ಯುದ್ಧ ಸ್ಮಾರಕಗಳು


Team Udayavani, Nov 11, 2018, 9:00 AM IST

3.jpg

ಕಳೆದ ವರ್ಷ ಕೆಲವೇ ತಿಂಗಳುಗಳ ಅಂತರದಲ್ಲಿ ನಮ್ಮ ದೇಶದ ರಾಜಧಾನಿ ದೆಹಲಿ ಹಾಗೂ ಫ್ರಾನ್ಸ್‌ ದೇಶದ ಪ್ಯಾರಿಸ್‌ನಲ್ಲಿರುವ ಯುದ್ಧ ಸ್ಮಾರಕಗಳನ್ನು ನೋಡುವ ಅಪೂರ್ವವಾದ ಅವಕಾಶ ಒದಗಿ ಬಂತು.

ಇಲ್ಲಿ ನಮ್ಮ ರಾಜಧಾನಿ ನವದೆಹಲಿಗೆ ಹೋಗುವವರು ಅವಶ್ಯವಾಗಿ ನೋಡಬೇಕಾದ ಸ್ಥಳ ಇಂಡಿಯಾ ಗೇಟ್‌. ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಕಟ್ಟಲ್ಪಟ್ಟ ಸ್ಮಾರಕ. ರಾಜಪಥದ ಕೊನೆಯಲ್ಲಿದೆ. ಇದರ ವಿನ್ಯಾಸಕಾರ ಸರ್‌ ಎಡ್ವಿ ನ್‌ ಲೂಟೆನ್ಸ್‌.  ಕ್ರಿ.ಶ. 1921ರ ಫೆ. 10ರಂದು ಇಂಗ್ಲೆಂಡಿನ ರಾಜಕುಮಾರನು ಇದರ ಶಿಲಾನ್ಯಾಸ ನೆರವೇರಿಸಿದ. ಭಾರತೀಯ ಸೇನಾಪಡೆಯ ಮುಖ್ಯಸ್ಥ, ಅಧಿಕಾರಿಗಳು ಹಾಗೂ ವೈಸರಾಯ್‌ ಚೆಮ್‌ ಫೋರ್ಡ್‌ ಉಪಸ್ಥಿತರಿದ್ದರು. ವೀರಯೋಧರ ಸ್ಮಾರಕವು ಎಲ್ಲರಿಗೂ ತ್ಯಾಗಮಾಡಲು ಪ್ರೇರಣೆಯಾಗಲಿ ಎಂದು ವೈಸರಾಯ್‌ ತನ್ನ ಭಾಷಣದಲ್ಲಿ ಹೇಳಿದ. ರಾಜಕುಮಾರನು ಬ್ರಿಟನ್‌ ರಾಜನ ಸಂದೇಶವನ್ನು ಹೀಗೆ ಓದಿ ಹೇಳಿದ- ಭಾರತದ ರಾಜಧಾನಿಯಲ್ಲಿ ಸ್ಥಾಪಿಸಲಾಗುವ ಈ ಸ್ಮಾರಕವು ಮುಂದಿನ ಪೀಳಿಗೆಗೆ ಹುತಾತ್ಮ ಯೋಧರ ತ್ಯಾಗ-ಬಲಿದಾನಗಳ ಪಾಠವಾಗಲಿ’. ಈ ಸಮಾರಂಭದಲ್ಲಿ ವೀರಯೋಧರಿಗೆ ರಾಯಲ… ಪದವಿಯನ್ನು ಪ್ರದಾನಿಸಲಾಯಿತು. 

ಹತ್ತು ವರ್ಷಗಳ ನಂತರ ಪೂರ್ತಿಯಾದ ಈ ಸ್ಮಾರಕವು 1931ರ ಫೆಬ್ರವರಿ 12ರಂದು ಉದ್ಘಾಟಿಸಲ್ಪಟ್ಟಿತು. ಆಗಿನ ವೈಸರಾಯ್‌ ಆಗಿದ್ದ ಲಾರ್ಡ್‌ ಇರ್ವಿನ್‌ ಈ ಸ್ಮಾರಕವನ್ನು ಕಟ್ಟಿದ ಉದ್ದೇಶವನ್ನು ಮತ್ತೆ ತನ್ನ ಭಾಷಣದಲ್ಲಿ ಹೇಳಿದ.

ಎಡ್ವಿನ್‌ ಲೂಟೆನ್‌ನ ವಿನ್ಯಾಸದಲ್ಲಿ ಯಾವುದೇ ಜಾತಿ-ಧರ್ಮದ ಕುರುಹುಗಳಿಲ್ಲ. ಇದರ ಅಗಲ 30 ಅಡಿ ಮತ್ತು ಎತ್ತರ 42 ಅಡಿ.  ಸಾಯಂಕಾಲದ ಹೊತ್ತು ದೀಪಾಲಂಕಾರದಿಂದ ಆಕರ್ಷಕವಾಗಿ ಕಾಣುವ ಈ ಸ್ಮಾರಕವು ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಈ ದ್ವಾರದ ತುತ್ತತುದಿಯಲ್ಲಿ India ಎಂದು ಎರಡೂ ಬದಿಗಳಲ್ಲಿ ಬರೆದಿದೆ. ಅದರ ಇಕ್ಕೆಲಗಳಲ್ಲಿ MCMXIV (1914 ಎಡಬದಿಯಲ್ಲಿ) ಮತ್ತು MCMXIX  (1919 ಬಲಬದಿಯಲ್ಲಿ) ನಮೂದಿಸಲಾಗಿದೆ.  India ಎನ್ನುವುದರ ಕೆಳಗೆ ಫ್ರಾನ್ಸ್‌ ಮತ್ತು ಫಾಂಡರ್ಸ್‌, ಮೆಸಪೊಟೇಮಿಯ ಮತ್ತು ಪರ್ಷಿಯ, ಪೂರ್ವ ಆಫ್ರಿಕಾ, ಗಲ್ಲಿಪೊಲಿ, ಮೂರನೇ ಅಫ್ಘಾನ್‌ ಯುದ್ಧದಲ್ಲಿ ಮೃತರಾದ ಸೈನಿಕರ ಗೌರವಾರ್ಥ ಎಂದು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. 13,218 ಹುತಾತ್ಮರ ಹೆಸರುಗಳು ಈ ಸ್ಮಾರಕದ ಮೇಲೆ ನಮೂದಿಸಲ್ಪಟ್ಟಿವೆ. ತುಂಬಾ ಹತ್ತಿರ ಹೋಗಿ ಹೆಸರುಗಳನ್ನು ಓದಲಾಗುವುದಿಲ್ಲ. ಈ ಹೆಸರುಗಳು ಇಂಡಿಯಾ ಗೇಟ್‌ ಜಾಲತಾಣದಲ್ಲಿ ಪೂರ್ಣ ವಿವರಗಳೊಂದಿಗೆ ಲಭ್ಯವಿವೆ. ಹುತಾತ್ಮಳಾದ ದಾದಿಯೊಬ್ಬಳ ಹೆಸರೂ ಇದೆ.

ಅಮರ ಜವಾನ ಜ್ಯೋತಿ:  ಇದು ಇಂಡಿಯಾ ಗೇಟಿನ ಕೆಳಗೆ ಇರುವ ಕಪ್ಪು ಅಮೃತಶಿಲೆಯಲ್ಲಿ ರಚಿಸಿದ ಸಮಾಧಿ.  ಇದರ ಮೇಲೆ ತಲೆಕೆಳಗಾಗಿರಿಸಿರುವ ಔ1ಅ1 ಬಂದೂಕಿದೆ.  ಬಂದೂಕಿನ ಮೇಲೆ ಸೈನಿಕನ ಶಿರಸ್ತ್ರಾಣ ಇದೆ. ಇದರ ನಾಲ್ಕೂ ಮೂಲೆಗಳಲ್ಲಿ ಸತತವಾಗಿ ಉರಿಯುವ ಜ್ಯೋತಿ ಇದೆ.  1971ರ ಬಾಂಗ್ಲಾ ಯುದ್ಧದಲ್ಲಿ ಮಡಿದ ಸೈನಿಕರ ಗೌರವಾರ್ಥ ಇದನ್ನು ಸ್ಥಾಪಿಸಲಾಯಿತು. 1972ರ ಜನವರಿ 26ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಇದರ ಉದ್ಘಾಟನೆ ನೆರವೇರಿಸಿದರು. ಭಾರತೀಯ ಸೇನಾಪಡೆಯ ಮೂರೂ ವಿಭಾಗಗಳ ಸೈನಿಕರು ಸತತವಾಗಿ ಇದನ್ನು ಕಾಯುತ್ತಾರೆ. ದೇಶದ ಪ್ರಧಾನಮಂತ್ರಿ ಪ್ರತಿ ಗಣರಾಜ್ಯ ದಿನದಂದು ಹೂಗುತ್ಛವನ್ನರ್ಪಿಸಿ ಗೌರವ ಸಲ್ಲಿಸುತ್ತಾರೆ. ವಿಜಯದಿವಸದಂದು ಗೌರವ ಸಲ್ಲಿಸುವ ಸರದಿ ಸೇನಾವಿಭಾಗಗಳ ಮುಖ್ಯಸ್ಥರದು.

ಅಲ್ಲಿ 
ಪ್ಯಾರಿಸ್‌ ನಗರದಲ್ಲಿ ಇರುವ ಯುದ್ಧದ ಸ್ಮಾರಕವು (ಆರ್ಕ್‌ ಡ್ಯು ಟ್ರಿಯುಂಫ್) ಅಲ್ಲಿನ ಪ್ರಮುಖವಾದ ಆಕರ್ಷಣೆ ಆಗಿದೆ. ಸೈನ್‌ ನದಿಯ ಬಲದಂಡೆಯಲ್ಲಿರುವ ಈ ಸ್ಮಾರಕದ ವರ್ತುಲಕ್ಕೆ ಹನ್ನೆರಡು ರಸ್ತೆಗಳು ಬಂದು ಕೂಡುತ್ತವೆ. ಫ್ರೆಂಚ್‌ ಕ್ರಾಂತಿ ಮತ್ತು ನೆಪೋಲಿಯನ್‌ ಯುದ್ಧದಲ್ಲಿ ಫ್ರಾನ್ಸ್‌ ಪರವಾಗಿ ಹೋರಾಡಿ ಮಡಿದ ಯೋಧರ ಸ್ಮಾರಕವಾಗಿ ಕಟ್ಟಲಾಗಿದೆ.
ಜೀನ್‌ ಚಾಲ್‌ ಗ್ರಿನ್‌ ಎಂಬಾತನು ಕ್ರಿ.ಶ. 1806ರಲ್ಲಿ ನೆಪೋಲಿಯನ್ನನ ಅಣತಿಯಂತೆ ಇದರ ನಕ್ಷೆಯನ್ನು ತಯಾರಿಸಿದ. ಮರದ ಮಾದರಿಯೊಂದು ಈ ಸ್ಥಳದಲ್ಲಿ ಕೆಲವು ವರ್ಷಗಳ ಕಾಲ ಪ್ರದರ್ಶನಕ್ಕಿತ್ತು. 1811ರಲ್ಲಿ ಚಾಲ್‌ ಗ್ರಿನ್‌ ಮೃತನಾದ. ಇದರ ನಂತರ ಪದೇಪದೇ ವಿಘ್ನಗಳುಂಟಾದವು. ಕೊನೆಗೂ ಲೂಯಿ ಫಿಲಿಪ್‌ ರಾಜನ ಕಾಲದಲ್ಲಿ ಪೂರ್ಣಗೊಂಡು 1836ರಲ್ಲಿ ಈ ಯುದ್ಧ ಸ್ಮಾರಕ ಉದ್ಘಾಟಿತವಾಯಿತು.

ಸೈನಿಕ ಪಡೆಗಳ ವಿಜಯದ ಪಥ ಸಂಚಲನಗಳು, ವಾರ್ಷಿಕ ಪೆರೇಡುಗಳು ಇಲ್ಲಿ ನಡೆಯುತ್ತಿದ್ದವು.  ನೆಪೋಲಿಯನ್ನನ ಅಂತಿಮಯಾತ್ರೆಯು ಈ ನಿರ್ಮಾಣದ ಕೆಳಗೆ ಸಾಗಿ ಸಮಾಧಿ ಸ್ಥಳಕ್ಕೆ ರವಾನೆಯಾಯಿತು (1840ರಲ್ಲಿ). ಮೇ 22, 1885ರ ರಾತ್ರಿ ವಿಕ್ಟರ್‌ ಹ್ಯೂಗೋನ ಶವವನ್ನು ಇದರ ಕೆಳಗೆ ಇಡಲಾಗಿತ್ತು. ಚಾಲ್ಸ…ì ಗಾಡ್‌ ಫ್ರೈ ಎಂಬ ವಿಮಾನ ಚಾಲಕ 1919ರಲ್ಲಿ ಈ ನಿರ್ಮಾಣದ ಕೆಳಗಿನಿಂದ ತನ್ನ ಯುದ್ಧ ವಿಮಾನವನ್ನು ಹಾರಿಸಿಕೊಂಡು ಹೋಗಿದ್ದ. ಈ ಸಂದರ್ಭವನ್ನು ಚಿತ್ರೀಕರಿಸಲಾಯಿತು.

50 ಮೀ. ಎತ್ತರ, 45 ಮೀ. ಅಗಲವಿರುವ ಈ ಸ್ಮಾರಕದ ಒಳಭಾಗದಲ್ಲಿ 30 ಫ್ರೆಂಚ್‌ ವಿಜಯಗಳನ್ನು ನಮೂದಿಸಲಾಗಿದೆ.  ಹಾಗೆಯೇ 660 ಫ್ರೆಂಚ್‌ ಸೈನ್ಯದ ಪ್ರಮುಖರ ಹೆಸರುಗಳನ್ನು ಬರೆಯಲಾಗಿದೆ.  ರೋಮನ್‌ ಮಾದರಿಯ ಈ ಕಟ್ಟಡದ ಹೊರಮೈಯಲ್ಲಿ ಪ್ರಸಿದ್ಧವಾದ ಶಿಲ್ಪಿಗಳನ್ನು ಪ್ರತಿನಿಧಿಸುವ ಕಲಾಕೃತಿಗಳು ಅಡಕವಾಗಿವೆ.  ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಅನಾಮಧೇಯ ಸೈನಿಕನ ಸಮಾಧಿ ಇದರ ಕೆಳಗಿದೆ. ಇದಲ್ಲದೆ ಸತತವಾಗಿ ಉರಿಯುವ ಜ್ಯೋತಿಯೊಂದನ್ನು ಎರಡೂ ಮಹಾಯುದ್ಧಗಳಲ್ಲಿ ಮಡಿದ ಯೋಧರ ಸ್ಮರಣಾರ್ಥ ಇಡಲಾಗಿದೆ.

ಕಟ್ಟಡದ ಮೇಲ್ಛಾವಣಿಗೆ ಮೆಟ್ಟಿಲುಗಳ ಮೂಲಕ ಅಥವಾ ಲಿಫ್ಟಿನ ಮೂಲಕ ಹೋಗಬಹುದು. ಮೇಲ್ಛಾವಣಿಯ ಒಂದು ಅಂತಸ್ತು ಕೆಳಗೆ ಈ ಸ್ಮಾರಕವನ್ನು ವಿವರಿಸುವ ವಸ್ತು ಸಂಗ್ರಹಾಲಯವಿದೆ.  ಮೇಲ್ಛಾವಣಿಯಲ್ಲಿ ನಿಂತು ನೋಡಿದರೆ ಇಡೀ ಪ್ಯಾರಿಸ್‌ ನಗರದ ಮನಮೋಹಕ ದೃಶ್ಯ ಲಭ್ಯ. 

ಉಮಾಮಹೇಶ್ವರಿ ಎನ್‌.

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.