ಸೆಂಟ್ರಲ್ ಮಾರ್ಕೆಟ್ ನಿಂದ ಹೊರಬರಲು ಸೂಕ್ತ ವ್ಯವಸ್ಥೆಯಾಗಬೇಕು
Team Udayavani, Nov 4, 2018, 12:39 PM IST
ಮಂಗಳೂರು ನಗರ ಮಾತ್ರವಲ್ಲ ಗ್ರಾಮೀಣ ಭಾಗದ ಹೆಚ್ಚಿನ ಜನರು ಹಣ್ಣು, ತರಕಾರಿ, ಮಾಂಸ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಸೆಂಟ್ರಲ್ ಮಾರ್ಕೆಟ್‌ಗೆ ಬರುತ್ತಾರೆ. ಇಲ್ಲಿ ಒಳ ಬರಲು ಮೂರು ದಾರಿಗಳಿವೆ.
1. ಲೇಡಿಗೋಷನ್ (ಟೌನ್‌ಹಾಲ್ ರಸ್ತೆ) ರಸ್ತೆ. 2. ಗಣಪತಿ ಹೈಸ್ಕೂಲ್ ರಸ್ತೆ (ಫೆಲಿಕ್ಸ್ ಪೈ ಬಜಾರ್ ಬಳಿ), 3. ರಾಮಕಾಂತಿ ರೂಪವಾಣಿ ಟಾಕೀಸ್ ಮುಖಾಂತರ ಬರಬಹು ದಾದ ರಸ್ತೆ. ಆದರೆ ಇಲ್ಲಿ ಬಂದ ಜನರ ವಾಹನಗಳಿಗೆ ಹಂಪನಕಟ್ಟೆಗೆ ಹೋಗಲು ಇರುವುದು ಲೇಡಿಗೋಷನ್ ಮತ್ತು ಸೆಂಟ್ರಲ್ ಟಾಕೀಸ್ ಪಕ್ಕದಲ್ಲಿರುವ ರಸ್ತೆ ಮಾತ್ರ. ಇಲ್ಲಿ ಎಲ್ಲ ಕಡೆ ನೋ ಎಂಟ್ರೀ ರಸ್ತೆಗಳೇ ಇರುವುದರಿಂದ ಸೆಂಟ್ರಲ್ ಮಾರುಕಟ್ಟೆಗೆ ಬಂದವರು ಹೊರ ಹೋಗಲು ಪರದಾಡುವಂತಾಗಿದೆ.
ಮಾರ್ಕೆಟ್ ರಸ್ತೆಯಿಂದ ಬಂದವರು ಗಣಪತಿ ರಸ್ತೆ ಸೇರುವಂತಿಲ್ಲ. ಕಾರ್‌ಸ್ಟ್ರೀಟ್‌ನಿಂದ ಬರುವವರೂ ಕಲ್ಪನಾ ಸ್ವೀಟ್ ಕಡೆ ಹೋಗುವಂತಿಲ್ಲ. ಒಟ್ಟಿನಲ್ಲಿ ಇಲ್ಲಿ ಒಳರಸ್ತೆಗಳಲ್ಲಿ ಸಂಚಾರಕ್ಕಿಂತ ಗೊಂದಲಗಳೇ ಹೆಚ್ಚಾಗಿವೆ. ಜತೆಗೆ ವಾಹನ ಪಾರ್ಕಿಂಗ್ ಸಮಸ್ಯೆ, ಬೀದಿ ಬದಿ ವ್ಯಾಪಾರಸ್ಥರ ಹಾವಳಿಯೂ ಹೆಚ್ಚಾಗಿದೆ.
ಒಟ್ಟಿನಲ್ಲಿ ಸೆಂಟ್ರಲ್ ಮಾರ್ಕೆಟ್ ಎಂಬ ಚಕ್ರವ್ಯೂಹದಿಂದ ಹೊರಬರಲು ಪಾದಚಾರಿಗಳು, ವಾಹನ ಸವಾರರು ಪರದಾಡಬೇಕಾಗಿದೆ. ಮಾರ್ಕೆಟ್‌ನಿಂದ ಮೈದಾನ (ಒಂದನೇ ಕ್ರಾಸ್‌ನಿಂದ ಒಂದು ಕ್ಲಾಕ್‌ಟವರ್) ರಸ್ತೆಗೆ ತಲು ಪಲು ಸಾಕಷ್ಟು ಸಾಹಸ ಪಡಬೇಕಾಗುತ್ತದೆ. ಕಾರಣ ಎರಡು ಬದಿಗಳಲ್ಲೂ ಬಿರುಸಿನ ವ್ಯಾಪಾರ ನಡೆಯುತ್ತಿರುವ ತಿನಿಸು ಹಾಗೂ ಇತರ ಅಂಗಡಿಗಳು, ಲಾರಿಗಳಿಂದ ಪಾರ್ಸೆಲ್‌ಗಳನ್ನು ಇಳಿಸುವುದು, ಪಕ್ಕದ ಅಂಗಡಿಗಳಿಗೆ ಸಾಗಿಸುವುದು, ಅದಲ್ಲದೇ ಅಂಗಡಿಗಳಿಂದ ಖರೀದಿಸಿದ ಮನೆ ಸಾಮಗ್ರಿ, ತಿನಿಸು ವಸ್ತುಗಳನ್ನು ಅವರವರ ವಾಹನಗಳಿಗೆ ಏರಿಸುವುದು, ತುಂಬಿಸುವುದು ಹೀಗೆ ಮತ್ತಿತರ ಕಾರ್ಯಗಳು ರಸ್ತೆಯಲ್ಲೇ ದಿನವೀಡಿ ಪುರುಸೊತ್ತಿಲ್ಲದ ಹಾಗೆ ನಡೆಯುತ್ತಿರುತ್ತವೆ. ಹಾಗಾಗಿ ದಿನಪೂರ್ತಿ ಲಾರಿ, ಟೆಂಪೋ, ಖಾಸಗಿ ವಾಹನಗಳು ಇಲ್ಲಿ ಯದ್ವಾತದ್ವ ಪಾರ್ಕ್ ಮಾಡಲಾಗಿರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಹೋಗುವುದೇ ಕಷ್ಟ ಎಂಬಂತಾಗಿದೆ. ಅಲ್ಲದೇ ರಸ್ತೆಪೂರ್ತಿ ಗುಂಡಿಗಳೇ ತುಂಬಿಕೊಂಡಿದ್ದು, ತಿಳಿಯದೇ ಒಳ ಹೋದರೆ ಅಪಾಯ ಖಂಡಿತ.
ಒಟ್ಟಿನಲ್ಲಿ ಸಾವಿರಾರು ಜನರು ಬಂದುಹೋಗುವ, ಅತ್ಯಂತ ಹೆಚ್ಚಿನ ವಾಣಿಜ್ಯ ವ್ಯವಹಾರಗಳು ನಡೆಯುತ್ತಿರುವ ಸೆಂಟ್ರಲ್ ಮಾರ್ಕೆಟ್‌ಗೆ ಒಳ ಹೋಗುವ ಮತ್ತು ಹೊರ ಬರುವ ರಸ್ತೆಗಳನ್ನು ಸರಿಯಾಗಿ ಗುರುತಿಸಬೇಕು. ಜತೆಗೆ ಜಿಲ್ಲಾಡಳಿತ, ಟ್ರಾಫಿಕ್ ಪೊಲೀಸ್ ಹಾಗೂ ಮನಪಾ ಅಧಿಕಾರಿಗಳು ಇಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲು ಕ್ರಮಕೈಗೊಳ್ಳಬೇಕಿದೆ.
ಜೆ.ಎಫ್.ಡಿ’ಸೋಜಾ,
ಅತ್ತಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
Parliment: ವಕ್ಫ್ ಜೆಪಿಸಿ ಕಾಲಾವಧಿ ಹೆಚ್ಚಳಕ್ಕೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬೆಂಬಲ
Parliment: ವಯನಾಡ್ ಲೋಕಸಭಾ ಸದಸ್ಯೆಯಾಗಿ ಇಂದು ಪ್ರಿಯಾಂಕಾ ಶಪಥ ಸಾಧ್ಯತೆ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದೆ: ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.