ಹನುಮಂತ ದೇವಸ್ಥಾನಕ್ಕಿದೆ ವಿಶೇಷ ಇತಿಹಾಸ 


Team Udayavani, Nov 8, 2018, 4:30 PM IST

8-november-20.gif

ಲಕ್ಷ್ಮೇಶ್ವರ: ಪಟ್ಟಣದ ಕೇಂದ್ರ ಭಾಗದ ಮುಖ್ಯ ಬಜಾರ್‌ದಲ್ಲಿ ದಕ್ಷಿಣಾಭಿಮುಖವಾಗಿ ಇರುವ ಹನುಮಂತ ದೇವರ ದೇವಸ್ಥಾನಕ್ಕೆ ವಿಶೇಷವಾದ ಇತಿಹಾಸವಿದೆ. ಪುಲಿಗೆರೆ(ಲಕ್ಷ್ಮೇಶ್ವರ)ಯ ಇತಿಹಾಸದಲ್ಲಿ ಈ ಹಾವಳಿ ಹನುಮಂತ ದೇವರ ದೇವಸ್ಥಾನಕ್ಕೆ ತನ್ನದೇ ಆದ ವಿಶೇಷತೆಯಿದ್ದು, ಅತ್ಯಂತ ಜಾಗೃತ ದೇವಸ್ಥಾನವಾಗಿದೆ. ಹಲವಾರು ವರ್ಷಗಳ ಹಿಂದೆ ಪಟ್ಟಣದಲ್ಲಿ ಪ್ಲೇಗ್‌, ಕಾಲರಾ, ಮಲೇರಿಯಾಗಳು ಕಾಡುತ್ತಿರುವ ಕಾಲದಲ್ಲಿ ನಿತ್ಯ ಸಾವು ನೋವುಗಳು ಸಂಭವಿಸುತ್ತಿದ್ದವಂತೆ. ಈ ಸಂದರ್ಭದಲ್ಲಿ ಊರಿನ ಜನರು ಹನಮಂತ ದೇವರನ್ನು ಪ್ರಾರ್ಥಿಸಿ ರೋಗಗಳ ಹಾವಳಿ ತಡೆಗಟ್ಟಿ ಕಾಪಾಡುವಂತೆ ಬೇಡಿಕೊಂಡಾಗ ಜನರನ್ನು ರೋಗದಿಂದ ರಕ್ಷಣೆ ಮಾಡಿದ ಐತಿಹ್ಯ ಹಾವಳಿ ಹನಮಂತ ದೇವರಿಗಿದೆ. ಅಲ್ಲದೆ ಅಂದಿನ ದಿನಗಳಲ್ಲಿ ಕಳ್ಳಕಾಕರ ಹಾವಳಿಯು ಹೆಚ್ಚಾಗಿದ್ದ ಸಂದರ್ಭದಲ್ಲಿ ಭಕ್ತರ ಮೊರೆ ಆಲಿಸಿ ಅದನ್ನು ನಿಯಂತ್ರಿಸಲು ಸ್ವತಃ ಹನಮಂತ ದೇವರೇ ಕಳ್ಳರ ಹಾವಳಿ ತಡೆಗಟ್ಟಲು ರಾತ್ರಿಯ ವೇಳೆ ಪಹರೆ ಮಾಡಿ ದುಷ್ಟರನ್ನು ಶಿಕ್ಷಿಸುತ್ತಿದ್ದನಂತೆ. ಒಟ್ಟಿನಲ್ಲಿ ಭಕ್ತರಿಗೆ ಬರುವ ಕಷ್ಟ, ತೊಂದರೆಗಳನ್ನು ನಿವಾರಿಸಿ ಪರಿಹರಿಸಲು ನೆಲೆನಿಂತ ಹನಮಪ್ಪನ ಮಹಿಮೆ ಅಪಾರ.

ಭಕ್ತರ ಕನಸಿನಲ್ಲಿ ಬಂದ ಹನಮಂತ ಪಟ್ಟಣದಲ್ಲಿ ಇದೇ ಪ್ರದೇಶದಲ್ಲಿ ದೇವಸ್ಥಾನ ಸ್ಥಾಪಿಸುವಂತೆ ಆಜ್ಞಾಪಿಸಿದ್ದರಿಂದ ನಿರ್ಮಿಸಿದ ದೇವಸ್ಥಾನದಲ್ಲಿ ಬಂದು ನೆಲೆಗೊಂಡನೆಂದು ಪ್ರತೀತಿ ಇದೆ. ಅಂದಿನ ದಿನಗಳಲ್ಲಿ ಇಲ್ಲಿನ ಕುಂಬಾರ ಮತ್ತು ಹತ್ತಿಕಾಳ ಮನೆತನದವರಿಂದ ಪೂಜೆ ಪುನಸ್ಕಾರಗಳು ವ್ಯವಸ್ಥಿತವಾಗಿ ನಡೆದುಕೊಂಡು ಬಂದಿವೆ. ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲು ತೀರ್ಮಾನಿಸಿದ ಭಕ್ತ ಮಂಡಳಿ 2012ರಲ್ಲಿ 1.5 ಕೋಟಿ ರೂ.ಗಳ ವೆಚ್ಚದಲ್ಲಿ ವಿಶೇಷವಾದ ಕಲ್ಲಿನಿಂದ ಸುಂದರವಾದ ದೇವಸ್ಥಾನ ಪುನರ್‌ ನಿರ್ಮಾಣ ಮಾಡಲಾಗಿದೆ. ದಿ| ವೇ| ರುದ್ರಯ್ಯನವರು ಪುರಾಣಿಕಮಠ ಇವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸೇವಾ ಕಾರ್ಯದಿಂದ ದೇವಸ್ಥಾನ ಹೊಸ ಸ್ವರೂಪ ಹೊಂದಿದ್ದು, ನಿತ್ಯ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಮತ್ತು ಶನಿವಾರ ವಿಶೇಷ ಅಲಂಕಾರಿಕ ಪೂಜೆ ನೆರವೇರಿ ಪಟ್ಟಣದ ಎಲ್ಲ ವರ್ಗದ ಜನರು ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ.

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ

Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ

ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ

ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.