“ಭಾರತ ಟೆಸ್ಟ್ ತಂಡದಲ್ಲಿ ರೋಹಿತ್ಗೆ ಸ್ಥಾನವಿರಲಿ’
Team Udayavani, Nov 12, 2018, 6:40 AM IST
ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ರೋಹಿತ್ ಶರ್ಮ ಇರಬೇಕು ಎಂದು ಭಾರತದ ಮಾಜಿ ಆರಂಭಕಾರ ವಿರೇಂದ್ರ ಸೆಹವಾಗ್ ಅಭಿಪ್ರಾಯಪಟ್ಟಿದ್ದಾರೆ.
“ಏಕದಿನದಲ್ಲಿ 3 ದ್ವಿಶತಕಗಳನ್ನು ಬಾರಿಸಿರುವ ರೋಹಿತ್ ಶರ್ಮ ಅವರು ಟೆಸ್ಟ್ ಪಂದ್ಯಗಳಿಂದ ಖಂಡಿತವಾಗಿಯೂ ಹೊರಗುಳಿಯಬಾರದು. ಅವರನ್ನು ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಆರಿಸಬೇಕು. ಈ ವಿಚಾರವನ್ನು ನಾನು ಅನೇಕ ದಿನಗಳಿಂದ ಸೂಚಿಸುತ್ತ ಬಂದಿದ್ದೇನೆ’ ಎಂದು ಸೆಹ ವಾಗ್ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಭಾರತದ ಆಟಗಾರರು ಆಸ್ಟ್ರೇಲಿಯದಲ್ಲಿ ಹೆಚ್ಚುವರಿ ವೇಗಿಗ ಳನ್ನು ಎದುರಿಸಬೇಕಾಗುತ್ತದೆ. ಮೊದಲ ಇನ್ನಿಂಗ್ಸ್ ನಲ್ಲಿ ದೊಡ್ಡ ಸ್ಕೋರ್ ದಾಖಲಿಸುವುದು ಅತೀ ಅಗತ್ಯ. ಇದು ಗೆಲುವಿಗೆ ನೆರವಾಗುವ ಸಾಧ್ಯತೆ ಹೆಚ್ಚು ಎಂದು ಸೆಹವಾಗ್ ಹೇಳಿದರು.
“ಇಂಗ್ಲೆಂಡ್ನಲ್ಲಿ ಸ್ವಿಂಗ್, ದಕ್ಷಿಣ ಆಫ್ರಿಕಾದಲ್ಲಿ ಸೀಮ್ ಅಂಶ ಹೆಚ್ಚಿರುತ್ತದೆ. ಆದರೆ ಆಸ್ಟ್ರೇಲಿಯದಲ್ಲಿ ಹೆಚ್ಚುವರಿ ಬೌನ್ಸ್ಗಳಿ ರುತ್ತವೆ. ಇದಕ್ಕೆ ಹೊಂದಿಕೊಂಡರೆ ಇಡೀ ದಿನ ರನ್ಗಳಿಸಬ ಹುದು. ಕಳೆದ ಬಾರಿ ಕೊಹ್ಲಿ ಟೆಸ್ಟ್ ಸರಣಿಯಲ್ಲಿ 4 ಶತಕ ಬಾರಿಸಿ ಮೆರೆದಿದ್ದರು’ ಎಂದು ವೀರೂ ನೆನಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.