ಭಯದ ಬಣ್ಣ
Team Udayavani, Nov 9, 2018, 6:00 AM IST
ಚಂದನವನದ ಕದ ತಟ್ಟುತ್ತಿರುವ ಬಹುತೇಕ ಹೊಸ ಪ್ರತಿಭೆಗಳು ಹಾರರ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿ ಗೆಲ್ಲುತ್ತಿದ್ದಾರೆ. ಹೀಗಾಗಿ ಹೊಸದಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುವವರಿಗೆ ಹಾರರ್ ಚಿತ್ರಗಳು ಹಾಟ್ ಫೇವರೆಟ್ ಚಿತ್ರಗಳು ಎಂಬಂತಾಗಿ ಬಿಟ್ಟಿದೆ. ಈ ವರ್ಷಾಂತ್ಯಕ್ಕೆ ಇನ್ನಷ್ಟು ಹಾರರ್ ಚಿತ್ರಗಳು ತೆರೆಗೆ ಬರಲು ತುದಿಗಾಲಿನಲ್ಲಿ ನಿಂತಿದ್ದು, ಸದ್ಯ ಕನ್ನಡದಲ್ಲಿ ಹಾರರ್ ಚಿತ್ರಗಳ ಪರ್ವ ಮುಂದುವರೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇತ್ತೀಚೆಗೆ “ವರ್ಣಮಯ’ ಎಂಬ ಅಂಥದ್ದೆ ಹಾರರ್ ಚಿತ್ರವೊಂದರ ಟ್ರೇಲರ್ ಬಿಡುಗಡೆಯಾಗಿದೆ.
ಈ ಹಿಂದೆ “ಪುಟಾಣಿ ಸಫಾರಿ’ ಎನ್ನುವ ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ ರವೀಂದ್ರ ವೆಂಶಿ “ವರ್ಣಮಯ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡುವ ರವೀಂದ್ರ ವೆಂಶಿ, “ಕನ್ನಡದಲ್ಲಿ ಹಾರರರ್ ಚಿತ್ರಗಳಿಗೆ ಬರವಿಲ್ಲ. ತಿಂಗಳಿಗೆ ಕನಿಷ್ಠ ಮೂರ್‍ನಾಲ್ಕು ಹಾರರ್ ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಒಂದು ಬಂಗಲೆ ಅಥವಾ ನಿಗೂಢ ಜಾಗಕ್ಕೆ ಒಂದಷ್ಟು ಜನ ಹೋಗುವುದು. ಅಲ್ಲಿ ಅವರಿಗೆ ದೆವ್ವದ ಕಾಟ ಶುರುವಾಗುವುದು, ಅದಕ್ಕೊಂದು ಹಿನ್ನೆಲೆ, ಇವು ಸದ್ಯ ಬರುತ್ತಿರುವ ಹಾರರ್ ಚಿತ್ರಗಳ ಒಂದು ಎಳೆ. ಬಹುತೇಕ ಹಾರರ್ ಚಿತ್ರಗಳು ಇದೇ ಸಿದಟಛಿಸೂತ್ರವನ್ನು ಪಾಲಿಸುತ್ತಿವೆ. ಆದರೆ
ಇದನ್ನು ಹೊರತುಪಡಿಸಿ, ವೈಜ್ಞಾನಿಕವಾಗಿ ಪ್ಯಾರಾನಾರ್ಮಲ್ ಘಟನೆಗಳನ್ನು ಆಧರಿಸಿ “ವರ್ಣಮಯ’ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ರವೀಂದ್ರ ವೆಂಶಿ.
ಇನ್ನು ಈ ಚಿತ್ರದಲ್ಲಿ ಗ್ರಾಫಿಕ್ಸ್ ಇದೆ. ಆದರೆ ದೆವ್ವದ ಚಿತ್ರಣ ಬೇರೆಯದೇ ಶೈಲಿಯಲ್ಲಿದೆ, ತಲೆ ಕೆದರಿಕೊಂಡು ಭಯಾನಕ ದೆವ್ವ ಇಲ್ಲಿಲ್ಲ, ಏಕೆಂದರೆ ದೆವ್ವದ ಪರಿಕಲ್ಪನೆ ಪುರಾತನವಾದರೂ ಅದರ ಪ್ರಾತ್ಯಕ್ಷತೆ ಯಾರಿಗೂ ಗೊತ್ತಿಲ್ಲ. ಅದರ ಆಕಾರ, ರೂಪದ ಬಗ್ಗೆ ಸ್ಪಷ್ಟವಾದ ಮಾಹಿತಿ ನಿದರ್ಶನಗಳಿಲ್ಲ. ಹಾಗಾಗಿಯೇ ಇಂದಿನ ಜಗತ್ತಿನಲ್ಲಿ ಹೇಗೆ ಪರಿಕಲ್ಪನೆ ಮೂಡಿದೆಯೋ ಹಾಗೆಯೇ ಚಿತ್ರಿಸಲಾಗಿದ್ದು, ಇಡೀ ಚಿತ್ರದಲ್ಲಿ ಮಾಟ-ಮಂತ್ರ, ಮಂತ್ರವಾದಿಗಳ ಅಬ್ಬರವಿಲ್ಲ. ಹಾಗಾಗಿಯೇ ಕತೆ ವಿಶೇಷ ಎನ್ನುವುದು ವರ್ಣಮಯ ಚಿತ್ರತಂಡದ ಮಾತು.
ಚಿತ್ರಕ್ಕೆ ಶ್ರೀಗುರು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದರೆ, ಹಾಡುಗಳಿಗೆ ಹೊಸ ಪ್ರತಿಭೆಗಳಾದ ಸುಧಾಂಶು-ವಿನೋದ್ ರಾಗ ಸಂಯೋಜನೆ ಮಾಡಿದ್ದಾರೆ. ಜೀವನ ಗೌಡ ಛಾಯಾಗ್ರಹಣ, ಸಿ.ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ. ರಾಜ್ ಎಂಬ ನವ ಪ್ರತಿಭೆ “ವರ್ಣಮಯ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕಿಯರಾಗಿ ಶಕ್ತಿ ಎಸ್. ಶೆಟ್ಟಿ, ಸುನೀತಾ ಮರಿಯಾ ಪಿಂಟೋ, ಆರಾಧ್ಯ ಅಟ್ಟಾವರ ಅಭಿನಯಿಸುತ್ತಿದ್ದಾರೆ.
ಉಳಿದಂತೆ ಮಂಡ್ಯ ಜಗ, ಹರೀಶ್ ಕುಂದೊರು, ಉಮೇಶ್ ಸಿಂಧನೂರು ಇತರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ವರ್ಣಮಯ’ ಚಿತ್ರವನ್ನು ದೀಪ್ತಿ ದಾಮೋದರ್ ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.