ವನ ರಕ್ಷಣೆಗೆ ನೆರವಾಗುವ ಹಸಿರು ಮರಕುಟುಕ 

Team Udayavani, Nov 3, 2018, 3:25 AM IST

85.jpg

ಗಾತ್ರದಲ್ಲಿ ಮೈನಾ ಹಕ್ಕಿಯನ್ನು ಹೋಲುವ ಹಸಿರು ಮರಕುಟುಕ, ತೋಟಗಳ ಸರಹದ್ದಿನಲ್ಲಿ, ಕಾಡುಗಳಲ್ಲಿ ಕಾಣಸಿಗುತ್ತದೆ.Little scaly belled green woodpecker (Picusxanthopygacus ) R
 ಕಾಂಡ ಕೊರಕ ಹುಳುಗಳನ್ನು ತಿಂದು ಹಾಕುವ ಮೂಲಕ ಇದು ಕಾಡಿನ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. 

 ಇದರ ಹೊಟ್ಟೆ ಮತ್ತು ಎದೆಯ ಭಾಗದಲ್ಲಿ ಚೌಕಾಕಾರದ ಕಪ್ಪು ಬಣ್ಣದ ಚಿತ್ತಾರ ಇದೆ. ರೆಕ್ಕೆಯ ಮೇಲ್ಭಾಗವು ತಿಳಿ ಪಾಚಿ ಹಸಿರಿನ ಬಣ್ಣ ಇರುತ್ತದೆ. ಇದರಿಂದ ಇದಕ್ಕೆ ಹಸಿರು ಮರಕುಟುಕ ಎಂಬ ಹೆಸರು ಬಂದಿದೆ. ರೆಕ್ಕೆಯ ಅಂಚಲ್ಲಿ ಬಿಳಿ ಮತ್ತು ಕಪು ³ಚಿತ್ತಾರ ಇದೆ. ಹಾರುವಾಗ ಈ ಬಣ್ಣ ಎದ್ದುಕಾಣುತ್ತದೆ. ಕುತ್ತಿಗೆ ಪಕ್ಕದಲಿ, Éಕಪ್ಪು, ಬಿಳಿ ಬಣ್ಣದ ಚಿತ್ತಾರ ಇರುತ್ತದೆ. ಶಿಖೆ ಮತ್ತು ಜುಟ್ಟುಇದೆ. ಕೆಂಪು ಜುಟ್ಟಿನ ಬುಡದಲ್ಲಿ ಕಪ್ಪು ರೇಖೆ ಕಾಣುತ್ತದೆ.  ಬಾಲದ ಬುಡದಲ್ಲಿ ಮೇಲ್ಭಾಗದಲ್ಲಿ ತಿಳಿ ಹಳದಿ ಬಣ್ಣ, ಬಾಲದ ಪುಕ್ಕದಲ್ಲಿರುವ ಕಪ್ಪು ಬಿಳಿ ಬಣ್ಣದ ಚೌಕಟಿ ಚಿತ್ತಾರ ಇದರ ಅಂದ ಹೆಚ್ಚಿಸಿದೆ. ಸುಮಾರು 29 ಸೆಂ.ಮೀ ದೊಡ್ಡದಿದ್ದು, ಇದು, ಮೈನಾ ಹಕ್ಕಿಯಷ್ಟು ಗಾತ್ರದ ಪ್ರಾದೇಶಿಕ ಹಕ್ಕಿ. ಚುಂಚು ಬುಡದಲ್ಲಿ ತಿಳಿ ಹಳದಿ, ತುದಿಯಲ್ಲಿ ಅಚ್ಚ ಬೂದು ಮಿಶ್ರಿತ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿಯ ಜುಟ್ಟು ಕಪ್ಪಗಿರುತ್ತದೆ. ಮರಗಳ ಮೇಲೆ ಕುಪ್ಪಳಿಸುತ್ತದೆ. ಇಲ್ಲವೇ ಮರದ ಸುತ್ತಗಿರಕಿ ಹೊಡೆಯುತ್ತಾ , ಕಾಂಡ ಕೊರೆಯುವ ಹುಳುಗಳು ಹೊರ ಬರಲು ಅನವರತ ಮರಕುಟ್ಟುತ್ತಾ, ಹಾರುವಾಗ ಟ್ರೀರ್‌..ಟ್ರಿರ್‌ ಎಂದು ಕೂಗುತ್ತಾ ಇರುತ್ತದೆ.  ಒಂಟಿಯಾಗಿ ಇಲ್ಲವೇ ನಾಲ್ಕಾರರ ಗುಂಪಿನಲ್ಲಿ ವಿಫ‌ುಲವಾದ ದೊಡ್ಡ ಮರಗಳಿರುವ ಕಾಡಿನಲ್ಲಿ, ತೋಟದ ಸರಹದ್ದಿನಲ್ಲಿ ಕಾಣಸಿಗುತ್ತದೆ. ಮರಕುಟ್ಟುವ ಸಪ್ಪಳ ಇಲ್ಲವೇ ಇದು ಹುಳ ಹಿಡಿದಾಗ ಕೂಗುವ ದನಿಯಿಂದ ಇದರ ಇರುವನ್ನು ಸುಲಭವಾಗಿ ತಿಳಿಯಬಹುದು. 

  ಆಹಾರಕ್ಕಾಗಿ ಮರ ಕೊರೆವ ಹುಳು ಹಿಡಿಯುವುದರಿಂದ ಮರದರಕ್ಷಣೆ ಇಲ್ಲವೇ ಹುಳು ನಿಯಂತ್ರಣದಲ್ಲಿ ಇದರ ಪಾತ್ರದೊಡ್ಡದು.   ಹರಿಯಾಣ, ಗುಜರಾತ್‌, ಪಶ್ಚಿಮ ಬಂಗಾಲ, ಕರ್ನಾಟಕದ ಬೆಟ್ಟ ಪ್ರದೇಶ ಮತ್ತು ಬೆಂಗಳೂರಲ್ಲೂ ಕಂಡದ್ದುದಾಖಲಾಗಿದೆ.  ಕೇರಳದ ದಕ್ಷಿಣ ಭಾಗ, ಕರ್ನಾಟಕ ದಗಡಿ ಪ್ರದೇಶವಾದ ಕುಂಬಳ ಕಾಸರಗೋಡಿನಲ್ಲೂಕಾಣಸಿಗುತ್ತದೆ. ಕೆಲವೊಮ್ಮೆ ನೆಲದಮೇಲೆ ಓಡಾಡುತ್ತಾ ಅಥವಾ ಕುಪ್ಪಳಿಸುತ್ತ, ಗೆದ್ದಲು ಹುಳು, ಬತ್ತಾದ ಮರಗಳ ಕಾಂಡ ಇಲ್ಲವೇ ಒಣಗಿದ ತೆಂಗಿನ ಮರಗಳ ಮೇಲೂ ಕುಪ್ಪಳಿಸುತ್ತಾ ಹುಳ ಹಿಡಿಯುವುದನ್ನು ಕಾಣಬಹುದು. 

ಒರಲೆ ಹುತ್ತವನ್ನು ಚುಂಚಿನಿಂದ ಕುಟ್ಟಿ ಅಲ್ಲಿಂದ ಹಾರುವ ಹಾತೆ ಮತ್ತುಗೆದ್ದಲು ಹುಳಗಳ ಮೊಟ್ಟೆಯನ್ನುತಿನ್ನುತ್ತದೆ. 
ಮಧ್ಯಮ ವರ್ಗದ ಕಾಡು, ಅಡಿಕೆ, ತೆಂಗು, ಕಾಫಿ ತೋಟಗಳ ಹತ್ತಿರದ ಕಿರುಕಾಡು ಇವುಗಳಿಗೆ ಪ್ರಿಯ. ಇಲ್ಲಿ ಹಸಿರು ಮರ ಕುಟಕಕ್ಕೆ ವಿಫ‌ುಲವಾದ ಆಹಾರ, ಸುರಕ್ಷಿತ ನೆಲೆಗಳು ಸಿಗುತ್ತವೆ. ವಂಶಾಭಿವೃದ್ಧಿಗೆ, ಗೂಡು ಮಾಡಲು ಒಳ್ಳೆಯ ಮರದಕಾಂಡ ಹುಡುಕುತ್ತದೆ. ಜುಲೈ ನಿಂದ ಜನವರಿ ತಿಂಗಳ ಅವಧಿಯಲ್ಲಿ ಮರಿ ಹಾಕುತ್ತವೆ. 

  ಬಾರ್ಬೆಟ್‌, ಮರಕುಟುಕ ಕೊರೆದಗೂಡನ್ನೂ ಸಹ ಕೆಲವೊಮ್ಮೆ ಮೊಟ್ಟೆಇಡಲು ಉಪಯೋಗಿಸುವುದು. 4 ರಿಂದ 8 ಮೀಟರ್‌ ಎತ್ತರದಲ್ಲಿ ಗೂಡು ಕಟ್ಟುತ್ತವೆ. ಇದರಲ್ಲಿ 3-5 ಬಿಳಿಬಣ್ಣದ ಮೊಟ್ಟೆಇಡುವುದು, ಗಂಡು, ಹೆಣ್ಣು ಸೇರಿ ಮರಿಗಳಿಗೆ ಗುಟುಕು ನೀಡುತ್ತದೆ. ಕಾಡಿನ ನಾಶದಿಂದಇಂತಹ ಸುಂದರ ಪಕ್ಷಿಗಳಿಗೆ ಇರುವ ನೆಲೆಕಡಿಮೆಯಾಗಿದೆ. ಅದೇ ಕಾರಣಕ್ಕೆ ಹಸಿರು ಮರಕುಟಕಗಳ ಸಂತಾನವೂ ಕಡಿಮೆಯಾಗುತ್ತಿದೆ. 

ಟಾಪ್ ನ್ಯೂಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.