ಪವರ್ ಸ್ಟಾರ್!
Team Udayavani, Nov 12, 2018, 4:00 AM IST
ಲೆನೊವೋ ತೆಕ್ಕೆಗೆ ಬಂದ ನಂತರ ಮೊಟೊ ಅನೇಕ ಫೋನ್‌ಗಳನ್ನು ಭಾರತಕ್ಕೆ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಈಗ ಸುದ್ದಿ ಆಗುತ್ತಿರುವುದು ಮೊಟೊರೊಲಾ ಒನ್ ಪವರ್. ಉತ್ತಮ ಬ್ಯಾಟರಿಯೇ ಇದರ ಹೈಲೈಟ್…
ಅಂದು ನೊಕಿಯಾ ಯುಗದಲ್ಲಿ ಮೊಟೊರೊಲಾ ಫೋನುಗಳು ವಿಭಿನ್ನ ಕ್ರಶ್ ಹುಟ್ಟಿಸಿದ್ದವು. ತದನಂತರ ಆ ಮೊಬೈಲಿನ ವಿಳಾಸವೇ ಬದಲಾಗುತ್ತಾ ಹೋಯಿತು. ಅಮೆರಿಕಾ ಮೂಲದ ಮೊಟೊರೊಲಾ ಮೊಬಿಲಿಟಿ ಕಂಪನಿಯನ್ನು “ಗೂಗಲ್’ ಖರೀದಿಸಿ, 2013ರಲ್ಲಿ “ಮೋಟೋ ಜಿ’ ಅವತಾರದಲ್ಲಿ ಗ್ರಾಹಕರ ಕೈಸೇರಿತು.
“ಕಡಿಮೆ ಬಜೆಟ್ಟಿನಲ್ಲಿ ಸಿಗುವ ಉತ್ತಮ ಸ್ಮಾರ್ಟ್‌ಫೋನ್’ ಎಂಬ ಹೆಗ್ಗಳಿಕೆ ಆ ಮೊಬೈಲಿಗೆ ಸಿಕ್ಕಿತಾದರೂ, ಗೂಗಲ್ ಕಂಪನಿ ಯಾಕೋ ಇದನ್ನು ಸಾಕಲಾಗದೇ, ಅದೇ ವರ್ಷದ ಅಕ್ಟೋಬರ್‌ನಲ್ಲಿ ಮೊಟೊರೊಲಾ ಮೊಬಿಲಿಟಿಯನ್ನು ಚೀನಾದ ಲೆನೊವೋ ಕಂಪನಿಗೆ ಮಾರಿತು.
ಮೊಟೊರೊಲಾ ಈಗ ಲೆನೊವೋದ ಕೂಸು ಎಂದು ಎಷ್ಟೋ ಜನರಿಗೆ ಗೊತ್ತೇ ಇಲ್ಲ! ಲೆನೊವೋ ತೆಕ್ಕೆಗೆ ಬಂದ ನಂತರ ಮೊಟೊ ಅನೇಕ ಫೋನ್‌ಗಳನ್ನು ಭಾರತಕ್ಕೆ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಈಗ ಸುದ್ದಿ ಆಗುತ್ತಿರುವುದು ಮೊಟೊರೊಲಾ ಒನ್ ಪವರ್. ಉತ್ತಮ ಬ್ಯಾಟರಿಯೇ ಇದರ ಹೈಲೈಟ್.
ಇದರೊಳಗೆ ಏನೈತೆ?: ಮಧ್ಯಮ ವಿಭಾಗದ ಈ ಮೊಬೈಲ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 636 ಅಕ್ಟೋ ಕೋರ್‌ಗಳ (1.8 ಗಿ.ಹ) ಪ್ರೊಸೆಸರ್ ಹೊಂದಿದೆ. 64 ಜಿಬಿ ಆಂತರಿಕ ಸಂಗ್ರಹ ಹಾಗೂ 4 ಜಿಬಿ ರ್ಯಾಮ್ ಒಳಗೊಂಡಿದೆ. 16 ಮೆಗಾ ಪಿಕ್ಸೆಲ್ ಮತ್ತು 5 ಮೆಗಾಪಿಕ್ಸೆಲ್‌ನ ಹಿಂಬದಿ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್‌ನ ಮುಂಬದಿ ಕ್ಯಾಮೆರಾ ಗಮನ ಸೆಳೆಯುವಂತಿದೆ.
5000 ಸಾವಿರ ಎಂಎಎಚ್ ಬ್ಯಾಟರಿಯೇ ಇದರ ಹೈಲೈಟ್. ಕ್ಯಾಮೆರಾ, ವಿನ್ಯಾಸ ಹೇಗಿದ್ದರೂ ಸೈ, ಮೊಬೈಲ್‌ನಲ್ಲಿ ಚಾರ್ಜ್ ನಿಲ್ಲುವುದು ಮುಖ್ಯ ಎನ್ನುವವರಿಗೆ ಈ ಮೊಬೈಲ್ ಹೇಳಿಮಾಡಿಸಿದ್ದು. “ಕೇವಲ 15 ನಿಮಿಷ ಚಾರ್ಜ್ ಮಾಡಿದರೆ 6 ಗಂಟೆಗಳ ಕಾಲ ಬಳಸಬಹುದು’ ಎನ್ನುತ್ತದೆ ಕಂಪನಿ. ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದೆ. ಟಬೋì ಚಾರ್ಜ್ (ಅಂದರೆ ಫಾಸ್ಟ್ ಚಾರ್ಜ್) ಇದೆ. ಫೋನ್ ಬೇಗ ಚಾರ್ಜ್ ಆಗಲು ಫಾಸ್ಟ್ ಚಾರ್ಜ್ ಇದ್ದರೆ ಅನುಕೂಲ.
ಈ ಫೋನು ಗೂಗಲ್‌ನ ಅಂಡ್ರಾಯ್ಡ ಒನ್ ಪ್ರೋಗ್ರಾಂಗೆ ಸೇರಿದೆ. ಹೀಗಾಗಿ ಅಂಡ್ರಾಯ್ಡನ ಅಪ್‌ಡೇಟ್‌ಗಳು, ಸೆಕ್ಯೂರಿಟಿ ಪ್ಯಾಚ್‌ಗಳು ಉಳಿದ ಫೋನ್‌ಗಳಿಗಿಂತ ಇದಕ್ಕೆ ಬೇಗನೆ ದೊರಕುತ್ತವೆ. ಈಗ ಇದಕ್ಕೆ ಅಂಡ್ರಾಯ್ಡ 8.1 ಓರಿಯೋವನ್ನೇ ಕೊಡಲಾಗಿದೆ. ಶೀಘ್ರವೇ ಪಿ (ಪೈ) ಅಪ್‌ಡೇಟ್ ಸಿಗಲಿದ್ದು, ಈ ಫೋನ್‌ಗೆ ಖಚಿತವಾಗಿ “ಪಿ’ ಮುಂದಿನ ಅಪ್‌ಡೇಟ್ ಆದ “ಕ್ಯೂ’ ಕೂಡ ನೀಡುವುದಾಗಿ ಮೊಟೋ ತಿಳಿಸಿದೆ.
ಸಾಮಾನ್ಯವಾಗಿ ಮೊಟೊರೊಲಾ ಫೋನ್‌ಗಳು ಅವುಗಳಲ್ಲಿರುವ ಸ್ಪೆಸಿಫಿಕೇಷನ್‌ಗಳಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ದರ ಹೊಂದಿರುತ್ತಿದ್ದವು. ಆದರೆ, ಈ ಫೋನ್ ದರ ಸ್ಪೆಸಿಫಿಕೇಷನ್‌ಗಳಿಗೆ ಅನುಗುಣವಾಗಿಯೇ ಇದೆ. 6.2 ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇದ್ದು, ಇತ್ತೀಚಿನ ಫ್ಯಾಷನ್ ಆದ ನಾಚ್ ಹೊಂದಿದೆ. (ನಾಚ್ ಅಂದರೆ ಡಿಸ್‌ಪ್ಲೇ ಮೇಲೆ ಸ್ಪೀಕರ್ ಮತ್ತು ಸೆಲ್ಫಿà ಕ್ಯಾಮೆರಾಗೆ ಮಾತ್ರ ಜಾಗ ಬಿಟ್ಟು, ಮೇಲಿನವರೆಗೂ ಡಿಸ್‌ಪ್ಲೇ ಇರುವುದು) 19:9 ರಷ್ಟು ಪರದೆ ಮತ್ತು ಅಂಚಿನ ಅನುಪಾತ ಇದೆ. ಡಾಲ್ಬಿ ಆಡಿಯೋ ನೀಡಲಾಗಿದೆ. ಎಫ್.ಎಂ. ಸೌಲಭ್ಯ ಇದ್ದೇ ಇದೆ.
ಮೆಟಲ್ ಬಾಡಿ ಹೊಂದಿದೆ. ಪರದೆ ಸುಲಭವಾಗಿ ಒಡೆದು ಹೋಗದಂತೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ರಕ್ಷಣೆಯನ್ನೂ ನೀಡಲಾಗಿದೆ. ಫಿಂಗರ್‌ಪ್ರಿಂಟ್ ಸೆನ್ಸಾರ್ ಇದೆ. ಆದರೆ, ಫೇಸ್ ಅನ್‌ಲಾಕ್ ಇಲ್ಲದಿರುವುದು ಅಚ್ಚರಿಯ ವಿಷಯ. ಈಗ 7 ಸಾವಿರ ರೂ.ನ ಫೋನ್‌ಗಳಲ್ಲೂ ಫೇಸ್ ಅನ್‌ಲಾಕ್ ಇರುತ್ತದೆ. ಶಿಯೋಮಿ, ಆನರ್, ಇತ್ತೀಚಿಗೆ ಈ ಲೀಗ್ ಸೇರಿಕೊಂಡ ರಿಯಲ್ ಮಿ ಫೋನ್‌ಗಳ ಸ್ಪರ್ಧೆ ಎದುರಿಸಲು ಲೆನೊವೋ ಸಿದ್ಧತೆ ಮಾಡಿಕೊಂಡು ಈ ಫೋನ್ ಅನ್ನು ಬಿಡುಗಡೆ ಮಾಡಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಇದಕ್ಕೆ ನಿಗದಿ ಪಡಿಸಿರುವ ದರ 16000 ರೂಪಾಯಿ. ದೀಪಾವಳಿಯಲ್ಲಿ ಆನ್‌ಲೈನ್ ಮೂಲಕ ಇದನ್ನು ಖರೀದಿಸಿರುವವರು ಇದುವರೆಗೆ 25,400 ಮಂದಿ ರೇಟಿಂಗ್ ನೀಡಿದ್ದಾರೆ. 5ಕ್ಕೆ 4.4 ರೇಟಿಂಗ್ ಕೊಟ್ಟಿದ್ದಾರೆ. ಅದರಲ್ಲಿ ಕ್ಯಾಮೆರಾಗೆ 3.3, ಬ್ಯಾಟರಿಗೆ 4.6, ಡಿಸ್‌ಪ್ಲೇಗೆ 4.1, ಹಣಕ್ಕೆ ತಕ್ಕ ಮೌಲ್ಯಕ್ಕೆ 4.7, ಕಾರ್ಯಕ್ಷಮತೆಗೆ 4.6 ರೇಟಿಂಗ್ ನೀಡಿದ್ದಾರೆ. “ಕ್ಯಾಮೆರಾ ನಿರೀಕ್ಷಿತ ಮಟ್ಟದಲ್ಲಿಲ್ಲ’ ಎಂದು ಹೇಳಿದ್ದಾರೆ.
* ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.