ಭಾನುವಾರವೇ ಖರೀದಿ ಭರಾಟೆ
Team Udayavani, Nov 5, 2018, 12:20 PM IST
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ರಜಾ ದಿನವಾದ ಭಾನುವಾರದಿಂದಲೇ ಖರೀದಿ ಭರಾಟೆ ಜೋರಾಗಿದೆ.
ದೀಪಾವಳಿ ಹಬ್ಬದ ವಿಶೇಷವಾದ ಕಜ್ಜಾಯ ತಯಾರಿಕೆಗೆ ಬೇಕಾದ ಬೆಲ್ಲ, ಅಕ್ಕಿ, ಎಣ್ಣೆ, ತುಪ್ಪ, ದೇವರ ಪೂಜೆ-ಪುನಸ್ಕಾರಕ್ಕೆ ಹೂವು-ಹಣ್ಣು, ಮೊರ, ಕನ್ನಡಿ, ಬಾಚಣಿಗೆ, ಬಳೆ-ಬಿಚ್ಚೊಲೆ, ಕಾಡಿಗೆ, ಅರಿಶಿಣ-ಕುಂಕುಮ, ಶ್ರೀಗಂಧ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮತ್ತೂಂದಡೆ ದೀಪಾವಳಿ ವಿಶೇಷವಾದ ಪಟಾಕಿ ಖರೀದಿಯೂ ಸಾಗಿತ್ತು.
ಒಟ್ಟಾರೆ, ಮಾರುಕಟ್ಟೆಗಳಲ್ಲಿ ದೀಪಾವಳಿ ಹಬ್ಬದ ಕಳೆಕಟ್ಟಿತ್ತು. ಹಬ್ಬದ ಪ್ರಯುಕ್ತ ಹಾಪ್‌ಕಾಮ್ಸ್ ಮಳಿಗೆಗಳು ಹಾಗೂ ಮಾರುಕಟ್ಟೆಗಳಲ್ಲಿ ಹೂವು ಹಣ್ಣು ತರಕಾರಿಗಳ ಬೆಲೆಗಳಲ್ಲಿ ಏರಿಕೆಯಾಗದಿರುವುದು ಸಾರ್ವಜನಿಕರಿಗೆ ಸ್ವಲ ಸಮಾಧಾನ ತಂದಿದೆ.
ಆಕರ್ಷಣೆ: ಈ ವರ್ಷ ದೀಪಗಳು ಮಾರುಕಟ್ಟೆಗೆ ಬಂದಿದ್ದು, ಅಲಂಕಾರಿಕ ದೀಪಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ತೇಲುವ ದೀಪಗಳು, ಸಿನ್‌ಟೆಡ್ ದೀಪಗಳು, ಲ್ಯಾಂಪ್ ದೀಪಗಳಿಗೆ ಬೇಡಿಕೆ ಹೆಚ್ಚಿವೆ. ತುಳಸಿಕಟ್ಟೆ ದೀಪಗಳು, ಕೃಷ್ಣನ ದೀಪಗಳು, ಕಾರಂಜಿ ದೀಪಗಳು, ಗಣಪತಿ ವಿಗ್ರಹವಿರುವ ದೀಪಗಳು, ಕಲಂಕಾರಿ ದೀಪಗಳು, ಮಣ್ಣಿನ ಹಣತೆಗಳು ಹೆಂಗೆಳೆಯರ ಮನ ಸೆಳೆಯುತ್ತಿವೆ.
ಮಾರುಕಟ್ಟೆಗಳಲ್ಲಿರುವ ತರಹೇವಾರಿ ಆಕಾಶಬುಟ್ಟಿಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. 150 ರಿಂದ 600 ರೂ.ಗಳವರೆಗೂ ಆಕಾಶಬುಟ್ಟಿಗಳು ಲಭ್ಯವಿದ್ದು, ಬಂಗಾರದ ಬಣ್ಣದಲ್ಲಿ ವಜ್ರ, ಗೋಳಾಕರದಲ್ಲಿರುವುದೇ ವಿಶೇಷ.
ಹಣ್ಣು-ಕಾಯಿ ದರ (ಕೆಜಿಗೆ)
-ಏಲಕ್ಕಿಬಾಳೆ 70ರಿಂದ 80 ರೂ.
-ಪಚ್ಚಾಬಾಳೆ 25ರಿಂದ 30 ರೂ.
-ಸೇಬು 75ರಿಂದ 90 ರೂ.
-ಸಪೋಟ 80 ರೂ.
-ಮೂಸಂಬಿ 60 ರೂ.
-ದ್ರಾಕ್ಷಿ 100 ರೂ.
-ಕಿತ್ತಳೆ 50 ರೂ.
-ತೆಂಗಿನಕಾಯಿ ಜೋಡಿಗೆ 25ರಿಂದ 30 ರೂ.
ಹೂವುಗಳ ದರ (ಕೆಜಿಗೆ)
-ಮಲ್ಲೆಮೊಗ್ಗು 1 ಸಾವಿರ ರೂ.
-ಮಲ್ಲೆ 800 ರೂ.
-ಮಲ್ಲಿಗೆ 400 ರೂ.
-ಕಾಕಡ 300 ರೂ.
-ಸೇವಂತಿಗೆ 200 ರೂ.
-ಗುಲಾಬಿ 150 ರೂ.
ತರಕಾರಿ ಬೆಲೆ (ಕೆಜಿಗೆ)
-ಹುರುಳಿಕಾಯಿ 30 ರೂ.
-ಅವರೇಕಾಯಿ 60 ರೂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.