ಜೇಡ ಬರುವ ಹೊತ್ತಿದು!
Team Udayavani, Nov 10, 2018, 1:57 PM IST
ಜೇಡ ಕೈಗೆ ವಾಚು ಕಟ್ಟಿಕೊಂಡು, ಸಮಯ ನೋಡಿಕೊಂಡು ಬರುತ್ತದೆಯೋ ಗೊತ್ತಿಲ್ಲ. ಆದರೆ, ಇಂಗ್ಲೆಂಡ್‌ನಲ್ಲಿ ನಡೆದ ಒಂದು ಸಂಶೋಧನೆ ಆ ಅನುಮಾನವನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. ಸಂಶೋಧಕರು ‘ಸ್ಪೈಡರ್ ಇನ್ ದ ಹೌಸ್’ ಎಂಬ ಮೊಬೈಲ್ ಆ್ಯಪ್ ಒಂದನ್ನು ರೂಪಿಸಿದರು.
ಬ್ರಿಟನ್‌ನ ಮಂದಿ ಅದನ್ನು ತಮ್ಮ ಮೊಬೈಲುಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡರು. ಬಳಕೆದಾರರು ಮಾಡಬೇಕಾಗಿದ್ದಿಷ್ಟೆ. ಯಾವಾಗ ತಮ್ಮ ಕಣ್ಣಿಗೆ ಜೇಡ ಕಾಣುತ್ತದೆಯೋ ಆ ಕೂಡಲೆ ಆ್ಯಪ್ ನಲ್ಲಿದ್ದ ಗುಂಡಿ ಒತ್ತುವುದು. ಲಕ್ಷಾಂತರ ಮಂದಿ ಈ ಪ್ರಯೋಗದಲ್ಲಿ ಪಾಲ್ಗೊಂಡರು. ಅವರಲ್ಲಿ ಹೆಚ್ಚಿನವರು ಜೇಡವನ್ನು ಕಂಡರೆ ಮಾರು ದೂರ ಓಡುವವರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಈ ಪ್ರಯೋಗದಿಂದ ಕುತೂಹಲಕರ ಮಾಹಿತಿ ಹೊರಬಿದ್ದಿತ್ತು. ಹೆಚ್ಚಿನವರ ಕಣ್ಣಿಗೆ ಜೇಡ ದರುಶನ ಕೊಟ್ಟಿದ್ದು ರಾತ್ರಿ 7.30ರ ಆಸುಪಾಸಿನಲ್ಲಿ!
ಮನೆಯ ಸಂದುಗೊಂದುಗಳಲ್ಲಿ, ಕತ್ತಲ ಜಾಗಗಳಲ್ಲಿ ಗೂಡುಕಟ್ಟುವ ಜೇಡವನ್ನು ಬಹುತೇಕರು ತಮ್ಮ ಮನೆಯ ಮೇಲೆ ದಂಡೆತ್ತಿ ಬಂದ ಶತ್ರುವಿನಂತೆ ಕಾಣುತ್ತಾರೆ. ಮನುಷ್ಯ ಪೂರ್ವಗ್ರಹ ಪೀಡಿತ ದೃಷ್ಟಿಯಿಂದ ಪ್ರಪಂಚವನ್ನು ನೋಡುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೆಳಗ್ಗೆ ಎದ್ದಿರುವ, ರಾತ್ರಿ ಮಲಗುವ ನಮಗೆ ಅದೇ ಸಹಜ. ಬೆಳಗ್ಗೆ ಮಲಗಿ ರಾತ್ರಿ ಏಳುವುದೆಂದರೆ ಅದು ಅಸಹಜವೆಂದು ತೋರುತ್ತದೆ.
ಇಂಥ ಹಲವು ಪೂರ್ವಾಗ್ರಹಗಳಿಗೆ, ಅಪನಂಬಿಕೆಗಳಿಗೆ ಬಲಿಯಾದ ಅನೇಕ ಜೀವಿಗಳಲ್ಲಿ ಜೇಡವೂ ಒಂದು. ಇಡೀ ಭೂಮಿಯನ್ನು ತನ್ನದೇ ಸ್ವತ್ತೆಂಬಂತೆ ಅಳತೆಗೋಲಿನಲ್ಲಿ ಅಳೆದಿಟ್ಟುಕೊಂಡಿರುವ ಮನುಷ್ಯನ ಅಪರಾಧಗಳ ಎದುರು, ಮೂಲೆಯಲ್ಲಿ, ಪುಡಿ ಜಾಗದಲ್ಲಿ ಮನೆ ಮಾಡುವ ಜೇಡ ಏನೇನೂ ಅಲ್ಲ. ಇದನ್ನು ಅರಿತವರು ಮೇಜಿನ ಸಂದಿನಲ್ಲೋ, ಟೀಪಾಯಿ ಕೆಳಗೋ ಗೂಡು ಕಟ್ಟುವ ಜೇಡವನ್ನು ಓಡಿಸಲಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.