ಸಾರ್ಲೋರ್‌ಲಕ್ಸ್ ಓಪನ್ ಫೈನಲ್ ಪ್ರವೇಶಿಸಿದ ಶುಭಂಕರ್
Team Udayavani, Nov 5, 2018, 6:15 AM IST
ಸಾರ್‌ಬ್ರುಕೆನ್ (ಜರ್ಮನಿ): ಭಾರತದ ಬ್ಯಾಡ್ಮಿಂಟನ್ ತಾರೆ ಶುಭಂಕರ್ ಡೇ ಚೀನದ ರೆನ್ ಪೆನೊಬ್ ಅವರನ್ನು ಸೋಲಿಸಿ “ಸಾರ್ಲೋರ್‌ಲಕ್ಸ್ ಓಪನ್ ಟೂರ್ನಿ’ಯ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಶುಭಂಕರ್ ಅವರು ರೆನ್ ಪೆನೊYಬ್ ವಿರುದ್ಧ 21-18, 11-21, 24-22 ಅಂತರದ ಗೆಲುವು ದಾಖಲಿಸಿದರು. ಮೊದಲ ಗೇಮ್‌ನ ಆರಂಭಲ್ಲಿ 3-2 ಅಂಕಗಳ ಮುನ್ನಡೆ ಹೊಂದಿದ್ದ ಶುಭಂಕರ್ ಸತತ 6 ಅಂಕಗಳನ್ನು ಗಳಿಸಿ ಮುನ್ನಡೆಯನ್ನು 9-2ಕ್ಕೆ ಏರಿಸಿದರು. 2ನೇ ಗೇಮ್‌ನ ಆರಂಭದಲ್ಲಿ 4-4ರ ಸಮಬಲ ಆಟ ಕಂಡುಬಂತು. ಬಳಿಕ ರೆನ್ ಸತತ 7 ಅಂಕಗಳನ್ನು ಸಂಪಾದಿಸಿ 11-4ಕ್ಕೆ ಮುನ್ನಡೆ ವಿಸ್ತರಿಸಿದರು. ಶುಭಂಕರ್ ಸಾಕಷ್ಟು ಪ್ರತಿರೋಧ ಒಡ್ಡುವ ಪ್ರಯತ್ನ ಮಾಡಿದರಾದರೂ ಸಫಲರಾಗಲಿಲ್ಲ.
ಈ ಸೋಲಿನಿಂದ ಎಚ್ಚೆತ್ತುಕೊಂಡ ಶುಭಂಕರ್ 3ನೇ ಗೇಮ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ 7-3 ಅಂಕಗಳ ಮುನ್ನಡೆ ಕಾಯ್ದುಕೊಂಡರು. ಇಬ್ಬರ ನಡುವೆ ಅಂಕ ಗಳಿಸಲು ತೀವ್ರ ಪೈಪೋಟಿಯೇ ನಡೆಯಿತು. ಒಂದರ ಹಿಂದೆ ಒಂದರಂತೆ ಇಬ್ಬರೂ ಅಂಕ ಗಳಿಸುತ್ತ ಬಂದರು. 20-18 ಮುನ್ನಡೆಯಲ್ಲಿದ್ದಾಗ ಶುಭಂಕರ್ ಮ್ಯಾಚ್ ಪಾಯಿಂಟ್ ಅವಕಾಶವನ್ನು ಕೈಚೆಲ್ಲಿದ್ದರು. ಅನಂತರ ಎರಡು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡು 24-22 ಅಂತರದಿಂದ ಜಯಿಸಿದರು.
ಮತ್ತೂಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಮಾಜಿ ಯೂರೋಪಿಯನ್ ಚಾಂಪಿಯನ್ ರಾಜೀವ್ ಔಸೆಫ್ ಅವರು ಟೆಮಾ ಜೂನಿಯರ್ ಪೊಪೋವ್ ಅವರನ್ನು 21-8, 19-21, 21-19 ಗೇಮ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ಶುಭಂಕರ್-ರಾಜೀವ್ ಮುಖಾಮುಖೀಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.