ಪತ್ರಕರ್ತ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ನಿಧನ
Team Udayavani, Nov 10, 2018, 6:35 AM IST
ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಹಿರಿಯ ಪತ್ರಕರ್ತ, ಬೀಳಗಿ ಕ್ಷೇತ್ರದ ಮಾಜಿ ಶಾಸಕ ಬಾಬುರೆಡ್ಡಿ ವೆಂಕರೆಡ್ಡಿ ತುಂಗಳ (84) ಗುರುವಾರ ಮಧ್ಯರಾತ್ರಿ 1:30ಕ್ಕೆ ಹೃದಯಾಘಾತದಿಂದ ನಿಧನರಾದರು.
ಕಳೆದೊಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಪುತ್ರಿ ಡಾ| ವಿಜಯಲಕ್ಷ್ಮೀ ತುಂಗಳರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಜಮಖಂಡಿ ತಾಲೂಕಿನ ಬಿದರಿ ಅವರ ಸ್ವಗ್ರಾಮದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನೆರವೇರಿತು. ಸ್ಥಳೀಯ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಪುರಸಭೆ ಸದಸ್ಯರಾಗಿ, ಶಾಸಕರಾಗಿ, ಪತ್ರಕರ್ತರಾಗಿ ಅನೇಕ ಸಾಮಾಜಿಕ ಕೆಲಸ-ಕಾರ್ಯದಲ್ಲಿ ಗುರುತಿಸಿಕೊಂಡಿದ್ದರು.
ರೈತರೇ ನಿರ್ಮಿಸಿದ್ದ ಚಿಕ್ಕಪಡಸಲಗಿಯ ಕೃಷ್ಣಾತೀರ ರೈತ ಸಂಘದ ಅಧ್ಯಕ್ಷರಾಗಿದ್ದ ಇವರು, ಸರ್ಕಾರದ ಯಾವುದೇ ಅನುದಾನವಿಲ್ಲದೇ ಬ್ಯಾರೇಜ್ ನಿರ್ಮಿಸುವಲ್ಲಿ ದಿ| ಸಿದ್ದು ನ್ಯಾಮಗೌಡ ಅವರೊಂದಿಗೆ ಮುಂಚೂಣಿಯಲ್ಲಿದ್ದರು. 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿ ಮತಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪ ರ್ಧಿಸಿ ಗೆದ್ದಿದ್ದರು. 40 ವರ್ಷಗಳ ಕಾಲ ನಿರಂತರವಾಗಿ ತಮ್ಮ ಹರಿತ ಲೇಖನಿಯಿಂದ “ಕುರುಕ್ಷೇತ್ರ’ ಎಂಬ ವಾರಪತ್ರಿಕೆ ಹೊರಡಿಸುತ್ತಿದ್ದರು. ಕನ್ನಡ ಚಳವಳಿ, ಗಡಿಭಾಗದ ರಕ್ಷಣೆಗೆ ಹೋರಾಟ ಮಾಡಿ ಅನೇಕ ಬಾರಿ ಜೈಲುವಾಸ ಅನುಭವಿಸಿದ್ದರು.
ಅಂತ್ಯಕ್ರಿಯೆ:
ಬಾಬುರೆಡ್ಡಿ ತುಂಗಳ ಅವರ ಸ್ವಗ್ರಾಮ ಬಿದರಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಕೊಣ್ಣೂರು ವಿಶ್ವಪ್ರಭು ಶ್ರೀ, ಬಿದರಿಯ ಕುಮಾರೇಶ್ವರ ಶ್ರೀ, ಮುತ್ತಿನಕಂತಿಮಠದ ಶಿವಲಿಂಗ ಶ್ರೀ, ಮಾಜಿ ಶಾಸಕ ಜೆ.ಟಿ. ಪಾಟೀಲ, ಎಸ್.ಆರ್. ಪಾಟೀಲ, ಶಾಸಕರಾದ ಆನಂದ ನ್ಯಾಮಗೌಡ, ಮುರುಗೇಶ ನಿರಾಣಿ, ಪಿ.ಎಚ್. ಪೂಜಾರಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಜಿ.ಎಸ್. ನ್ಯಾಮಗೌಡ, ಅಪ್ಪು ಪಟ್ಟಣಶೆಟ್ಟಿ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಎಸ್.ಎಸ್. ದೇವರವರ, ಉಮೇಶ ಮಹಾಬಳಶೆಟ್ಟಿ, ಶಿವಕುಮಾರ ಮಲಘಾಣ, ಎಂ.ಸಿ. ಗೊಂದಿ, ವಿ.ವಿ.ತುಳಸಿಗೇರಿ ಸೇರಿದಂತೆ ಗಣ್ಯರು ಹಾಗೂ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.