ಲಕ್ವಾ: ಅಪಾಯಕರ ಅಂಶಗಳು, ಪೂರ್ವ ಸೂಚನೆಗಳು ಮತ್ತು ಚಿಕಿತ್ಸೆಯ ಸಮಯ
Team Udayavani, Nov 11, 2018, 6:00 AM IST
ಹಿಂದಿನ ವಾರದಿಂದ
3. ಹೃದ್ರೋಗ
ಕೊರೊನರಿ ಆರ್ಟರಿ ಕಾಯಿಲೆ, ವಾಲ್Ì ವೈಕಲ್ಯಗಳು, ಅನಿಯಮಿತ ಹೃದಯ ಬಡಿತ (ಆರ್ಟೀರಿಯಲ್ ಫಿಬ್ರಿಲೇಶನ್) ಮತ್ತು ಹೃದಯದ ಭಾಗಗಳಲ್ಲಿ ಒಂದು ದೊಡ್ಡದಾಗುವುದರಿಂದ ರಕ್ತ ಹೆಪ್ಪುಗಟ್ಟಬಹುದು. ಇದು ಅಲ್ಲಿನ ಜಾರಿ ಮಿದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ತಡೆ ಉಂಟು ಮಾಡಬಹುದು. ಮರುಕಳಿಸುವ ಹೃದಯ ಕಾಯಿಲೆಗಳು ಮತ್ತು ಲಕ್ವಾ ತಡೆಯಲು ವೈದ್ಯರು ಶಿಫಾರಸು ಮಾಡುವ ರಕ್ತ ತೆಳುಗೊಳಿಸುವ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
4. ಮಧುಮೇಹ
ಲಕ್ವಾಕ್ಕೆ ಸಂಬಂಧಿಸಿದ ಹೇಳುವುದಿದ್ದರೆ ಮಧುಮೇಹ ಹೊಂದಿರುವುದು 15 ವರ್ಷ ವಯಸ್ಸಾದಷ್ಟು ಪರಿಣಾಮ ಹೊಂದಿರುತ್ತದೆ. ಮಧುಮೇಹವು ಸಕ್ಕರೆ ಅಥವಾ ಗುÉಕೋಸನ್ನು ದೇಹ ಉಪಯೋಗಿಸುವ ಸಾಮರ್ಥ್ಯವನ್ನು ಮಾತ್ರ ಬಾಧಿಸುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಮಧುಮೇಹವು ಮಿದುಳು ಸಹಿತ ದೇಹಾದ್ಯಂತ ರಕ್ತನಾಳಗಳಲ್ಲಿ ಹಾನಿಕರ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಅಲ್ಲದೆ, ಲಕ್ವಾ ಉಂಟಾದ ಸಂದರ್ಭದಲ್ಲಿ ರಕ್ತದ ಸಕ್ಕರೆಯ ಅಂಶ ಹೆಚ್ಚಿದ್ದರೆ ಮಿದುಳಿಗೆ ಉಂಟಾಗುವ ಹಾನಿಯೂ ಹೆಚ್ಚು ತೀವ್ರ ಮತ್ತು ತೀಕ್ಷ್ಣವಾಗಿರುತ್ತದೆ. ಮಧುಮೇಹಕ್ಕೆ ಚಿಕಿತ್ಸೆ ನೀಡುವುದರಿಂದ ಅದರ ಸಂಕೀರ್ಣ ಸಮಸ್ಯೆಗಳನ್ನು ವಿಳಂಬಿಸಬಹುದು, ಇದರಿಂದ ಲಕ್ವಾದ ಅಪಾಯ ಕಡಿಮೆಯಾಗುತ್ತದೆ.
5. ಕೊಲೆಸ್ಟರಾಲ್ ಅಸಮತೋಲನ
ಕಡಿಮೆ ಸಾಂದ್ರತೆಯ ಲಿಪೊಪ್ರೊಟೀನ್ (ಎಲ್‌ಡಿಎಲ್) ಕೊಲೆಸ್ಟರಾಲನ್ನು ರಕ್ತದ ಮೂಲಕ ಕೊಂಡೊಯ್ದು ಜೀವಕೋಶಗಳಿಗೆ ಸರಬರಾಜು ಮಾಡುತ್ತದೆ. ಎಲ್‌ಡಿಎಲ್ ಪ್ರಮಾಣ ಹೆಚ್ಚಿದರೆ ಅದು ರಕ್ತನಾಳಗಳಲ್ಲಿ ಕೊಲೆಸ್ಟರಾಲ್ ಶೇಖರವಾಗಲು ಕಾರಣವಾಗುತ್ತದೆ. ಇದರಿಂದ ಎಥೆರೊಸ್ಲೆರೋಸಿಸ್ ಉಂಟಾಗುತ್ತದೆ. ಎಥೆರೊಸ್ಲೆರೋಸಿಸ್ ರಕ್ತನಾಳಗಳು ಕಿರಿದಾಗಲು ಮುಖ್ಯ ಕಾರಣವಾಗಿದ್ದು, ಇದರಿಂದ ಹೃದಯಾಘಾತ, ಲಕ್ವಾ ಎರಡೂ ಉಂಟಾಗುತ್ತವೆ.
6. ದೈಹಿಕ ಚಟುವಟಿಕೆಗಳ ಕೊರತೆ, ಬೊಜ್ಜು ಮತ್ತು ಒತ್ತಡ
ಬೊಜ್ಜು ಮತ್ತು ದೈಹಿಕ ಚಟುವಟಿಕೆಗಳ ಕೊರತೆಗೂ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗಗಳಿಗೂ ಹತ್ತಿರದ ಸಂಬಂಧವಿದೆ. ಬ್ಯಾಂಕರುಗಳು, ಕಂಪ್ಯೂಟರ್ ಎಂಜಿನಿಯರ್‌ಗಳು, ಇತರ ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಉದ್ಯೋಗಿಗಳು ದೀರ್ಘಕಾಲ ಕುಳಿತು ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಅವರಲ್ಲಿ ದೈಹಿಕ ಚಟುವಟಿಕೆಗಳ ಪ್ರಮಾಣ ಕುಂಠಿತವಾಗುತ್ತದೆಯಲ್ಲದೆ ಮಾನಸಿಕ ಒತ್ತಡ ಅಧಿಕವಾಗಿರುತ್ತದೆ. ಇಂತಹ ಜನರಲ್ಲಿ ಸೊಂಟ ಮತ್ತು ಪೃಷ್ಠದ ಸುತ್ತಳತೆ ಸಮಾನವಾಗಿರುವುದು ಅಥವಾ ಮಧ್ಯಮ ಕ್ರಮಾಂಕಕ್ಕಿಂತ ಹೆಚ್ಚಿರುವುದು ಇಶೆಮಿಕ್ ಲಕ್ವಾದ ಅಪಾಯವನ್ನು ಮೂರುಪಟ್ಟು ವೃದ್ಧಿಸುತ್ತದೆ.
– ಮುಂದಿನ ವಾರಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.