ಯುಪಿಯನ್ನು ಹಿಮ್ಮೆಟ್ಟಿಸಿದ ತಲೈವಾಸ್
Team Udayavani, Nov 3, 2018, 6:00 AM IST
ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾ ಚರಣದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಅಜಯ್ ಠಾಕೂರ್ ನಾಯಕತ್ವದ ತಮಿಳ್ ತಲೈವಾಸ್ ತಂಡ ಯುಪಿ ಯೋಧಾಸ್ ತಂಡವನ್ನು 46-24 ಅಂಕಗಳ ಭಾರೀ ಅಂತರದಿಂದ ಸೋಲಿಸಿದೆ. ಆಟದ ಪ್ರತಿಯೊಂದು ವಿಭಾಗದಲ್ಲೂ ತಲೈವಾಸ್ ಸ್ಪಷ್ಟ ಮೇಲುಗೈ ಸಾಧಿಸಿತು.
ದಿನದ ದ್ವಿತೀಯ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ 36-25 ಅಂಕಗಳಿಂದ ಜೈಪುರ್ ಪಿಂಕ್ ಪ್ಯಾಂಥರ್ಗೆ ಸೋಲುಣಿಸಿತು. ತಮಿಳ್ ತಂಡದ ಪರ ಕನ್ನಡಿಗ ಸುಕೇಶ್ ಹೆಗ್ಡೆ ಸಖತ್ ಮಿಂಚಿದರು. ಅವರು 12 ದಾಳಿಗಳನ್ನು ನಡೆಸಿ 9 ಅಂಕ ಗಳಿಸಿದರು. ಇವರಿಗೆ ಬಲವಾದ ಬೆಂಬಲ ನೀಡಿದ ನಾಯಕ ಅಜಯ್ ಠಾಕೂರ್, ದಾಳಿ ಮೂಲಕ 9 ಅಂಕ ಗಳಿಸಿದರು. ಇವರಿಬ್ಬರ ಆಟ ತಮಿಳ್ ತಲೈವಾಸ್ ಮೇಲುಗೈಗೆ ಕಾರಣವಾಯಿಯಿತು. ಇವರಿಗೆ ರಕ್ಷಣೆಯಲ್ಲಿ ಮಂಜೀತ್ ಚಿಲ್ಲರ್ ನೆರವಾದರು. ಅವರು 14 ಯತ್ನಗಳಲ್ಲಿ 8 ಅಂಕ ಗಳಿಸಿದರು. ರಕ್ಷಣೆಯಲ್ಲೂ ತಮಿಳ್ ತಂಡ ಪ್ರಬಲವಾದ ಕೋಟೆ ಕಟ್ಟಿದ್ದರಿಂದ ಯುಪಿ ಪರದಾಡಿತು.
ಯುಪಿ ಪರ ಪ್ರಶಾಂತ್ ಕುಮಾರ್ ರೈ ದಾಳಿಯಲ್ಲಿ ಮಿಂಚಿದರು. ಅವರು 12 ಬಾರಿ ತಮಿಳ್ ಕೋಟೆಗೆ ಕಾಲಿಟ್ಟು 7 ಅಂಕಗಳನ್ನು ಬುಟ್ಟಿಗೆ ಹಾಕಿದರು. ರಕ್ಷಣೆಯಲ್ಲಿ ಗಮನ ಸೆಳೆದದ್ದು ಜೀವ ಕುಮಾರ್ ಮಾತ್ರ. ಯುಪಿಗೆ ಹೊಡೆತವಾಗಿ ಪರಿಣಮಿಸಿದ್ದು ನಾಯಕ ರಿಷಾಂಕ್ ದೇವಾಡಿಗ ಅವರ ವೈಫಲ್ಯ. ರಿಷಾಂಕ್ ದಾಳಿಯಲ್ಲಿ ಪೂರ್ಣವಾಗಿ ವಿಫಲ ರಾದರು. ಒಂದೂ ಅಂಕ ಗಳಿಸಲು ಅವರಿಂದಾಗಲಿಲ್ಲ.
ಇದು ತಮಿಳ್ ತಂಡಕ್ಕೆ 9 ಪಂದ್ಯಗಳಲ್ಲಿ ಒಲಿದ ಮೂರನೇ ಜಯ. ಇನ್ನುಳಿದ 6 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನೊಂದೆಡೆ 8 ಪಂದ್ಯವಾಡಿರುವ ಯುಪಿಗೆ ಇದು 4ನೇ ಸೋಲು. ಅದು 3 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಟೈ ಆಗಿದೆ.
ಇಂದಿನ ಪಂದ್ಯಗಳು
ಯು ಮುಂಬಾ-ಪುಣೇರಿ 8 ಗಂಟೆ
ಯುಪಿ-ಬೆಂಗಳೂರು 9 ಗಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.