ಸವಣೂರು ಕೃಷಿ ಇಲಾಖೆಯ ಕಟ್ಟಡಕ್ಕೆ ಬೇಲಿ
Team Udayavani, Nov 8, 2018, 3:07 PM IST
ಸವಣೂರು: ಸವಣೂರು ಮುಖ್ಯ ಪೇಟೆಯ ಸಮೀಪವೇ ಇರುವ ಕೃಷಿ ಇಲಾಖೆಯ ಕಟ್ಟಡವು ಯಾವುದೇ ಉಪಯೋಗವಿಲ್ಲದೆ ಅನಾಥವಾಗಿ ಪಾಳು ಬಿದ್ದಿತ್ತು. ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಉದಯವಾಣಿ ಸುದಿನ ಅ. 10ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.
ಕೃಷಿ ಇಲಾಖೆಯ ಜಾಗದಲ್ಲಿ ಖಾಸಗಿಯವರು ಮಾರ್ಗ ನಿರ್ಮಾಣ ಮಾಡಿದ್ದರು. ಆದರೂ ಈ ಕುರಿತು ಇಲಾಖೆ ಯಾವುದೇ ಗಮನ ಹರಿಸಿರಲಿಲ್ಲ. ಈ ವಿಚಾರವನ್ನು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ತಡವಾಗಿ ಎಚ್ಚೆತ್ತ ಕೃಷಿ ಇಲಾಖೆ ತನ್ನ ಜಮೀನಿಗೆ ಬೇಲಿ ಅಳವಡಿಸಿಕೊಂಡಿದೆ. ಬೇಲಿ ಅಳವಡಿಕೆ ಸಂದರ್ಭ ಕಡಬ ಹೋಬಳಿ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ, ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ಸದಸ್ಯರಾದ ಗಿರಿಶಂಕರ ಸುಲಾಯ, ಸತೀಶ್ ಬಲ್ಯಾಯ, ಸತೀಶ್ ಅಂಗಡಿಮೂಲೆ ಭೇಟಿ ನೀಡಿ ಪರಿಶೀಲಿಸಿದರು.
ಕಟ್ಟಡ ಉಪಯೋಗವಾಗಲಿ
ಕೃಷಿ ಇಲಾಖೆ ತನ್ನ ಜಮೀನಿಗೆ ಬೇಲಿ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ. ಹಾಗೆಯೇ ಪಾಳು ಬಿದ್ದ ಎರಡು ಸರಕಾರಿ ಕಟ್ಟಡಗಳು ಶೀಘ್ರ ದುರಸ್ತಿ ಭಾಗ್ಯ ಕಂಡು ಸದುಪಯೋಗವಾಗಬೇಕು ಎನ್ನುವುದು ಸಾರ್ವಜನಿಕರ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.