ಕೊಡಗಿಗಾಗಿ ರಂಗಸಪ್ತಾಹ: ಸಂಗೀತ ಜಾತ್ರೆ + ಸಂತ್ರಸ್ತರೊಂದಿಗೆ ಮಾತುಕತೆ
Team Udayavani, Nov 10, 2018, 3:32 PM IST
ಮಳೆಯ ಅಬ್ಬರ ನಿಂತಿದೆ. ಕೊಡಗಿನವರ ಹೃದಯ ಕೊಂಚ ಸಮಾಧಾನದಲ್ಲಿ ಬಡಿದುಕೊಳ್ಳುತ್ತಿದೆ. ಆದರಿನ್ನೂ ಅವರ ಕಣ್ಣೀರು ನಿಂತಿಲ್ಲ. ಬದುಕು ಕನಸುಗಳೆಲ್ಲ ಕೊಚ್ಚಿ ಹೋದ ನೋವಿನಿಂದ ಅವರಿನ್ನೂ ಹೊರಬಂದಿಲ್ಲ. ಈಗಾಗಲೇ ಕೊಡುಗೈ ದಾನಿಗಳೆಲ್ಲ ಆ ನಾಡಿಗಾಗಿ ಮಿಡಿದಿದ್ದಾರೆ. ಅಂದಿನಿಂದ ಇಂದಿನ ತನಕ ಒಂದಲ್ಲಾ ಒಂದು ಮಾನವೀಯ ಸೇವೆಯ ಮೂಲಕ “ಪೀಪಲ್ ಫಾರ್ ಪೀಪಲ್’ ಎಂಬ ಸಂಘಟನೆಯೂ ತನ್ನದೇ ವಿಭಿನ್ನ ಹಾದಿಯಲ್ಲಿ ಔದಾರ್ಯ ಮೆರೆಯುತ್ತಿದೆ. ಈಗ ಈ ಸಂಸ್ಥೆಯು “ಕೊಡಗಿಗಾಗಿ ರಂಗಸಪ್ತಾಹ’ವನ್ನು ಹಮ್ಮಿಕೊಂಡಿದ್ದು, ಇಲ್ಲಿ ಸಂಗ್ರಹಗೊಳ್ಳುವ ಟಿಕೆಟ್ ಹಣವನ್ನು ಸಂತ್ರಸ್ತರಿಗೆ ನೇರವಾಗಿ ಮುಟ್ಟಿಸಲು ನಿರ್ಧರಿಸಿದೆ. ನ.11ರಿಂದ 16ರ ವರೆಗೆ ನಾಟಕದೊಂದಿಗೆ ಸಂಗೀತ ಕಾರ್ಯಕ್ರಮಗಳೂ ಇರಲಿವೆ. ಕಲೆಯ ಮೂಲಕ ಕಣ್ಣೀರೊರೆಸುವ ಪ್ರಯತ್ನ ಇದಾಗಿದ್ದು, ನೀವೂ ಪಾಲ್ಗೊಂಡು ಸಂತ್ರಸ್ತರಿಗೆ ಧೈರ್ಯ ತುಂಬಬಹುದು.
1. ಜನಪದ ಜಾತ್ರೆ, ಚೋರ ಚರಣದಾಸ
ನ.11ರ ಸಂಜೆ 5.30ಕ್ಕೆ ಅನನ್ಯ ಭಟ್ ಅವರಿಂದ “ಜನಪದ ಗೀತ ಜಾತ್ರೆ’ ಕಳೆಗಟ್ಟಲಿದೆ. ನಂತರ 7 ಗಂಟೆಗೆ ನಟನ ತಂಡದಿಂದ ಮಂಡ್ಯ ರಮೇಶ್ ನಿರ್ದೇಶನದಲ್ಲಿ “ಚೋರ ಚರಣದಾಸ’ ನಾಟಕ ಮೂಡಿಬರಲಿದೆ.
2. ಸ್ಪರ್ಶ ಗಾನ, ಹಯವದನ
ನ.12ರಂದು ಸಂ.5.30ರಿಂದ ಸ್ಪರ್ಶ ಆರ್.ಕೆ. ಅವರು ಸುಮಧುರ ಗೀತಗಳಿಗೆ ನೀವು ಕಿವಿಯಾಗಬಹುದು. ಸಂ.7ರಿಂದ ಬೆನಕ ತಂಡವು ಬಿ.ವಿ. ಕಾರಂತ್ ನಿರ್ದೇಶನದ, ಗಿರೀಶ್ ಕಾರ್ನಾಡ್ ರಚನೆಯ “ಹಯವದನ’ವನ್ನೂ ನೋಡಬಹುದು.
3. ಸುಮಾ ಸ್ವರ, ಹುಲಿ ಹಿಡಿದ ಕಡಸು
ನ.13ರಂದು ಸಂ.5.30ಕ್ಕೆ ಸುಮಾ ಶಾಸಿŒ ಅವರು ಅನುಭಾವ ಗೀತೆಗಳಿಗೆ ಕೊರಳಾಗಲಿದ್ದಾರೆ. ಅಂದು ಸಂ.7ಕ್ಕೆ ದೃಶ್ಯ ಕಾವ್ಯ ತಂಡವು ನಂಜುಂಡೇಗೌಡ ಅವರ ನಿರ್ದೇಶನದ “ಹುಲಿ ಹಿಡಿದ ಕಡಸು’ ನಾಟಕ ಪ್ರದರ್ಶನ ಕಾಣಲಿದೆ.
4. ಪ್ರವೀಣ ಗಾನ, ಶರೀಫನ ಧ್ಯಾನ
ನ.14ರ ಸಂ.5.30ಕ್ಕೆ ಪ್ರವೀಣ್ ಬಿ.ವಿ. ಮತ್ತು ಪ್ರದೀಪ್ ಬಿ.ವಿ. ಸಹೋದರರ ಗಾಯನ ಜುಗಲ್‌ಬಂದಿ ಇರಲಿದೆ. ನಂತರ ಸಂ.7ಕ್ಕೆ ಸಾತ್ವಿಕ ತಂಡವು ಮಂಜುನಾಥ ಬೆಳಕೆರೆ ರಚನೆ, ರಾಜ್ ಗುರು ಹೊಸಕೋಟೆ ನಿರ್ದೇಶನದ “ಶರೀಫ’ ನಾಟಕವನ್ನು ಕಣ್ತುಂಬಿಕೊಳ್ಳಬಹುದು.
5. ನನ್ನೊಳು ನೀ, ನಿನ್ನೊಳು ನಾ
ನ.15ರಂದು ಸಂ.5.30ಕ್ಕೆ ಅನುರಾಧ ಭಟ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಡುವರು. ನಂತರ 7ರಿಂದ ಸಾರ್ಕ್ ತಂಡವು “ನನ್ನೊಳು ನೀ, ನಿನ್ನೊಳು ನಾ’ ನಾಟಕವನ್ನು ಪ್ರಸ್ತುತಪಡಿಸಲಿದೆ. ಅವಿನಾಶ್ ಸ. ಷಟಮರ್ಶನ್ ನಿರ್ದೇಶನದಲ್ಲಿ ಇದು ಮೂಡಿಬರಲಿದೆ.
6. ಗಜಲ್ ಮತ್ತು ಗುಲಾಬಿ
ನ.16ರ ಸಂ.5.30ಕ್ಕೆ ರಾಮಚಂದ್ರ ಹಡಪದ್ ಅವರಿಂದ ಗಜಲ್, ಕೇಳುಗನ ಮನವನ್ನು ತಂಪಾಗಿಸಲಿದೆ. ನಂತರ ಸಂ.7ಕ್ಕೆ ರಂಗ ಪಯಣ ತಂಡವು ಪ್ರವೀಣ್ ಸೂಡ ಅವರು ರಂಗರೂಪ ನೀಡಿರುವ “ಗುಲಾಬಿ ಗ್ಯಾಂಗ್’ ಅನ್ನು ಅಭಿನಯಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.