ಗಾಲೆ ಟೆಸ್ಟ್: ಇಂಗ್ಲೆಂಡ್ ಮೇಲುಗೈ
Team Udayavani, Nov 8, 2018, 6:05 AM IST
ಗಾಲೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನ ದ್ವಿತೀಯ ದಿನ ಅತಿಥೇಯ ಶ್ರೀಲಂಕಾ 203 ರನ್ಗಳಿಗೆ ಸರ್ವಪತನ ಕಂಡಿದೆ.
ಮೊದಲ ದಿನ 8 ವಿಕೆಟ್ ಕಳೆದುಕೊಂಡು 321 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ದ್ವಿತೀಯ ದಿನ ಇನ್ನಿಂಗ್ಸ್ ಮುಂದುವರಿಸಿ ಕೇವಲ 21 ರನ್ ಗಳಿಸಿ ತನ್ನಲ್ಲ ವಿಕೆಟ್ ಕಳೆದುಕೊಂಡಿತು. ಟೆಸ್ಟ್ನ ಮೊದಲ ದಿನ 87 ರನ್ ಸಂಪಾದಿಸಿ ಇಂಗ್ಲೆಂಡ್ಗೆ ಆಸರೆಯಾಗಿ ನಿಂತ ಫೋಕ್ಸ್ ಶತಕ ಬಾರಿಸಿ ಸಂಭ್ರಮಿಸಿದರು.
ಅನಂತರ ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಕರುಣಾರತ್ನೆ ಹಾಗೂ ಕುಶಲ್ ಸಿಲ್ವ ಒಂದಂಕಿಗೆ ನಿರ್ಗಮಿಸಿದರು. ಅಂತಿಮವಾಗಿ ಶ್ರೀಲಂಕಾ 203 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದ್ದರಿಂದ ಇಂಗ್ಲೆಂಡ್ ಮೇಲುಗೈ ಸಾಧಿಸಿತು.
ಎರಡನೇ ಇನ್ನಿಂಗ್ ಆರಂಭಿಸಿದ ಇಂಗ್ಲೆಂಡ್ 12 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 38 ಗಳಿಸಿದೆ. ಒಟ್ಟಾರೆ 177 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ರೋರಿ ಬರ್ನ್ಸ್ (11), ಕೀಟನ್ ಜೆನ್ನಿಂಗ್ಸ್ (26) ಕ್ರೀಸ್ನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.