ಏಷ್ಯಾಡ್‌ ಚಿನ್ನ ಸ್ವಪ್ನಾಗೆ ಕಡೆಗೂ ಸಿಗಲಿದೆ ಸರಿಯಾದ ಶೂ

Team Udayavani, Nov 8, 2018, 6:00 AM IST

swapna-barman-shoes.jpg

ನವದೆಹಲಿ: ಈ ಬಾರಿ ಏಷ್ಯನ್‌ ಗೇಮ್ಸ್‌ನ ಹೆಪಾrಥ್ಲಾನ್‌ನಲ್ಲಿ ಬಂಗಾಳದ ಸ್ವಪ್ನಾ ಬರ್ಮನ್‌ ಚಿನ್ನ ಗೆದ್ದಿದ್ದು ಎಲ್ಲರಿಗೂ ಗೊತ್ತು. ಈ ಕ್ರೀಡೆಯಲ್ಲಿ ಭಾರತಕ್ಕೆ ಬಂದ ಮೊದಲ ಏಷ್ಯಾಡ್‌ ಪದಕವಿದು. ಆದರೆ ಸರಿಯಾದ ಶೂಗಳಿಲ್ಲದೇ ಅತ್ಯಂತ ನೋವಿನಲ್ಲಿ ಬರ್ಮನ್‌ ಸ್ಪರ್ಧಿಸಿದ್ದರೆನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಎರಡೂ ಪಾದಗಳಲ್ಲಿ 6 ಬೆರಳು ಹೊಂದಿರುವ ಬರ್ಮನ್‌ಗೆ ಬೇಕಾದಂತಹ ರೀತಿಯಲ್ಲಿ ಶೂ ತಯಾರಿಸಿಕೊಡಲು ಯಾವ ಕಂಪನಿಯೂ ಮನಸ್ಸು ಮಾಡಿರಲಿಲ್ಲ. ಇದೀಗ ಅಡಿಡಾಸ್‌ ಕಂಪನಿ ಆ ಹೊಣೆ ಹೊತ್ತುಕೊಂಡಿದ್ದು ಬರ್ಮನ್‌ಗೆ 7 ಜೊತೆ ಶೂ ನೀಡುವುದಾಗಿ ಘೋಷಿಸಿದೆ.

ಮಾಮೂಲಿಯಾಗಿ ಉತ್ಪಾದನೆಯಾಗುವ ಶೂಗಳು ಬರ್ಮನ್‌ಗೆ ಹೊಂದುವುದಿಲ್ಲ. ಎರಡೂ ಪಾದದಲ್ಲಿ ಒಂದು ಬೆರಳು ಹೆಚ್ಚಾಗಿರುವುದರಿಂದ ಇಂತಹ ಸ್ಥಿತಿ. ಅದಕ್ಕೆ ಪ್ರತ್ಯೇಕವಾಗಿ ಬರ್ಮನ್‌ಗಾಗಿಯೇ ತಯಾರಿಸಲ್ಪಟ್ಟ ಶೂಗಳು ಬೇಕು. ಏಷ್ಯಾಡ್‌ ಮುಗಿದು ಬರ್ಮನ್‌ ಚಿನ್ನ ಗೆದ್ದ ಮೇಲೆ ಈ ಸಮಸ್ಯೆ ಮುಗಿಯುವ ಲಕ್ಷಣ ಕಂಡಿದೆ. ಬರ್ಮನ್‌ ಜರ್ಮನಿಗೆ ತೆರಳಿ ಅಡಿಡಾಸ್‌ ಲ್ಯಾಬ್‌ನಲ್ಲಿ ಪಾದ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಸ್ವಪ್ನಾ ದೇಶದ ಹೆಮ್ಮೆ. ಆಕೆಗೆ ನೆರವು ನೀಡುವುದು ನಮ್ಮ ಕರ್ತವ್ಯ ಎಂದು ಅಡಿಡಾಸ್‌ ತಿಳಿಸಿದೆ. ಹೆಪಾrಥ್ಲಾನ್‌ನಲ್ಲಿ 7 ರೀತಿಯ ಕ್ರೀಡೆಗಳಿರುತ್ತವೆ. 7ರಲ್ಲೂ ನೀಡುವ ಒಟ್ಟಾರೆ ಫ‌ಲಿತಾಂಶ ಗಮನಿಸಿ ಪದಕ ನೀಡಲಾಗುತ್ತದೆ. ಅಡಿಡಾಸ್‌ ಏಳೂ ಕ್ರೀಡೆಗೆ ಪ್ರತ್ಯೇಕವಾಗಿ ಅನುಕೂಲವಾಗುವಂತೆ 7 ಪ್ರತ್ಯೇಕ ಶೂಗಳನ್ನು ತಯಾರಿಸುತ್ತಿದೆ. ಇನ್ನಾದರೂ ಬರ್ಮನ್‌ ದುಸ್ಥಿತಿ ನಿವಾರಣೆಯಾಗುತ್ತದೆನ್ನುವುದು ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯ.

ಏಷ್ಯಾಡ್‌ಗೂ ಮುನ್ನ ಬರ್ಮನ್‌ ಪಾದದ ಸ್ಥಿತಿ ಸುದ್ದಿಯಾಗಿತ್ತು. ಅತ್ಯಂತ ಹಳೆಯ ಶೂಗಳಲ್ಲಿ ಅವರು ಸ್ಪರ್ಧೆ ನಡೆಸಿದ್ದರು. ಕೆಲವು ಗೆಳೆಯರು ಆಕೆಗೆ ಈ ಬೆರಳನ್ನು ಕತ್ತರಿಸಿ ತೆಗೆಯಲೂ ಸಲಹೆ ನೀಡಿದ್ದರು. ಎಲ್ಲ ಸಮಸ್ಯೆಯನ್ನು ನುಂಗಿಕೊಂಡು ಪದಕ ಗೆದ್ದ ಬರ್ಮನ್‌ ತಮ್ಮ ಬೆರಳನ್ನು ಉಳಿಸಿಕೊಳ್ಳುವುದರ ಜೊತೆಗೆ ತಮಗೆ ಬೇಕಾದ ರೀತಿಯ ಶೂ ಪಡೆಯಲು ಯಶಸ್ವಿಯಾಗಿದ್ದಾರೆ.

ಟಾಪ್ ನ್ಯೂಸ್

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.