‘ಸ್ಥಳೀಯವಲ್ಲದ ಪದಾರ್ಥ ಸೇವನೆಯಿಂದ ಬಾಧಕ’
Team Udayavani, Nov 9, 2018, 11:15 AM IST
ಮೂಡಬಿದಿರೆ: ಸ್ಥಳೀಯವಾಗಿ ಬೆಳೆಯದೆ ಇತರ ಪ್ರದೇಶಗಳಿಂದ ತರಿಸಲಾದ ಆಹಾರ ಪದಾರ್ಥಗಳ ಸೇವನೆಯಿಂದ ದೈಹಿಕ ಆರೋಗ್ಯಕ್ಕೆ ಪೂರಕವಾಗುವ ಬದಲು ಬಾಧಕವಾಗುವ ಸಾಧ್ಯತೆಯೇ ಹೆಚ್ಚು. ಆದಷ್ಟು ಮಟ್ಟಿಗೆ ನಮ್ಮ ಪರಿಸರದಲ್ಲಿ ಬೆಳೆಯುವ ಹಣ್ಣು, ತರಕಾರಿ, ಧಾನ್ಯಗಳನ್ನು ಸೇವಿಸುವ ಮೂಲಕ ಆರೋಗ್ಯ ಪೂರ್ಣವಾಗಿ ಬದುಕಲು ಸಾಧ್ಯ ಎಂದು ಉಡುಪಿಯ ಡಾ| ಶ್ರೀಧರ ಬಾಯರಿ ಹೇಳಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ವಿದ್ಯಾ ಗಿರಿಯ ಪಿ.ಜಿ. ಸೆಮಿನಾರ್ ಹಾಲ್ ನಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಆಯುರ್ವೇದ ವೈದ್ಯಕೀಯ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ‘ಹಿತ್ತಲ ಗಿಡ ಮದ್ದು’ ವಿಷಯದಲ್ಲಿ ಮಾಹಿತಿ ನೀಡಿದರು.
ಔಷಧಿಯುಕ್ತ ಸಸ್ಯಗಳ ಮಹತ್ವ
ಆಯುರ್ವೇದ ವಿದ್ಯಾರ್ಥಿಗಳಲ್ಲದೆ ಮೂಡಬಿದಿರೆ ಪರಿಸರದ ಆಸಕ್ತ ರೈತರೂ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸ್ಲೈಡ್ ಮೂಲಕ ಔಷಧಿಯುಕ್ತ ಸಸ್ಯಗಳ ಮಹತ್ವ ಹಾಗೂ ರೈತರು ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಗಮನಿಸಿ ಗಿಡಮೂಲಿಕೆಗಳನ್ನು ಬೆಳೆಸುವ ಜಾಣತನ ತೋರಬೇಕು’ ಎಂದು ಅವರು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೂಡಬಿದಿರೆ ತಾ| ಘಟಕದ ಅಧ್ಯಕ್ಷ ವಾಲ್ಟರ್ ನಝರೆತ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಮೀನ್, ದ.ಕ. ಜಿಲ್ಲಾ ಸಂಘಟನ ಕಾರ್ಯದರ್ಶಿ ರೋನಿ ಮೆಂಡೋನ್ಸ ಮುಖ್ಯಅತಿಥಿಗಳಾಗಿದ್ದರು.
ಈ ಸಂದರ್ಭ ರಸಶಾಸ್ತ್ರ ವಿಭಾಗದ ಡಾ| ಕೃಷ್ಣಮೂರ್ತಿ ಸ್ವಾಗತಿಸಿದರು. ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಅಧೀಕ್ಷಕಿ ಡಾ| ಝೆನಿಕಾ ಡಿ’ಸೋಜಾ, ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ| ಪ್ರವೀಣ್ ಬಿ.ಎಸ್., ಆಡಳಿತಾಧಿಕಾರಿ ಜೋಬಿನ್ ಮೊದಲಾದವರು ಉಪಸ್ಥಿತರಿದ್ದರು.
ಗೌರವಾರ್ಪಣೆ
ಪ್ರಾಚಾರ್ಯ ಡಾ| ಬಿ. ವಿನಯಚಂದ್ರ ಶೆಟ್ಟಿ ಅವರು ಡಾ| ಶ್ರೀಧರ ಬಾಯರಿ ಅವರನ್ನು ಗೌರವಿಸಿದರು. ಡಾ| ರವಿ ರಾವ್ ವಂದಿಸಿದರು. ಡಾ| ಗೀತಾ ಮತ್ತು ಡಾ| ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.
ಉಚಿತ ಆರೋಗ್ಯ ಶಿಬಿರ
ಉಚಿತ ಆರೋಗ್ಯಶಿಬಿರದಲ್ಲಿ ವಿವಿಧ ಖಾಯಿಲೆಗಳ ಪರೀಕ್ಷೆ ನಡೆಸಿ, ಸಲಹೆ ನೀಡಲಾಯಿತು. ರಕ್ತದಲ್ಲಿ ಸಕ್ಕರೆ ಅಂಶ ಪರಿಶೀಲನೆ, ರಕ್ತದೊತ್ತಡ ಪರೀಕ್ಷೆ ಪರೀಕ್ಷೆ ಉಚಿತವಾಗಿ ಮಾಡಲಾಯಿತು. ಆಸಕ್ತರಿಗೆ ಗಿಡಮೂಲಿಕೆಗಳ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.