ಕನ್ನಡ ಕಟ್ಟಿದ ಕವಿಸಂ
Team Udayavani, Nov 8, 2018, 12:30 AM IST
ಅದು ಮುಂಬೈ ಪ್ರಸಿಡೆನ್ಸಿಯ ಆಡಳಿತದ ಕಾಲ. ಅಲ್ಲೇನಿದ್ದರೂ ಮರಾಠಿ ಭಾಷಿಕರದ್ದೇ ಮೇಲುಗೈ. ಅವರು ಹೇಳಿದಂತೆ ಅಡಳಿತ ನಡೆಯಬೇಕು. ಕನ್ನಡ ಬರೀ ಮನೆಯ ಭಾಷೆ, ಸ್ವಾಭಿಮಾನ ಇದ್ದವರಿಗೆ ಮನದ ಭಾಷೆಯಾಗಿತ್ತು. ಒಬ್ಬ ಕವಿ ಕನ್ನಡದಲ್ಲಿ ಬರೆದು ಹಾಡುವುದಕ್ಕೆ ಹೊರಟರೆ ಆತನಿಗೆ ಕಲ್ಲು ಎಸೆಯುವ ಪುಢಾರಿಗಳಿದ್ದರು.
ಇಂತಿಪ್ಪ ಸಮಯದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಧಾರವಾಡದಲ್ಲಿ ರಾ.ಹ.ದೇಶ ಪಾಂಡೆ ಅವರು 1890, ಜುಲೈ,20 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ(ಕವಿಸಂ)ವನ್ನು ಆರಂಭಿಸಿದರು.
ವಿದ್ಯೆಯನ್ನು ವರ್ಧಿಸುವುದಕ್ಕೆ ಒಂದು ಸಂಘದ ಅಗತ್ಯ ಅಂದಿನ ದಿನಗಳಲ್ಲಿ ಈ ಭಾಗದ ಕನ್ನಡಿಗರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಮರಾಠಿ ಭಾಷೆಯ ದರ್ಪಕ್ಕೆ ಪ್ರತ್ಯುತ್ತರ ಕೊಡುವುದಕ್ಕೆ ಕನ್ನಡಿಗರೇ ಹಿಂದೇಟು ಹಾಕುವ ಸಂದರ್ಭದಲ್ಲಿ ಜನ್ಮ ತಳೆದ ಕವಿಸಂ ಬರೀ ಸಾಹಿತ್ಯ, ಸಂವಾದಕ್ಕೆ ಮಾತ್ರ ತನ್ನನ್ನು ಸೀಮಿತ ಮಾಡಿಕೊಳ್ಳಲೇ ಇಲ್ಲ.
ಕನ್ನಡ ಪುಸ್ತಕ ಓದುವ, ಬರೆಯುವ, ಬರೆದು ಹಾಡುವ, ಚರ್ಚೆ ಮಾಡುವ, ಸಂವಾದಕ್ಕೆ ಪ್ರತಿಯಾಗಿ ಪತ್ರಿಕೆಗಳಲ್ಲಿ ಕನ್ನಡದ ಸ್ವಾಭಿಮಾನ ಕೆರಳಿಸುವ ವಿಚಾರಗಳಿಗೆ ವಿದ್ಯಾವರ್ಧಕ ಸಂಘ ವೇದಿಕೆಯಾಗಿ ಮಾರ್ಪಾಟಾಯಿತು. ಕನ್ನಡವನ್ನು ಇಲ್ಲಿ ಧೈರ್ಯವಾಗಿ ಮಾತನಾಡುವ, ಹಾಡುವ ಮತ್ತು ಬರೆಯಲು ಬನ್ನಿ, ನಾವು ಬಳಪ ಕೊಡುತ್ತೇವೆ. ಪೆನ್ನು ಪುಸ್ತಕ ಸಿದ್ಧವಿದೆ ಎಂದು ಕೈ ಬೀಸಿ ಕರೆದು ಕನ್ನಡ ಭಾಷಾಭಿಮಾನವನ್ನು ಈ ನೆಲದಲ್ಲಿ ಗಟ್ಟಿಯಾಗಿ ಕಟ್ಟಿಕೊಡಲು ಕವಿಸಂ ಶ್ರಮಿಸುತ್ತ ಬಂದಿತು.
ಚಳವಳಿಗಳ ಗಂಗೋತ್ರಿ: ಕರ್ನಾಟಕ ವಿದ್ಯಾವರ್ಧಕ ಸಂಘ ಬರೀ ಸಾಹಿತ್ಯಕ್ಕೆ ಸೀಮಿತವಾಗಿದ್ದರೆ ಇಷ್ಟೊಂದು ಮಹತ್ವ ಪಡೆದುಕೊಳ್ಳುತ್ತಿರಲಿಲ್ಲವೇನೋ. ಬರುತ್ತ ಬರುತ್ತ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡು ಮುನ್ನಡೆದ ಕವಿಸಂ ಕನ್ನಡ ನಾಡು-ನುಡಿ ನೆಲ ಜಲದ ಸಮಸ್ಯೆಗಳ ಚರ್ಚೆ ಮತ್ತು ಹೋರಾಟಕ್ಕೆ ವೇದಿಕೆಯಾಯಿತು.
ಎಂಭತ್ತರ ದಶಕದಲ್ಲಿ ನಡೆದ ಗೋಕಾಕ ಚಳವಳಿ ಹುಟ್ಟುಕೊಂಡಿದ್ದೇ ಧಾರವಾಡದ ವಿದ್ಯಾವರ್ಧಕ ಸಂಘದ ವೇದಿಕೆಯ ಮೇಲೆ. ಆ ನಂತರ ನಡೆದ ಸಾಹಿತ್ಯ ಬಂಡಾಯ, ರೈತ ಚಳವಳಿ, ಕಳಸಾ-ಬಂಡೂರಿ ಹೋರಾಟದವರೆಗೂ ಎಲ್ಲದಕ್ಕೂ ಕರ್ನಾಟಕ ವಿದ್ಯಾವರ್ಧಕ ಸಂಘ ವೇದಿಕೆ ಒದಗಿಸಿತು. ಇಂದಿಗೂ ಸಹ ಇಲ್ಲಿ ಮೂರು ಸಭಾಭವನಗಳಿದ್ದೂ ಮೂರರಲ್ಲೂ ಪ್ರತಿದಿನ ಮುಂಜಾನೆ, ಸಂಜೆ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. ಸಾಹಿತ್ಯ, ಸಂಗೀತ, ಸಂಸ್ಕೃತಿ, ಕಲೆ, ಚಳವಳಿ, ಗಡಿ ಸಮಸ್ಯೆ, ನೀರು, ರೈತರ ಸಮಸ್ಯೆ ಒಂದೇ ಎರಡೇ ಎಲ್ಲದಕ್ಕೂ ವೇದಿಕೆ ಸಜ್ಜಾಗಿರುತ್ತದೆ.
ಪಡೆ ಹುಟ್ಟು ಹಾಕಿದ ನೆಲ :ಒಂದೆಡೆ ಪ್ರಬಲ ಮರಾಠಿ ಸಾಹಿತ್ಯ, ಇನ್ನೊಂದೆಡೆ ಕನ್ನಡವಿದ್ದರೂ ಅದೂ ಪ್ರತ್ಯೇಕ ಹಳೆ ಮೈಸೂರು ರಾಜ್ಯ. ಇದರ ಮಧ್ಯೆ ಕನ್ನಡವನ್ನು ಕಟ್ಟುವ ಕೆಲಸಕ್ಕೆ ಕಟ್ಟಾಳುಗಳ ಅಗತ್ಯವಿತ್ತು. ಈ ಎರಡು ಭಾಗದ ಹಿರಿಯ ಸಾಹಿತಿಗಳು, ಸಂಶೋಧಕರು ಮತ್ತು ಸಾಹಿತ್ಯಿಕ ಪ್ರಬುದ್ಧರಿಗೆ ಸೆಡ್ಡು ಹೊಡೆದು ನಿಲ್ಲುವ ಸಾಹಿತಿಗಳು, ನಾಟಕಕಾರರು, ಕವಿಗಳು ಕವಿಸಂನಲ್ಲಿ ಸಂವಾದಕ್ಕೆ ಕುಳಿತರು. ಡಾ|ಗಿರೀಶ್ ಕಾರ್ನಾಡ, ಪ್ರೊ|ಚಂಪಾ, ಡಾ|ಚಂದ್ರಶೇಖರ ಕಂಬಾರ, ಡಾ|ಎಂ.ಎಂ.ಕಲಬುರ್ಗಿ, ಡಾ|ಗಿರಡ್ಡಿ ಗೋವಿಂದರಾಜ್ ಸೇರಿದಂತೆ ನೂರಾರು ಯುವ ಸಾಹಿತಿಗಳು ವಿಭಿನ್ನ ಮಗ್ಗಲಲ್ಲಿ ಕೆಲಸ ನಿರ್ವಹಿಸಲು ಕವಿಸಂ ಚೈತನ್ಯ ತುಂಬಿದ್ದು ಅಷ್ಟೇ ಸತ್ಯ.
ಪಾಪು ಸುವರ್ಣಾಧಿಕಾರಿ: ಇನ್ನು ಕವಿಸಂನ ಮೊದಲ ಅಧ್ಯಕ್ಷರು ರಾ.ಹ.ದೇಶಪಾಂಡೆ ಅವರು. ನಂತರ ಅನೇಕರು ಆಗಿ ಹೋದರೂ, 70ರ ದಶಕದಿಂದ ಹಿರಿಯ ಪತ್ರಕರ್ತ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರೇ ಅಧ್ಯಕ್ಷರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರ ಅಧ್ಯಕ್ಷ ಗಿರಿಗೆ ಇದೀಗ 50 ವರ್ಷಗಳು ತುಂಬಿವೆ. 2018ರಲ್ಲಿ ನಡೆದ ಚುನಾವಣೆಯಲ್ಲೂ ಮತ್ತೆ ಅವರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಒಟ್ಟಿನಲ್ಲಿ ಇಂದು ಧಾರವಾಡವು ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ರಾಜಧಾನಿಯಾಗುವುದಕ್ಕೆ ಕಾರಣವಾಗಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘ. ಕನ್ನಡ ಭಾಷೆ, ನೆಲ, ಜಲ, ಸ್ವಾಭಿಮಾನ ಮತ್ತು ಕನ್ನಡತನ ಈ ನೆಲದಲ್ಲಿ ಗಟ್ಟಿಯಾಗಿ ಬೇರೂರಲು ನೀರೆರೆದಿದ್ದು ಇದೇ ಕವಿಸಂ ಎಂದರೆ ಅತಿಶಯೋಕ್ತಿಯಾಗಲಾರದು.
– ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
ದಿ| ದಾಮೋದರ ಆರ್. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.