ಶಾಂತಿದೂತನ ನೆನಪಲ್ಲಿ ಹಾಡಿನ ಸಂಜೆ
Team Udayavani, Nov 9, 2018, 6:00 AM IST
ಶಾಂತಿ, ಸತ್ಯ ಮತ್ತು ಅಹಿಂಸೆಯ ಮಹತ್ವ ಸಾರಿದ ಗಾಂಧೀಜಿಯ ನೂರೈವತ್ತನೆ ಜಯಂತಿಯಂದು ಮಂದಾರ(ರಿ.), ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ, ಬೈಕಾಡಿ, ಬ್ರಹ್ಮಾವರ ಇವರು ಸಾಲಿಕೇರಿಯ ಅಂಬೇಡ್ಕರ್ ಭವನದಲ್ಲಿ ಹಾಡಿನ ಸಂಜೆ ಎನ್ನುವ ಹೊಸತನದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆರಂಭದಲ್ಲಿ ಸುಮಾ ಆಚಾರ್, ಬೀಜಾಡಿ ಅವರು “ಹಾಡು ಕೋಗಿಲೆ ಗಾನ ಸುಮಧುರ….’ (ರಚನೆ: ಕೆ. ಸೀತಾರಾಮ ಭಟ್ಟ) ಮತ್ತು ರಕ್ಷಾ ಭಟ್, ಬನ್ನಾಡಿಯವರು “ನನ್ನ ಹರಣ ನಿನಗೆ ಶರಣ….’ (ರಚನೆ: ಬಿ. ಆರ್. ಲಕ್ಷಣ ರಾವ್) ಹಾಡುಗಳನ್ನು ಸೊಗಸಾಗಿ ಪ್ರಸ್ತುತಪಡಿಸಿದರು.
ಮುಂದೆ ರಾಘವೇಂದ್ರ ಬಿ. ಶೆಟ್ಟಿಗಾರ್‌ರವರು ಜಿ. ಎಸ್. ಶಿವರುದ್ರಪ್ಪ ಅವರ ರಚನೆಯಾದ “ಕಾಣದ ಕಡಲಿಗೇ….’ ಹಾಡನ್ನು ಹಾಡಿದರೆ, ರಂಗಕರ್ಮಿ ವಿನಾಯಕ ಎಸ್. ಎಂ. ಅವರು ಹಯವದನ ನಾಟಕದ “ಬಂದಾನೋ ಬಂದಾ ಸವಾರ….'(ರಚನೆ: ಗಿರೀಶ್ ಕಾರ್ನಾಡ್) ಎನ್ನುವ ಸೊಗಸಾದ ರಂಗಗೀತೆಯನ್ನು ಹಾಡಿ ಮನ ರಂಜಿಸಿದರು. ನಂತರ ಸುಮಾ ಅವರು “ಲೋಕದ ಕಣ್ಣಿಗೆ ರಾಧೆಯು ಕೂಡಾ…’ (ರಚನೆ: ಎಚ್. ಎಸ್. ವೆಂಕಟೇಶಮೂರ್ತಿ) ಹಾಡನ್ನು ಹಾಗೂ ರûಾ ಅವರು ಕವಿ ಗೋಪಾಲಕೃಷ್ಣ ಆಡಿಗರ ” ಆಗು ನೀನು ಇಬ್ಬನಿ ನೆಲೆಸುವ ಹೂವು….’ ಹಾಡಿ ಮುದ ನೀಡಿದರು. ಹಾಗೆಯೇ ರಾಘವೇಂದ್ರ ಅವರು ಸುಬ್ರಾಯ ಚೊಕ್ಕಾಡಿಯವರ ” ಮುನಿಸು ತರವೇ….’ ಮತ್ತು ಕುವೆಂಪು ಅವರ ” ಓ ನನ್ನ ಚೇತನಾ….’ ಹಾಡುಗಳನ್ನು ಭಾವಪೂರ್ಣವಾಗಿ ಹಾಡಿದರೆ, ವಿನಾಯಕ ಅವರು ಮೈಸೂರು ರಾಜ್ಯದ ದೊರೆ ರಣಧೀರ ಕಂಠೀರವ ಇವರ ಸಾಹಸ ಮತ್ತು ಶೌರ್ಯವನ್ನು ಹೊಗಳುವ ” ಮೈಸೂರು ರಾಜ್ಯದ ದೊರೆಯೇ….’ ಮತ್ತು ಬಿ. ವಿ. ಕಾರಂತರು ಮೈಸೂರಿನಲ್ಲಿ ರಂಗಾಯಣ ಕಟ್ಟುವ ಆರಂಭದಲ್ಲಿ ರಚಿಸಿದ ” ಗೋವಿಂದ ಮುರ ಹರ ಗೋವಿಂದಾ…’ ಹಾಡನ್ನು ಹಾಡಿ ಪ್ರೇಕ್ಷಕರೂ ದನಿಗೂಡಿಸುವಂತೆ ಪ್ರೇರಣೆ ನೀಡಿದರು. ಕೊನೆಯಲ್ಲಿ ಸುಮಾ ಮತ್ತು ರûಾ ಜೊತೆಯಾಗಿ ನಮ್ಮ ಹಿರಿಯರು ನಮ್ಮ ಒಳಿತಿಗಾಗಿ ಮಾಡಿದಂತಹ ವ್ಯವಸ್ಥೆಗಳ ಕುರಿತಾದ ಒಂದು ಬಗೆಯ ಜನಪದ ಶೈಲಿಯ “ಶರಣಯ್ಯ ಶರಣು ಶರಣಯ್ಯ…’ ಹಾಡನ್ನು ಹಾಡಿದ್ದು, ವಿನಾಯಕ ಅವರು ಹಾಡಿದ ಕೆ.ವಿ. ತಿರುಮಲೇಶ್ವರರ ” ದಾರಿ ತಪ್ಪಿದನೊಬ್ಬ ಬ್ರಾಹ್ಮಣ…’ (ರಾಗ ಸಂಯೋಜನೆ: ಗುರುರಾಜ ಮಾರ್ಪಳ್ಳಿ) ಹಾಡು ಮಾರ್ಮಿಕವಾಗಿತ್ತು. ಅಂತಿಮವಾಗಿ ಭೂಮಿಕಾ (ರಿ.), ಹಾರಾಡಿ ರಂಗ ತಂಡದ ವಿಕ್ರಂ, ರೋಷನ್ ಮತ್ತು ರೋಹಿತ್ ಇವರುಗಳ ಅಲ್ಲಾವುದ್ದೀನನ ಮಾಯಾದೀಪ ನಾಟಕದ ” ಹುಯ್ಯಹೋ.. ಹುಯ್ಯಹೋ…’ ಹಾಡಿಗೆ ಎಲ್ಲರೂ ದನಿಗೂಡಿಸಿದರು. ತಬಲಾದಲ್ಲಿ ಪ್ರಶಾಂತ್ ಬಿರ್ತಿ ಮತ್ತು ಜಂಬೆಯಲ್ಲಿ ರೋಷನ್ ಬೈಕಾಡಿ ಸಹಕರಿಸಿದ್ದರು. ಪ್ರತಿ ಹಾಡಿನ ಕೊನೆಯಲ್ಲಿ ರಂಗಕರ್ಮಿ ರೋಹಿತ್ ಬೈಕಾಡಿಯವರು ಗಾಂಧೀಜಿಯವರ ವಿಚಾರಧಾರೆೆಗಳೊಂದಿಗೆ ಜೀವನದ ಕೆಲವು ಘಟನೆಗಳ ನಿರೂಪಣೆ ಮಾಡುತ್ತಿದ್ದುದು ಸಮಯೋಚಿತವಾಗಿತ್ತು.
ಕೆ. ದಿನಮಣಿ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.