ಸದ್ದು ಮಾಡ್ತಿದೆ “ಅನಂತು v/s ನುಸ್ರತ್ ಟ್ರೈಲರ್: Watch
Team Udayavani, Nov 9, 2018, 2:47 PM IST
ವಿನಯ್ ರಾಜಕುಮಾರ್ ಅಭಿನಯದ “ಅನಂತು v/s ನುಸ್ರತ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಸದ್ದು ಮಾಡಿತ್ತು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ.
ಹೌದು! 1ನಿಮಿಷ 37 ಸೆಕೆಂಡ್ಗಳ ಟ್ರೈಲರ್ ಹಾಸ್ಯದ ಜೊತೆಗೆ ಜಡ್ಜ್ ಮತ್ತು ಲಾಯರ್ ನಡುವಿನ ಕ್ಯೂಟ್ ಲವ್ ಸ್ಟೋರಿಯ ಝಲಕ್ ತೋರಿಸಿದೆ. ಅಲ್ಲದೇ ಅಪ್ಪ ಮಗನ ನಡುವೆ ಕೋಪ – ಜಗಳ, ಇದರ ಮಧ್ಯೆ ನಟ ಗುರುಪ್ರಸಾದ್, ರವಿಶಂಕರ್ ಕಾಮಿಡಿ. ಎಲ್ಲವೂ ಚಿತ್ರ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಅನ್ನೋ ಸುಳಿವನ್ನು ನೀಡಿದೆ.
ಇನ್ನು ಸ್ಯಾಂಡಲ್ವುಡ್ನಲ್ಲಿ ಒಂದು ಸೂಪರ್ ಹಿಟ್ನ ನಿರೀಕ್ಷೆಯಲ್ಲಿರುವ ವಿನಯ್ ಈ ಬಾರಿ ಕರಿ ಕೋಟು ಧರಿಸಿ ವಕೀಲನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಕೀಲ ಅನಂತ ಕೃಷ್ಣ ಎಂಬ ಪಾತ್ರದಲ್ಲಿ ಅಭಿನಯಿಸಿರುವ ವಿನಯ್ಗೆ ಲತಾ ಹೆಗ್ಡೆ ನಾಯಕಿಯಾಗಿದ್ದಾರೆ. ವಿನಯ್ ಇಲ್ಲಿ ಸಾಮಾನ್ಯ ವಕೀಲನಾದರೆ ಲತಾ ಹೆಗ್ಡೆ ಜಡ್ಜ್ ಪಾತ್ರಧಾರಿ ನುಸ್ರತ್ ಫಾತಿಮಾ ಆಗಿ ಕಾಣಿಸಿಕೊಂಡಿದ್ದಾರೆ.
ಇದೊಂದು ಹಾಸ್ಯ ಮಿಶ್ರಿತ ನವಿರಾದ ಪ್ರೇಮಕಥೆಯಾಗಿದ್ದು, ಜಡ್ಜ್ಗೆ ಮನಸೋತಿರುವ ವಕೀಲನ ಕಥೆ ಈ ಚಿತ್ರದಲ್ಲಿರಲಿದೆ. ಈ ಸಿನಿಮಾವನ್ನು ಸುಧೀರ್ ಶಾನುಭೋಗ್ ನಿರ್ದೇಶಿಸಿದ್ದು, ಈಗಾಗಲೇ “ಕೋರ್ಟ್ಗೆ ಬಂದವಳು ಹಾರ್ಟ್ಗೆ ಬರ್ಬಾದು ಅಂತ ಏನಾದರೂ ಕಾನೂನಿದೆಯಾ…’ ಎಂಬ ಡೈಲಾಗ್ ಸಖತ್ತಾಗೆ ವರ್ಕೌಟ್ ಆದಂತಿದೆ.
ಮಾಣಿಕ್ಯ ಪ್ರೊಡಕ್ಷನ್ ನಿರ್ಮಿಸಿರುವ ಈ ಚಿತ್ರದಲ್ಲಿ ರವಿಶಂಕರ್, ಗುರು ಪ್ರಸಾದ್, ಅಶೋಕ್ ಸೇರಿದಂತೆ ಬಹುತಾರಗಣವಿದ್ದು, ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ತಾರಾಗಣದಲ್ಲಿ ರವಿಶಂಕರ್, ಬಿ ಸುರೇಶ್, ಗುರು ಪ್ರಸಾದ್, ಸುಚೀಂದ್ರ ಪ್ರಸಾದ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.