊಸ ಟ್ರೆಂಡ್‌
 ಮಧ್ಯ ವಯಸ್ಕರು ಆದಷ್ಟು ಪ್ರಿಂಟೆಡ್‌ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಂಡರೆ ಚೆಂದ.
 ಶ್ವೇತ ವರ್ಣದವರಿಗೆ ಗಾಢ ಬಣ್ಣ ಚೆನ್ನಾಗಿ ಕಾಣಿಸುತ್ತದೆ.
 ಉದ್ಯೋಗಸ್ಥರು ಎಲ್ಲ ಕಾಲದಲ್ಲೂ ಬಳಸಬಹುದಾದ, ವಿನ್ಯಾಸ ಇರುವಂತಹ ರೇಷ್ಮೆ ಸೀರೆ, ಲೈಟ್ಟ್‌ ವೇಯ್ಟ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಬ್ಲೌಸ್‌ ಆಯ್ಕೆಯೂ ಚೆನ್ನಾಗಿರಲಿ
ಸುಂದರ ಹಾಗೂ ಆಕರ್ಷಕ ಸೀರೆಗಳನ್ನು ಖರೀದಿಸಿದರೆ ಸಾಲದು ಅದಕ್ಕೆ ಒಪ್ಪುವಂತಹ ಬ್ಲೌಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸೀರೆ ಗಾಢ ಬಣ್ಣದಾಗಿದ್ದರೆ ಸೀರೆಯ ವಿರುದ್ಧ ದಿಕ್ಕಿನ ಬಣ್ಣದ ಬ್ಲೌಸ್‌ ಧರಿಸಿಕೊಳ್ಳಬೇಕು. ಕ್ಲೋಸ್‌ಡ್‌ ನೆಕ್‌ ಇರೋ ಬ್ಲೌಸ್‌ಗಳೂ ಕೂಡ ಸಿಲ್ಕ್ ಸಾರಿಗಳಿಗೆ ಒಳ್ಳೆ ಲುಕ್‌ ನೀಡುತ್ತೆ. ಇಂತಹ ಬ್ಲೌಸ್‌ಗಳು ಸುಂದರವಾಗಿ ಕಾಣಿಸುವಂತೆ ಮಾಡುವುದರ  ಜತೆಗೆ ಸಿಲ್ಕ್ ಸಾರಿಯಲ್ಲೂ ಮಾಡರ್ನ್ ಲುಕ್‌ ಕೊಡಲಿದೆ. ಇದರೊಂದಿಗೆ ಹ್ಯಾಂಡ್‌ ಮೇಡ್‌ ಡಿಸೈನ್‌ ಹೊಂದಿರೋ ಬ್ಲೌಸ್‌ ಗಳು ಕೂಡ ಬೆಸ್ಟ್‌ ಆಯ್ಕೆಯಾಗಿರುತ್ತದೆ. ಸೀರೆಗಳು ಸಿಂಪಲ್‌ ಆಗಿದ್ರೆ ಡಿಸೈನರ್‌ ಬ್ಲೌಸ್‌ ಹಾಕೋ ಮೂಲಕ ಮಿಂಚಬಹುದು.

ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.