ವಿಶ್ವ ಕುಸ್ತಿ ರ್‍ಯಾಂಕಿಂಗ್ ಭಜರಂಗ್ ಪೂನಿಯ ನಂ. 1
Team Udayavani, Nov 11, 2018, 6:00 AM IST
ಹೊಸದಿಲ್ಲಿ: ಭಾರತ ತಾರಾ ಕುಸ್ತಿಪಟು ಭಜರಂಗ್ ಪೂನಿಯ 65 ಕೆಜಿ ವಿಭಾಗದ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಏರುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಸಾಧನೆಗೈದಿದ್ದಾರೆ. ಅವರು ಪುರುಷರ ವಿಭಾಗದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕುಸ್ತಿ ಪಟು ಎಂಬುದೊಂದು ವಿಶೇಷ.
ಪ್ರಸಕ್ತ ಋತುವಿನಲ್ಲಿ 5 ಪದಕಗಳನ್ನು ಗೆದ್ದಿರುವ ಭಜರಂಗ್ “ಯುನೈಟೆಡ್ ವರ್ಲ್ಡ್ ರೆಸ್ಲಿಂಗ್’ ಪಟ್ಟಿಯಲ್ಲಿ 96 ಅಂಕಗಳೊಂದಿಗೆ ನಂಬರ್. 1 ಸ್ಥಾನಕ್ಕೇರಿದ್ದಾರೆ. 5 ಪದ ಕಗಳಲ್ಲಿ ಕಾಮನ್ವೆಲ್ತ್ ಗೇಮ್ಸ್, ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಹಾಗೂ ವಿಶ್ವ ಚಾಂಪಿಯನ್ ಶಿಪ್‌ನ ಬೆಳ್ಳಿ ಪದಕಗಳು ಸೇರಿವೆ.
66 ಅಂಕಗಳನ್ನುಗಳಿಸಿರುವ ಕ್ಯೂಬಾದ ಅಲೆ ಜಾಂಡ್ರೊ ಎನ್ರಿಕ್ ಲಾದೆಸ್ ಟೊಬೈರ್ 2ನೇ ಸ್ಥಾನ ಹಾಗೂ ರಶ್ಯದ ಅಕ್ಮದ್ ಚಕೇವ್ 62 ಅಂಕಗಳಿಂದ 3ನೇ ಸ್ಥಾನದಲ್ಲಿದ್ದಾರೆ. ಭಜರಂಗ್ ಬುಡಾ ಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಟೊಬೈರ್ ಅವರನ್ನು ಸೆಮಿಫೈನಲ್‌ನಲ್ಲಿ ಸುಲಭವಾಗಿ ಸೋಲಿಸಿದ್ದರು.
ಪೂಜಾ ದಂಡಾ 6ನೇ ಸ್ಥಾನ
ವನಿತೆಯರ ವಿವಿಧ ವಿಭಾಗಗಳಲ್ಲಿ ಭಾರತದ 5 ಕುಸ್ತಿಪಟು ಗಳು ಅಗ್ರ ಹತ್ತರಲ್ಲಿ ಸ್ಥಾನಗಳಿಸಿದ್ದಾರೆ.ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ ಜಯಿಸಿದ ಪೂಜಾ ದಂಡಾ 57 ಕೆಜಿ ವಿಭಾಗದಲ್ಲಿ 52 ಅಂಕಗಳೊಂದಿಗೆ 6ನೇ ಸ್ಥಾನ ಗಳಿಸಿದ್ದಾರೆ. 50 ಕೆಜಿ ವಿಭಾಗದಲ್ಲಿ 33 ಅಂಕಗಳಿಸಿರುವ ರಿತು ಪೋಗಾಟ್ 10ನೇ ಸ್ಥಾನ, 59 ಕೆಜಿ ವಿಭಾಗದಲ್ಲಿ ಸರಿತಾ ಮೋರ್ 7ನೇ ಸ್ಥಾನ, 68 ಕೆಜಿ ವಿಭಾಗದಲ್ಲಿ ನವ್ ಜೋತ್ ಕೌರ್ 9ನೇ ಸ್ಥಾನ ಹಾಗೂ 76 ಕೆಜಿ ವಿಭಾಗದಲ್ಲಿ ಕಿರಣ್ 9ನೇ ಸ್ಥಾನ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ
Australia vs Pakistan T20: ಪಾಕ್ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.