ತಿರುಗಾಟಕ್ಕೆ ಹೊರಟ ಮೇಳಗಳು: ಯಕ್ಷಪಯಣ ಆರಂಭ
Team Udayavani, Nov 12, 2018, 2:15 AM IST
ಕುಂದಾಪುರ: ಯಕ್ಷಗಾನ ತಿರುಗಾಟಕ್ಕೆ ಮೇಳಗಳು ರವಿವಾರದಿಂದ ಗೆಜ್ಜೆ ಕಟ್ಟಿದ್ದು ಇನ್ನು ಮೇ ತಿಂಗಳ ಪತ್ತನಾಜೆವರೆಗೆ ಕರಾವಳಿಯ ಎಲ್ಲೆಡೆ ಬಯಲುಗಳಲ್ಲಿ ಝಗಮಗಿಸುವ ದೀಪಗಳಲ್ಲಿ ತಕಧಿಮಿ ನಾದದೊಂದಿಗೆ ಯಕ್ಷಲೋಕ ಅನಾವರಣಗೊಳ್ಳಲಿದೆ.
ಚಾಲನೆ
ನವರಸಗಳನ್ನು ಸ್ಪುರಿಸುವ, ಭಕ್ತಿಭಾವದಲ್ಲಿ ಮಿಂದೇಳಿಸುವ, ಯಕ್ಷಗಾನದ ಮೇಳಗಳ ಈ ವರ್ಷದ ತಿರುಗಾಟಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆತಿದೆ. ಸರಿಸುಮಾರು 190 ಆಟಗಳನ್ನು ಈ ತಿರುಗಾಟದಲ್ಲಿ ಮೇಳಗಳು ಪ್ರದರ್ಶಿಸಲಿವೆ. ಇಂದಿನಿಂದ ಪತ್ತನಾಜೆವರೆಗೆ ತಿರುಗಾಟ ಇರುತ್ತದೆ. ಮಳೆಗಾಲದಲ್ಲಿ ಮೊದಲು ಕಲಾವಿದರಿಗೆ ಪೂರ್ಣವಿರಾಮ ಇದ್ದರೂ ಈಗ ಗಾನವೈಭವ, ನಾಟ್ಯವೈಭವ, ಕಾಲಮಿತಿ ಯಕ್ಷಗಾನಗಳ ಮೂಲಕ ಕಲಾವಿದರೂ ಬಿಡುವಿಲ್ಲದೇ ಕಲಾಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಷ್ಟಕ್ಕಿಲ್ಲ ಸ್ಪಂದನೆ
ಇರುಳಲ್ಲಿ ಸ್ವರ್ಗಾಧಿಪತಿಯಾದರೂ ವೇಷ ತೆಗೆದಾಗ ನರಕಯಾತನೆ ತಪ್ಪಿದ್ದಲ್ಲ. ಇಂತಹ ಸಂಕಷ್ಟ ಉಳ್ಳ ಕಲಾವಿದರಿಗೆ ನೆರವಾಗಲು ಧರ್ಮಸ್ಥಳದಂತಹ ಕೆಲವು ಮೇಳಗಳು ವಿಮೆ ಮಾಡಿಸುತ್ತಿವೆ. ಕಟೀಲಿನಂತಹ ಮೇಳಗಳು ಮಳೆಗಾಲದ ಅವಧಿಯಲ್ಲಿ ಅರ್ಧ ಸಂಬಳ ಕೊಡುತ್ತಿವೆ. ಯಕ್ಷಗಾನ ಸಂಬಂಧಿ ಯಕ್ಷಧ್ರುವ ಪಟ್ಲದಂತಹ ಸಂಘಟನೆಗಳು ಒಂದಷ್ಟು ನೆರವಾಗುತ್ತಿವೆ. ಮಂದರ್ತಿ ಮೇಳ ವರ್ಷವಿಡೀ ಹರಕೆಯಾಟ ಆಡಿಸುವ ಮೂಲಕ ಕಲಾವಿದರಿಗೆ ವಿರಾಮದ ದಿನಗಳಲ್ಲಿ ಕೆಲಸ ಇಲ್ಲ ಎಂಬ ಅಪವಾದ ತೆಗೆದುಹಾಕಿದೆ. ಆದರೆ ಸರಕಾರ, ಅಕಾಡೆಮಿ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂಬ ಕೂಗು ಕಲಾವಿದರದ್ದು.
ಬೇಡಿಕೆ
50ಕ್ಕಿಂತ ಅಧಿಕ ಮೇಳಗಳು ತೆಂಕು ಬಡಗಿನಲ್ಲಿದ್ದರೂ ಯಕ್ಷಗಾನದ ಬೇಡಿಕೆ ಕುಂದಿಲ್ಲ. ಕಟೀಲು, ಮಂದರ್ತಿ, ಧರ್ಮಸ್ಥಳ ಮೊದಲಾದ ಮೇಳಗಳಿಗೆ ಇನ್ನೂ ಕೆಲವು ದಶಕಗಳಿಗೆ ಆಗುವಷ್ಟು ಹರಕೆ ಯಕ್ಷಗಾನಗಳಿಗೆ ಬೇಡಿಕೆ ಇದೆ. ಈ ವರ್ಷ ತೆಂಕಿನಲ್ಲಿ ಸುಬ್ರಹ್ಮಣ್ಯ ಮೇಳ ಹೊಸದಾಗಿ ಆರಂಭವಾಗುತ್ತಿದೆ. ಟೆಂಟಿನ ಮೇಳಕ್ಕೆ ಕಲೆಕ್ಷನ್ ಕಮ್ಮಿ ಎನ್ನುವ ಅಪವಾದ ಇದೆ. ಈ ನಿಟ್ಟಿನಲ್ಲಿ ಕಾಲಮಿತಿ ಪ್ರದರ್ಶನಗಳ ಕಡೆಗೆ ಜನರ ಒಲವು ಹೆಚ್ಚುತ್ತಿದೆ.
ಮೇಳಗಳ ಆರಂಭ ದಿನಾಂಕ
ಬಡಗುತಿಟ್ಟು
ಹಟ್ಟಿಯಂಗಡಿ ಮೇಳ ನ. 11, ಮೇಗರವಳ್ಳಿ ಮೇಳ ನ. 11, ಪೆರ್ಡೂರು ಮೇಳ ನ.12, ಸಾಲಿಗ್ರಾಮ ಮೇಳ ನ.15, ಕಮಲಶಿಲೆ ಮೇಳ ನ. 17, ಅಮೃತೇಶ್ವರಿ ಮೇಳ ನ.17, ಆಜ್ರಿ ಮೇಳ ನ.17, ಮಾರಣಕಟ್ಟೆ ಮೇಳ ನ. 18, ಮಂದಾರ್ತಿ ಮೇಳ ನ. 19, ಸೌಕೂರು ಮೇಳ ನ. 19, ಗೋಳಿಗರಡಿ ಮೇಳ ನ. 20, ನೀಲಾವರ ಮೇಳ ನ.21, ಹಾಲಾಡಿ ಮೇಳ ನ.26.
ತೆಂಕುತಿಟ್ಟು
ಶ್ರೀ ಧರ್ಮಸ್ಥಳ ಮೇಳ ನ. 14, ಹನುಮಗಿರಿ ಮೇಳ ನ.21, ಸುಂಕದಕಟ್ಟೆ ಮೇಳ ನ. 21, ಶ್ರೀ ದೇಂತಡ್ಕ ಮೇಳ ನ. 23, ಸಸಿಹಿತ್ಲು ಮೇಳ ನ.25, ಬಪ್ಪನಾಡು ಮೇಳ ನ.30, ಕಟೀಲು ಮೇಳಗಳು ಡಿ.2, ಮಂಗಳಾದೇವಿ ಮೇಳ (ಡಿಸೆಂಬರ್ ಪ್ರಥಮ ವಾರದಲ್ಲಿ), ಬಾಚಕೆರೆ ಮೇಳ (ನವೆಂಬರ್ ಕೊನೆಯ ವಾರ) ತಿರುಗಾಟಕ್ಕೆ ಹೊರಡಲಿವೆ.
ಹೊಸಪ್ರಸಂಗ
ಟೆಂಟ್ ಮೇಳಗಳಾದ ಪೆರ್ಡೂರು ಮೇಳದವರು ಶತಮಾನಂ ಭವತಿ, ಸಾಲಿಗ್ರಾಮ ಮೇಳದವರು ಚಕ್ರ ಪೌರ್ಣಮಿ, ಕಸ್ತೂರಿ ತಿಲಕ ಪ್ರಸಂಗಗಳನ್ನು ಈ ವರ್ಷದ ನೂತನ ಆಖ್ಯಾನವಾಗಿ ಪ್ರದರ್ಶಿಸಲಿವೆ.
— ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.