ರಗಡ್ ಲುಕ್ – ಖಡಕ್ ಡೈಲಾಗ್: Watch
Team Udayavani, Nov 4, 2018, 4:53 PM IST
“ಟಗರು’ ಚಿತ್ರದಲ್ಲಿ ಧನಂಜಯ್ ಮಾಡಿದ ಡಾಲಿ ಪಾತ್ರವನ್ನು ತುಂಬಾನೇ ಮೆಚ್ಚಿದ್ದ ರಾಮ್‌ಗೋಪಾಲ್ ವರ್ಮಾ ಅವರಿಗಾಗಿ “ಭೈರವ ಗೀತ’ ಚಿತ್ರವನ್ನು ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಿಸುತ್ತಿದ್ದು, ಈ ಹಿಂದೆ ಚಿತ್ರತಂಡ ಫಸ್ಟ್ ಲುಕ್ ಮತ್ತು ಟ್ರೈಲರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿತ್ತು.
ಅಲ್ಲದೇ ಧನಂಜಯ್ ಫಸ್ಟ್ ಲುಕ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 2.14 ನಿಮಿಷ ಹೊಂದಿರುವ ಟ್ರೈಲರ್, ಅದ್ಭುತವಾಗಿ ಮೂಡಿ ಬಂದಿದ್ದು. ಉತ್ತರ ಕರ್ನಾಟಕ ಸೊಗಡಿನ ಹೊಂದಿರುವ ದೃಶ್ಯ ಫುಲ್ ಥ್ರಿಲ್ಲಿಂಗ್ ಆಗಿದೆ.
ಸಮಾಜದ ಮೇಲು, ಕೀಳಿನ ತಾರತಮ್ಯದ ಮಧ್ಯೆ ಚಿತ್ರದಲ್ಲಿ ಲವ್ಸ್ಟೋರಿಯೊಂದನ್ನು ಕಾಣಬಹುದಾಗಿದೆ. ಟ್ರೈಲರ್ನಲ್ಲಿ ಧನಂಜಯ್ ಆ್ಯಕ್ಷನ್ ಭರ್ಜರಿಯಾಗಿದ್ದು, ರಗಡ್ ಲುಕ್ನಲ್ಲಿ ಕಂಗೊಳಿಸಿದ್ದಾರೆ. ಇನ್ನು ಭೈರವ ಗೀತ’ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿದ್ದು, ಧನಂಜಯ್ ಎದುರಿಗೆ ನಾಯಕಿಯಾಗಿ ಐರಾ ಮೋರಾ ನಟಿಸಿದ್ದಾರೆ.
ಭಾಸ್ಕರ್ ರಾಶಿ ಹಾಗೂ ರಾಮ್‌ಗೋಪಾಲ್ ವರ್ಮಾ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಮ್‌ಗೋಪಾಲ್ ವರ್ಮಾ ಶಿಷ್ಯ ಸಿದ್ದಾರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಜಜೀವನದಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಇನ್ನು ಈ ಚಿತ್ರ ರಾಶಿ ಕಂಬೈನ್ಸ್ ಹಾಗೂ ಕಂಪೆನಿ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿದೆ. ಹೆಸರಿಗೆ ತಕ್ಕಂತೆ ಇದೊಂದು ಔಟ್ ಅಂಡ್ ಔಟ್ ಲವ್‌ಸ್ಟೋರಿಯಾಗಿದ್ದು, ಪ್ರೀತಿಗಾಗಿ ಕ್ರೈಮ್‌ನತ್ತ ವಾಲುವ ಪ್ರೇಮಿಯೊಬ್ಬನ ಕಥೆಯನ್ನು ಹೊಂದಿದೆ.
#Siddhartha directed #BhairavaGeetha Kannada Trailer@dhananjayaka @Irra_Mor #BhairavaGeethaTrailer https://t.co/zmIZxxSDqO
— Ram Gopal Varma (@RGVzoomin) November 3, 2018
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.