ಚಂಡು ಹೂವಿಗೆ ಈಗ ಬಲು ಬೇಡಿಕೆ
Team Udayavani, Nov 5, 2018, 4:26 PM IST
ಗಜೇಂದ್ರಗಡ: ಚಂಡು ಹೂವಿಲ್ಲದೇ ದೀಪಾವಳಿ ಹಬ್ಬ ಕಳೆಗಟ್ಟುವುದೇ ಇಲ್ಲ. ಶೃಂಗಾರಕ್ಕೆ ಇದು ಬೇಕೆ ಬೇಕು. ದೀಪಗಳ ಹಬ್ಬದ ಪ್ರಮುಖ ಆಕರ್ಷಣೀಯ ಇದಾಗಿದ್ದು, ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬರಗಾಲದಲ್ಲೂ ಬೆಳೆದು ನಿಂತು ಜನರನ್ನು ತನ್ನತ್ತ ಸೆಳೆಯುತ್ತಿದೆ.
ದೀಪಾವಳಿ ಆಚರಣೆಗೆ ದಿನಗಣನೆ ಶುರುವಾಗಿದ್ದು, ಝಗಮಗಿಸುವ ಬೆಳಕಿನ ಹಬ್ಬದ ಸಡಗರಕ್ಕೆ ಚಂಡು ಹೂವಿನ ಚೆಲವು ಮತ್ತಷ್ಟು ಇಮ್ಮಡಿಗೊಳಿಸತ್ತದೆ. ಜತೆಗೆ ಲಕ್ಷ್ಮೀ ಪೂಜೆಗೆ ಮುಖ್ಯವಾಗಿ ಅಗತ್ಯವಾದ ಚಂಡು ಹೂ ರೈತರ ತೋಟದಲ್ಲಿ ಬೆಳೆದು ನಿಂತ್ತಿದೆ.
ಅಲಂಕಾರದಲ್ಲಿ ಅಗ್ರಸ್ಥಾನ: ದೀಪಾವಳಿ ಹಬ್ಬದಲ್ಲಿ ಅಂಗಡಿ, ಕಾರ್ಖಾನೆ, ಲಕ್ಷ್ಮೀ ಪೂಜೆ, ವಾಹನ ಅಲಂಕಾರಕ್ಕೆ ಚಂಡು ಹೂ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ಹಿಂದೆಯು ಸೇವಂತಿಯೂ ನಾವೇನು ಕಮ್ಮಿಯಿಲ್ಲ ಎನ್ನುವಂತೆ ವಿಶೇಷ ಸ್ಥಾನದಲ್ಲಿದೆ. ಈ ಹೂಗಳನ್ನು ಮಾಲೆಗಳನ್ನಾಗಿ ವಾಹನ, ಅಂಗಡಿ ಮುಂಗಟ್ಟುಗಳಿಗೆ ಬಳಸುತ್ತಾರೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಈ ಹೂವಿಗೆ ಎಲ್ಲಿಲ್ಲದ ಬೇಡಿಕೆಯಿದೆ.
ಉತ್ತಮ ಇಳುವರಿ ಆಶಾಭಾವನೆ: ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವುದರಿಂದ ಸಾಲ ಮಾಡಿ ಬಿತ್ತಿದ ಬೆಳೆ ಹಾಳಾಗಿ ಸಾಲದ ಕೂಪಕ್ಕೆ ಸಿಲುಕಿದ್ದ ರೈತರಿಗೆ ಪುಷ್ಪ ಕೃಷಿ ವರದಾನವಾಗುವ ಆಸೆ ಮೂಡಿಸಿದೆ. ಕೊಳವೆ ಬಾವಿ ಆಶ್ರಿತ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆದ ಚಂಡ ಹೂ ಅರಳಿವೆ. ಬೆಳಕಿನ ಹಬ್ಬ ಆಚರಣೆ ಸಂದರ್ಭದಲ್ಲಿ ಅಂಗಡಿಗಳ ಅಲಂಕಾರಕ್ಕೆ ಅಗತ್ಯವಿರುವ ಚಂಡು ಹೂವು ಎಕರೆಗೆ ಸುಮಾರು 4ರಿಂದ 5 ಕ್ವಿಂಟಲ್‌ಗೂ ಹೆಚ್ಚು ತೂಕದ ಹೂಗಳು ಈ ಬಾರಿ ಬರುವ ಲಕ್ಷಣಗಳು ಗೋಚರಿಸುತ್ತಿವೆ ಎನ್ನುವುದು ಚಂಡು ಹೂ ಬೆಳೆದ ರೈತರ ಮಾತಾಗಿದೆ.
ಅತ್ಯಂತ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಪುಷ್ಪ ಬೆಳೆ ಎಂದೆ ಪರಿಗಣಿಸಲ್ಪಟ್ಟ ಚಂಡು ಹೂ ಬರದ ಮಧ್ಯೆಯೂ ಸಮೃದ್ಧವಾಗಿ ಬೆಳೆದು ನಿಂತು ಈ ಬಾರಿಯ ದೀಪಾವಳಿಗೆ ಕಂಗೊಳಿಸುತ್ತಿದೆ. ಹೀಗಾಗಿ ಪಟ್ಟಣ ಹೊರವಲಯದ ವಿವಿಧೆಡೆ ಬೆಳೆದ ಚಂಡು ಹೂ ಬೆಳೆಗಾರರ ಬಳಿ ತೆರಳಿ ಎಕರೆ ಹೂ ಬೆಳೆಗೆ ಸಾವಿರಾರು ದರಕ್ಕೆ ಬೆಳೆಯನ್ನು ಗುತ್ತಿಗೆ ಪಡೆಯಲು ಮಾರಾಟಗಾರರು ಮುಗಿ ಬೀಳುತ್ತಿದ್ದಾರೆ.
ದೀಪಾವಳಿ ವೇಳೆ ಕೆಲ ರೈತರು ಪಟ್ಟಣ ಸೇರಿದಂತೆ ನಗರ ಪ್ರದೇಶಗಳ ರಸ್ತೆ ಪಕ್ಕದಲ್ಲಿ ನೇರವಾಗಿ ಜನತೆಗೆ ಮಾರಾಟ ಮಾಡಿ ಲಾಭಗಳಿಸಿಕೊಂಡು ತಾವೂ ಸಂಭ್ರಮದ ಹಬ್ಬ ಸವಿಯಲು ಕಾತುರರಾಗಿದ್ದಾರೆ. ಬೆಳಕಿನ ಹಬ್ಬದ ಸಡಗರಕ್ಕೆ ಚಂಡು ಹೂ, ಸೇವಂತಿ, ಮಲ್ಲಿಗೆ, ಕಾಕಡ ಹೂವಿನ ಚೆಲವು ಇಮ್ಮಡಿಗೊಳಿಸುವುದರ ಜತೆಗೆ ಪೂಜೆಗೆ ಮುಖ್ಯವಾದ ಚಂಡು ಹೂವಿನ ಕಲರವ ಕಂಪು ಈಗ ಎಲ್ಲೆಲ್ಲೂ ಮಿನುಗುತ್ತಿದೆ. ಈ ಬಾರಿ ಬಂಫರ್ ಫಸಲಿನ ಕನಸು ರೈತ ಸಮುದಾಯದಲ್ಲಿ ಮನೆ ಮಾಡಿದೆ.
ದೀಪಾವಳಿ ಹಬ್ಬಕ್ಕೆ ಚಂಡು ಹೂ ಬೇಕೆ ಬೇಕು. ಈ ಬಾರಿ ಒಂದು ಎಕರೆಯಲ್ಲಿ ಬೆಳೆದ ಚಂಡು ಹೂ ಉತ್ತಮವಾಗಿದೆ. ಹಬ್ಬಕ್ಕೆ ಇನ್ನೆರೆಡು ದಿನ ಬಾಕಿ ಇದೆ. ಹೂ ಕಟಾವು ಮಾಡಲು ಸಿದ್ಧತೆಯಲ್ಲಿದ್ದೇವೆ. ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರಬಹುದೆಂದು ಆಶಾಭಾವನೆ ಹೊಂದಿದ್ದೇವೆ.
.ಭೀಮಷಿ ಗುಗಲೋತ್ತರ,
ಚಂಡು ಹೂ ಬೆಳೆದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.