ಮರಳು ವಿತರಣೆಗೆ ಕ್ರಮ ಕೈಗೊಳ್ಳಿ
Team Udayavani, Nov 10, 2018, 3:37 PM IST
ಹೊನ್ನಾಳಿ: ತಾಲೂಕಿನ ಜನತೆಗೆ ಮನೆ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಬೇಕಾದ ಅಗತ್ಯ ಮರಳನ್ನು ಜಿಲ್ಲಾಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಸಮರ್ಪಕವಾಗಿ ವಿತರಿಸಲು ಮುಂದಾಗದಿದ್ದರೆ ಸಾರ್ವಜನಿಕರೊಂದಿಗೆ ನ. 10ರ ಸೋಮವಾರದಂದು ಎತ್ತಿನಗಾಡಿ ಹಾಗೂ
ಟ್ರ್ಯಾಕ್ಟರ್‌ನೊಂದಿಗೆ ನೇರವಾಗಿ ನದಿಗೆ ಹೋಗಿ ಮರಳು ತುಂಬಿ ಪ್ರತಿಭಟಿಸಲಾಗುವುದು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಎಸಿ, ಭೂಗರ್ಭ ವಿಜ್ಞಾನ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು, ಮರಳು ಗುತ್ತಿಗೆದಾರರ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಪ್ರಾಕೃತಿಕವಾಗಿ ಮರಳಿನ ಸಂಪತ್ತಿದ್ದರೂ ಮನೆ, ಶೌಚಾಲಯ ಹಾಗೂ ಆಶ್ರಯ ಮನೆ ಕಟ್ಟಲು ಮರಳು ಸಿಗುತ್ತಿಲ್ಲ ಎಂಬ ದೂರು ಸಾಮಾನ್ಯ ಜನರಿಂದ ನಾನು ಶಾಸಕನಾದಾಗಿನಿಂದ ಕೇಳಿ ಬರುತ್ತಿದೆ. ಇದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಸೂಕ್ತ ಸುಧಾರಣೆ ಕ್ರಮಕ್ಕೆ ಆಡಳಿತ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುರಳಹಳ್ಳಿ ಮರಳು ಕ್ವಾರಿಯನ್ನು ಗುತ್ತಿಗೆದಾರ 2.84 ಕೋಟಿ ರೂ.ಗಳಿಗೆ ಟೆಂಡರ್ ಹಿಡಿದಿದ್ದು, ಇದನ್ನು ರದ್ದು ಮಾಡುವಂತೆ ಸೂಚಿಸಿದ್ದರೂ ಇಂದಿಗೂ ಪ್ರಯೋಜನವಾಗಿಲ್ಲ. ಇಂತಹ ಬೆಳವಣಿಗೆಯಿಂದಾಗಿ ತಾಲೂಕಿನಲ್ಲಿ ಸಿಗುವ ಮರಳನ್ನು ಸರ್ಕಾರ ನಿಗದಿಗೊಳಿಸಿದ ದರದಕ್ಕಿಂತಲೂ ಹೆಚ್ಚಿನ ದರಕ್ಕೆ
ಸಾಮಾನ್ಯ ಜನತೆ ಖರೀದಿಸಬೇಕಾದ ಶೋಚನೀಯ ಸ್ಥಿತಿ ಮುಂದುವರೆಯುತ್ತಿದೆ ಎಂದರು.
ಈಗಾಗಲೇ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ನೆಪದಲ್ಲಿ ಹತ್ತು ಜನರ ಮೇಲೆ ದೂರು ದಾಖಲಿಸಿದ್ದಾರೆ. ದ್ವಿಚಕ್ರ ವಾಹನ ಹಾಗೂ ಎತ್ತಿನಗಾಡಿ ವಶಪಡಿಸಿಕೊಳ್ಳುತ್ತಿದ್ದೀರಿ. ಇಂತಹ ಅನೇಕ ಸಮಸ್ಯೆಗಳಿಗೆ ಸಾಮಾನ್ಯ ಜನರಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂದರು.
ತಾಲೂಕಿನ ಗೋವಿನಕೋವಿ, ಉರುಳೆಹಳ್ಳಿ, ಮಾದಾಪುರು, ಕೊನಕನಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಮರಳು ವಿತರಿಸುವ ಕೆಲಸ ಚುರುಕುಗೊಳ್ಳಬೇಕು. ಸರ್ಕಾರಿ ಕಟ್ಟಡದ ಕೆಲಸಗಳಿಗೆ ಎಮ್ ಸ್ಯಾಂಡ್ ಬಳಸುವ ಅಗತ್ಯವೇನಿದೆ ಎಂದು ಶಾಸಕರು ಪ್ರಶ್ನಿಸಿದರು.
ಜಿಲ್ಲಾ ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‌ಪಿ ಮಂಜುನಾಥ ಗಂಗಲ್, ತಹಶೀಲ್ದಾರ ಮೊಹಮ್ಮದ್ ಮೋಯಿನ್, ಇಒ ಕೆ.ಸಿ. ಮಲ್ಲಿಕಾರ್ಜುನ್, ಭೂಗರ್ಭ ವಿಜ್ಞಾನ ಇಲಾಖೆ ಅಧಿ ಕಾರಿ ಪ್ರದೀಪ್, ಸಿಪಿಐ ಬ್ರಜೇಶ್ ಮ್ಯಾಥ್ಯೂ, ಎಸ್.ಐ. ಕಾಡದೇವಮಠ, ಮರಳು ಗುತ್ತಿಗೆದಾರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.