ಭಾರತೀಯ ಸೌರಭ್ ಅಮೆರಿಕ ಕ್ರಿಕೆಟ್ ತಂಡಕ್ಕೆ ನಾಯಕ!
Team Udayavani, Nov 5, 2018, 6:35 AM IST
ನವದೆಹಲಿ: ಕೆಲವೊಂದನ್ನು ಹಣೆಬರಹ, ವಿಧಿಲೀಲೆ ಎಂದು ವರ್ಣಿಸಲಾಗುತ್ತದೆ. ಅಂತಹದ್ದೇ ಒಂದು ಘಟನೆಯೀಗ ಸೌರಭ್
ನೇತ್ರಾವಲ್ಕರ್ ಎಂಬ ಸಾಫ್ಟ್ವೇರ್ ಎಂಜಿನಿಯರ್ ಜೀವನದಲ್ಲಿ ನಡೆದಿದೆ. ಈ ವ್ಯಕ್ತಿ ಮೊದಲು 19 ವಯೋಮಿತಿಯೊಳಗಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು, ಮುಂಬೈ ಪರ ಒಂದು ರಣಜಿ ಪಂದ್ಯವನ್ನೂ ಆಡಿದ್ದರು. ನಂತರ ಅದೆಲ್ಲ ಸಾಕು ಎಂದು ಅಮೆರಿಕದ ಕಾರ್ನೆಲ್ ವಿವಿಯಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಗಳಿಸಲು ತೆರಳಿ ದರು. ಅವರ ಕ್ರಿಕೆಟ್ ಜೀವನ ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದಾಗ ಸೌರಭ್ ಈಗ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ!
2010ರ 19 ವಯೋಮಿತಿ ವಿಶ್ವಕಪ್ ನ್ಯೂಜಿಲೆಂಡ್ನಲ್ಲಿ ನಡೆದಿತ್ತು. ಆಗ ಭಾರತ ತೀರಾ ಕಳಪೆ ಪ್ರದರ್ಶನ ನೀಡಿ 6ನೇ ಸ್ಥಾನಿಯಾಗಿತ್ತು. ಅಂತಹ ಬೇಸರದ ಸನ್ನಿವೇಶದಲ್ಲಿ ಎಡಗೈ ಮಧ್ಯಮವೇಗಿ ಸೌರಭ್ ನೇತ್ರಾವಲ್ಕರ್ ತಂಡದಲ್ಲೇ ಗರಿಷ್ಠ ವಿಕೆಟ್ ಪಡೆದ ಸಾಧಕನೆನಿಸಿದ್ದರು. ಮುಂದೆ ಅವರು ಮುಂಬೈ ಪರ ಒಂದು ರಣಜಿ ಪಂದ್ಯವನ್ನೂ ಆಡಿದ್ದರು. ಅದೂ ಕರ್ನಾಟಕದ ವಿರುದ್ಧ. ತಮ್ಮ ಬೌಲಿಂಗ್ನಲ್ಲಿ 3 ವಿಕೆಟ್ ಗಳಿಸಿದರೂ ಅವರಿಗೆ ತಾನು ಕ್ರಿಕೆಟ್ನಲ್ಲಿ ನಿರೀಕ್ಷೆಗೆ ತಕ್ಕಷ್ಟು ಸಾಧನೆ ಮಾಡಿದ್ದೇನೆಂದು ಅನಿಸಲಿಲ್ಲ. ಆದ್ದರಿಂದ 2015ರಲ್ಲಿ ಅಮೆರಿಕಕ್ಕೆ ತೆರಳಿ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ತರಗತಿಗೆ ಸೇರಿಕೊಂಡರು.
ಆದರೂ ಅವರು ಕ್ರಿಕೆಟ್ ಅಭ್ಯಾಸವನ್ನು ಮಾತ್ರ ನಿಲ್ಲಿಸಲಿಲ್ಲ. ಪದವಿ ನಂತರ ಒರ್ಯಾಕಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೂ ಒಂದು ಕಡೆ ಕ್ರಿಕೆಟ್ನಲ್ಲೂ ತೊಡಗಿಸಿಕೊಂಡಿದ್ದರು. ಅದರ ಫಲ ಈಗ ಸಿಕ್ಕಿದೆ. ಅವರು ನಾಯಕರಾಗಿ ಆಯ್ಕೆಯಾಗಿರುವ ಈ ಹೊತ್ತಿನಲ್ಲಿ ಅಮೆರಿಕದಲ್ಲಿ ಕ್ರಿಕೆಟ್ ನಿಧಾನಕ್ಕೆ ಜನಪ್ರಿಯಗೊಳ್ಳುತ್ತಿದೆ. ಅಲ್ಲಿನ 48 ರಾಜ್ಯಗಳಲ್ಲಿ 400 ಲೀಗ್ಗಳಲ್ಲಿ 6000 ತಂಡಗಳು ಆಡುತ್ತವೆ. 2 ಲಕ್ಷ ಆಟಗಾರರು ಇಲ್ಲಿ ಪಾಲ್ಗೊಳ್ಳುತ್ತಾರೆ.
ಕ್ರಿಕೆಟ್ ಹುಚ್ಚು ಬಿಡಲಿಲ್ಲ: ಸೌರಭ್
ಕ್ರಿಕೆಟ್ ಸಾಕೆಂದು ಅಮೆರಿಕಕ್ಕೆ ತೆರಳಿದ್ದರೂ ಸೌರಭ್ಗೆ ಅದರ ಹುಚ್ಚಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಆದ್ದರಿಂದ ಅಲ್ಲೂ ಆಟ
ಮುಂದುವರಿಸಿದರು. ಅದನ್ನು ಸೌರಭ್ ವಿವರಿಸಿದ್ದು ಹೀಗೆ…
“ಕ್ರಿಕೆಟಿಗಾಗಿ 2 ವರ್ಷ ಮೀಸಲಿಟ್ಟೆ. ಆದರೆ ಮುಂದಿನ ಹಂತಕ್ಕೆ ಏರಲಾಗದ ಕಾರಣ ಕ್ರಿಕೆಟ್ ಬಿಟ್ಟು ವಿದ್ಯಾಭ್ಯಾಸಕ್ಕೆ ಗಮನಕೊಡಲು ಆರಂಭಿಸಿದೆ. ಅನಂತರ ಅಮೆರಿಕಕ್ಕೆ ತೆರಳಿ ವಿದ್ಯಾ ಭ್ಯಾಸ ಮುಂದುವರಿಸಲು ನಿರ್ಧರಿಸಿದೆ. ಆದರೆ ಕ್ರಿಕೆಟ್ ಹುಚ್ಚು ಕಡಿಮೆ ಆಗಲಿಲ್ಲ. ಓರ್ಯಾಕಲ್ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಸೇರಿಕೊಂಡು ಬಿಡುವಿನ ವೇಳೆ ಕ್ರಿಕೆಟ್ಗೆ ಗಮನ ಹರಿಸಲಾ ರಂಭಿಸಿದೆ. ಶುಕ್ರವಾರ ಸಹ ಆಟಗಾರನೊಂದಿಗೆ ಆμàಸ್ನಿಂದ ಬೇಗ ಹೊರಟು ಲಾಸ್ ಏಂಜಲೀಸ್ಗೆ ತೆರಳು ತ್ತಿದ್ದೆವು. ಅಲ್ಲಿ ಶನಿ ವಾರ 50 ಓವರ್ಗಳ ಆಟವನ್ನಾಡುತ್ತಿದ್ದೆವು. ಅಲ್ಲಿಂದ ರಾತ್ರಿ ಸಾನ್ ಫ್ರಾನ್ಸಿಕೋಗೆ ತೆರಳಿ ಅಲ್ಲಿ ಭಾನುವಾರ ಮತ್ತೆ 50 ಓವರ್ಗಳ ಆಟವನ್ನು ಆಡುತ್ತಿದ್ದೆವು.
ಸೋಮವಾರ ಮತ್ತೆ ಕೆಲಸಕ್ಕೆ ಮರಳುತ್ತಿದ್ದೆವು. ಆಯ್ಕೆಗಾರರ ಕಣ್ಣಿಗೆ ಬೀಳಲು ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ’ ಎಂದು ಸೌರಭ್ ತಿಳಿಸಿದ್ದಾರೆ. ಅಮೆರಿಕ ತಂಡ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ 3ನಲ್ಲಿ ಆಡಲು ಒಮಾನ್ಗೆ ತೆರಳಲಿದ್ದು, ಈ ಟೂರ್ನಿ 2023ರ ಏಕದಿನ ವಿಶ್ವಕಪ್ ಕೂಟದ ಅರ್ಹತಾ ಸುತ್ತುಗಳಲ್ಲಿ ಒಂದಾಗಿದೆ. ಅಮೆರಿಕ ತಂಡ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯುವುದು ಸೌರಭ್ ಅವರ ಕನಸು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.