ಡಿಜಿಟಲ್‌ ಧೂತರು


Team Udayavani, Nov 6, 2018, 4:00 AM IST

digital.jpg

ಒಂದು ಕಡೆ ಜನರಲ್ಲಿ ಶಾಪಿಂಗ್‌ ಕ್ರೇಝ್ ಹೆಚ್ಚುತ್ತಿರುವಂತೆಯೇ, ಇನ್ನೊಂದು ಕಡೆಯಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕ್ಷೇತ್ರ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಉದ್ಯಮಪತಿಯಾಗಬೇಕೆನ್ನುವ ಸೃಜನಶೀಲರಿಗೆ ಅತ್ಯಂತ ಸೂಕ್ತವಾದ ಕ್ಷೇತ್ರವಿದು. ಅಲ್ಲದೆ, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನ ಅಭಿವೃದ್ಧಿಯೊಂದಿಗೆ ಈ ಕ್ಷೇತ್ರ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿದೆ…

ಯಾವುದೇ ಒಂದು ವಸ್ತುವನ್ನು ಜನರಿಗೆ ಪರಿಚಯಿಸುವ, ಅದರ ಕುರಿತು ತಿಳಿವಳಿಕೆ ನೀಡುವ, ಹೇಳಬೇಕೆಂದರೆ ಜಗತ್ತಿಗೇ ಜಾಹೀರು ಮಾಡುವ ಕ್ಷೇತ್ರ ಡಿಜಿಟಲ್‌ ಮಾರ್ಕೆಟಿಂಗ್‌. 

ತೆರೆ ಮೇಲಿನ ಸಂತೆ: ನಿಮಗೆ ತಾಜಾ ತರಕಾರಿ ಬೇಕೆ? ಹೊಸ ಬಟ್ಟೆ, ಶೂ, ಬೆಲ್ಟ್, ವಾಲೆಟ್‌, ಪರ್ಸ್‌, ಆಭರಣ?… ಏನೇ ಬೇಕಿದ್ದರೂ ಕುಳಿತಲ್ಲಿಯೇ ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಸರ್ಚ್‌ ಮಾಡಿ, ಅವು ಎಲ್ಲಿ ಅಗ್ಗವಾಗಿ ಸಿಗುತ್ತವೆ ಎಂದು ಹುಡುಕಬಹುದು. ಈಗಂತೂ ನಾವು ಬಳಸುವ ಬ್ರೌಸರ್‌ ಆ್ಯಪ್‌ ಕೂಡಾ ನಮ್ಮ ಸರ್ಚ್‌ಅನ್ನು ಆಧರಿಸಿ ಸಲಹೆಗಳನ್ನು ನೀಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ.

ಇದೆಲ್ಲಾ ಡಿಜಿಟಲ್‌ ಮಾರ್ಕೆಟಿಂಗ್‌ನ ಒಂದು ಭಾಗವಷ್ಟೆ. ಸಾಂಪ್ರದಾಯಿಕ ಮಾರ್ಕೆಟಿಂಗ್‌ನಂತೆಯೇ ಇದು ಕಾರ್ಯ ವಹಿಸುತ್ತದೆಯಾದರೂ ಇಲ್ಲಿ ಬಳಸುವ ತಂತ್ರಗಳು ಡಿಜಿಟಲ್‌ ಹತಾರಗಳು. ಇಲ್ಲಿ ತಂತ್ರಜ್ಞಾನದ ನೆರವಿನಿಂದ ಕ್ಷಿಪ್ರ ಗತಿಯಲ್ಲಿ ಸಾವಿರಾರು, ಲಕ್ಷಾಂತರ ಗ್ರಾಹಕರ ಮನೆ ಬಾಗಿಲು ತಟ್ಟುವುದು ಇದರಿಂದ ಸುಲಭ.

ವಿವಿಧ ಅಂಗಗಳು: ಒಂದು ಕಡೆ ಜನರಲ್ಲಿ ಶಾಪಿಂಗ್‌ ಕ್ರೇಝ್ ಹೆಚ್ಚುತ್ತಿರುವಂತೆಯೇ, ಇನ್ನೊಂದು ಕಡೆಯಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕ್ಷೇತ್ರ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇದು ಜಾಹೀರಾತು, ಕಂಟೆಂಟ್‌ ಕ್ರಿಯೇಷನ್‌, ಕಂಟೆಂಟ್‌ ಸ್ಟ್ರಾಟೆಜಿ ಮತ್ತು ಸಾಮಾಜಿಕ ಜಾಲತಾಣ ನಿರ್ವಹಣೆ ಕ್ಷೇತ್ರಗಳನ್ನೂ ಒಳಗೊಳ್ಳುತ್ತದೆ. ಅಲ್ಲದೆ ಮೊಬೈಲ್‌ ಮಾರ್ಕೆಟಿಂಗ್‌, ಸರ್ಚ್‌ ಇಂಜಿನ್‌ ಆಪ್ಟಿಮೈಜೇಷನ್‌ (SEO), ಸರ್ಚ್‌ ಇಂಜಿನ್‌ ಮಾರ್ಕೆಟಿಂಗ್‌ (SEM),

ಸಾಮಾಜಿಕ ಜಾಲತಾಣ, ಇ-ಕಾಮರ್ಸ್‌, ಇ-ಮೇಲ್‌ ಮಾರ್ಕೆಟಿಂಗ್‌, ಮಾರ್ಕೆಟಿಂಗ್‌ ಆಟೋಮೇಷನ್‌, ಕಂಟೆಂಟ್‌ ಮ್ಯಾನೇಜ್‌ಮೆಂಟ್‌ ಆಂಡ್‌ ಕ್ಯುರೇಷನ್‌, ವೆಬ್‌ ಡಿಸೈನ್‌ ಮತ್ತು ಡೆವಲೆಪ್‌ಮೆಂಟ್‌, ಕಾಪಿರೈಟಿಂಗ್‌ ಮತ್ತು ಎಡಿಟಿಂಗ್‌, ಅನಾಲಿಟಿಕ್ಸ್‌ ಹಾಗೂ ಮಾರ್ಕೆಟಿಂಗ್‌ ಸ್ಟ್ರಾಟೆಜಿ ಇವೆಲ್ಲವೂ ಡಿಜಿಟಲ್‌ ಮಾರ್ಕೆಟಿಂಗ್‌ನ ಒಂದು ಬಾಗವೇ ಆಗಿದೆ. ಉದ್ಯಮಪತಿಯಾಗಬೇಕೆನ್ನುವ ಸೃಜನಶೀಲರಿಗೆ ಅತ್ಯಂತ ಸೂಕ್ತವಾದ ಕ್ಷೇತ್ರಗಳಿವು. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನ ಅಭಿವೃದ್ಧಿಯೊಂದಿಗೆ ಈ ಕ್ಷೇತ್ರ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿದೆ.

ಯಾರು ಆಯ್ಕೆ ಮಾಡಿಕೊಳ್ಳಬಹುದು?: ಡಿಜಿಟಲ್‌ ಮಾರ್ಕೆಟಿಂಗ್‌ ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಮುಕ್ತಕ್ಷೇತ್ರ. ಆದುದರಿಂದ ಇಲ್ಲಿ ಟೆಕ್ಕಿಗಳಿಗೆ, ಸೃಜನಶೀಲರಿಗೆ ಮತ್ತು ಉದ್ಯಮಿಗಳಿಗೆ ವಿಪುಲವಾದ ಅವಕಾಶವಿದೆ. ಅಭ್ಯರ್ಥಿ ತನ್ನ ಆಸಕ್ತಿಯನುಸಾರ ಉಪವಿಭಾಗವನನ್ನು ಆರಿಸಿಕೊಂಡು ಆ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿ ನಂತರ ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿಯೇ ಬೇರೆ ಉಪವಿಭಾಗಗಳಲ್ಲಿ ಕೆಲಸ ನಿರ್ವಹಿಸಬಹುದು.

ಇದರಿಂದ ಈ ಕ್ಷೇತ್ರದ ಒಳ- ಹೊರಗು ತಿಳಿಯುತ್ತದೆ. ವೃತ್ತಿಯಲ್ಲಿ ಇನ್ನೂ ಮೇಲಕ್ಕೇರುವುದು ಇದರಿಂದ ಸಾಧ್ಯ. ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ, ಸೃಜನಶೀಲತೆ, ನಾಯಕತ್ವದ ಗುಣ, ಹೊಂದಿಕೊಳ್ಳುವ ಸ್ವಭಾವ, ವ್ಯಾವಹಾರಿಕ ಜಾnನ, ಇವು ಕ್ಷೇತ್ರ ಅಭ್ಯರ್ಥಿಯಿಯಿಂದ ಬಯಸುವ ಅಂಶಗಳು.

ತರಬೇತಿ: ನಿಮಗೆ ಈಗಾಗಲೇ ಮಾರ್ಕೆಟಿಂಗ್‌ ಮ್ಯಾನೇಜ್‌ಮೆಂಟ್‌ ತರಬೇತಿಯಾಗಿದ್ದರೆ, ಕಾಪಿರೈಟಿಂಗ್‌, ವೆಬ್‌ಡಿಸೈನ್‌, ವೆಬ್‌ ಡೆವಲೆಪ್‌ಮೆಂಟ್‌ ತರಬೇತಿಯಾಗಿದ್ದರೆ, ನೀವು ಹೆಚ್ಚಾ ಕಡಿಮೆ ಈ ಕ್ಷೇತ್ರಕ್ಕೆ ಸಿದ್ಧರಾದಂತೆಯೇ. ನಿಮ್ಮ ಈ ಕೌಶಲಗಳನ್ನು ಡಿಜಿಟಲ್‌ ಮಾರ್ಕೆಟಿಂಗ್‌ನ ಅಂಶಗಳಿಗೆ ಹೊಂದಿಸಬೇಕು ಅಷ್ಟೇ! ನಿಮ್ಮದೇ ಬ್ಲಾಗ್‌ ಪ್ರಾರಂಭಿಸಿ, ಫೇಸ್‌ಬುಕ್‌ ಗ್ರೂಪ್‌ಗ್ಳ ಜೊತೆ ಸಂಪರ್ಕದಿಂದಿರಬೇಕು.

ಡಿಜಿಟಲ್‌ ಮಾರ್ಕೆಟಿಂಗ್‌ ಕುರಿತು ತರಬೇತಿ ನೀಡುವ ಹಲವಾರು ಸಂಸ್ಥೆಗಳೂ ಸಿಗುತ್ತವೆ. ಅಲ್ಲಿಗೆ ಸೇರುವ ಮುನ್ನ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪರೀಕ್ಷಿಸತಕ್ಕದ್ದು. ಹೆಸರಿರುವ ಸಂಸ್ಥೆಗಳಿಂದ ಪಡೆದುಕೊಂಡ ತರಬೇತಿ ಪತ್ರ, ಡಿಪ್ಲೊಮಾ ಸರ್ಟಿಫಿಕೇಟ್‌ಗಳು ನಿಮ್ಮ ಅವಕಾಶದ ಬಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪ್ರಯತ್ನ ಆರಂಭಿಸಿ. ಗುಡ್‌ ಲಕ್‌!

* ರಘು ವಿ., ಪ್ರಾಂಶುಪಾಲರು

ಟಾಪ್ ನ್ಯೂಸ್

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.