ತಿಂಗಳಾಡಿ -ಕಟ್ಟತ್ತಾರು ರಸ್ತೆ ಬದಿ ಮಾಂಸ ತ್ಯಾಜ್ಯ
Team Udayavani, Nov 4, 2018, 10:33 AM IST
ಕೆಯ್ಯೂರು: ಕುಂಬ್ರ-ತಿಂಗಳಾಡಿ-ಮಾಡಾವು ರಸ್ತೆಯ ತಿಂಗಳಾಡಿ-ಕಟ್ಟತ್ತಾರು ರಸ್ತೆಯ ಕಜೆ ಎನ್ನುವಲ್ಲಿ ಮಾಂಸ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದು, ಈ ರೀತಿ ಸಾರ್ವಜನಿಕ ತೊಂದರೆ ಉಂಟು ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಪರಿಸರದಲ್ಲಿ ರೋಗ ಭೀತಿ
ಈ ರೀತಿ ರಸ್ತೆಯಲ್ಲಿ ಕೋಳಿ ಹಾಗೂ ಇತರ ಮಾಂಸ ತ್ಯಾಜ್ಯಗಳನ್ನು ರಸ್ತೆ ಬದಿ ಎಸೆದು ಹೋಗುತ್ತಿರುವದರಿಂದ ಪರಿಸರದಲ್ಲಿ ದುರ್ನಾತ ಬೀರುತ್ತಿದ್ದು, ಜನರಿಗೆ ರೋಗ ಭೀತಿ ಎದುರಾಗಿದೆ. ರಾತ್ರಿ ಸಮಯದಲ್ಲಿ ವಾಹನಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಸುರಿದು ಹೋಗುತ್ತಿದ್ದಾರೆ.
ಸೂಕ್ತ ಕ್ರಮಕ್ಕೆ ಒತ್ತಾಯ
ಸಾರ್ವಜನಿಕ ರಸ್ತೆಯಲ್ಲಿ ಈ ರೀತಿಯಲ್ಲಿ ತ್ಯಾಜ್ಯ ಎಸೆದು ಪರಿಸರಕ್ಕೆ ಸಮಸ್ಯೆ ಉಂಟುಮಾಡುವ ಕಿಡೆಗೇಡಿಗಳ ವಿರುದ್ಧ ಸ್ಥಳೀಯಾಡಳಿತ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು. ಮುಂದೆ ಇಂತಹ ಸಮಸ್ಯೆ ಬಾರದ ರೀತಿಯಲ್ಲಿ ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೀದಿ ನಾಯಿಗಳ ಕಾಟ
ಈ ರಸ್ತೆಯ ಬದಿಯಲ್ಲಿ ಇರುವ ಮಾಂಸ ತ್ಯಾಜ್ಯಗಳನ್ನು ತಿನ್ನಲು ನಾಯಿಗಳ ಹಿಂಡೇ ಬರುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಅತ್ತಿಂದಿತ್ತ ಹೋಗುತ್ತಿರುವ ಬೀದಿ ನಾಯಿಗಳು ಕೆಲವೊಮ್ಮೆ ದ್ವಿಚಕ್ರ ವಾಹನದ ಹಿಂದೆ ಬೆನ್ನಟ್ಟಿಕೊಂಡು ಬರುತ್ತಿರುತ್ತವೆ. ಇದು ವಾಹನ ಸವಾರರಿಗೆ ಸಂಕಟವಾಗಿ ಪರಿಣಮಿಸಿದೆ.
ಸೂಚನೆ ಕೊಡಲಾಗಿದೆ
ರಸ್ತೆ ಬದಿ ತ್ಯಾಜ್ಯ ಎಸೆಯುವ ಕುರಿತು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಎಲ್ಲಕೋಳಿ ಹಾಗೂ ಮಾಂಸದ ಅಂಗಡಿಯವರಿಗೆ ಸೂಚನೆ ಕೊಡಲಾಗಿದೆ. ಆದರೂ ಯಾರು ಎಸೆದು ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ಆ ಭಾಗದಲ್ಲಿ ಸಿಸಿ ಕೆಮರಾ ಅಳವಡಿಸವುದು ಕಷ್ಟ. ಈ ಕುರಿತು ಸಾರ್ವಜನಿಕರಿಗೆ ಯಾರು ತ್ಯಾಜ್ಯ ಎಸೆಯುತ್ತಾರೆ ಎನ್ನುವ ಮಾಹಿತಿ ಇದ್ದಲ್ಲಿ ಗ್ರಾ.ಪಂ. ಗೆ ನೀಡಬಹುದು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಪ್ರವೀಣ್ ಶೆಟ್ಟಿ,
ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷರು
ಗೋಪಾಲಕೃಷ್ಣ ಸಂತೋಷನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.