ನ್ಯೂಸ್ ಆ್ಯಂಕರ್ ರೋಬೋ!
Team Udayavani, Nov 10, 2018, 8:02 AM IST
ಚೀನ: ಕೃತಕ ಬುದ್ಧಿಮತ್ತೆ (ಎಐ) ಆಧರಿಸಿ ತಯಾರಿಸಿರುವ ರೋಬೋವೊಂದು ಚೀನದಲ್ಲಿ ನಡೆಯುತ್ತಿರುವ 5ನೇ ಜಾಗತಿಕ ಅಂತರ್ಜಾಲ ಸಮ್ಮೇಳನದಲ್ಲಿ “ಸುದ್ದಿ ನಿರೂಪಕ’ನಾಗಿ ತನ್ನ ತಾಕತ್ತು ಪ್ರದರ್ಶಿಸಿದ್ದು, ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ! ಪುರುಷ ಸ್ವರೂಪದ ಈ ರೋಬೋ ಧ್ವನಿಯೊಂದಿಗೆ ಆಯಾ ಸುದ್ದಿಗೆ ಸಂಬಂಧಿಸಿದಂತೆ ಮುಖಭಾವವನ್ನೂ ಬದಲಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಟಿವಿ ಚಾನೆಲ್ಗಳಲ್ಲಿ ಸುದ್ದಿ ವಾಚಕರು ಹೇಗೆ ವಾರ್ತೆಗಳನ್ನು ಓದುತ್ತಾರೆಯೋ ಅದೇ ರೀತಿಯಲ್ಲಿ ಹಾವ ಭಾವ ಪ್ರದರ್ಶಿಸುತ್ತದೆ.
ಜತೆಗೆ, ಸುದ್ದಿಯನ್ನು ವಾಚಿಸಿದ ನಂತರ ಅದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ತಾನೇ ಹುಡುಕಿ ಅದನ್ನು ಪ್ರಸಾರ ಮಾಡುವ ಛಾತಿ ಹೊಂದಿದೆ. ಚೀನಾ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಹಾಗೂ ಚೀನದ ಅಂತರ್ಜಾಲ ಸರ್ಚ್ ಸಂಸ್ಥೆಯಾದ ಸೊಗೌ ಡಾಟ್ ಕಾಮ್ ಜಂಟಿಯಾಗಿ ಈ ರೋಬೋವನ್ನು ತಯಾರಿಸಿವೆ. ಸುದ್ದಿ ವಾಚಕನಾಗುವ ಮೊದಲು ಈ ರೋಬೋವನ್ನು ತನ್ನ ವರದಿಗಾರರ ವಿಭಾಗದಲ್ಲಿ ತರಬೇತಿ ನೀಡಲಾಗಿದ್ದು, ದಿನದ 24 ಗಂಟೆಗಳ ಕಾಲ ದಣಿವಿಲ್ಲದೆ ದುಡಿಯುವಂಥ ಕ್ಷಮತೆಯನ್ನು ಈ ರೋಬೋ ಹೊಂದಿದೆ ಎಂದು ಕ್ಸಿನ್ಹುವಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.