3 ಬಾರಿಯೂ ದೀಪಾವಳಿ ಆಸುಪಾಸಲ್ಲೇ ರೆಡ್ಡಿಗೆ ಸೆರೆವಾಸ!
Team Udayavani, Nov 12, 2018, 6:25 AM IST
ಬಳ್ಳಾರಿ: ಜಾರಿ ನಿರ್ದೇಶನಾಲಯ (ಇಡಿ) ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೂಮ್ಮೆ ಜೈಲು ಸೇರಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬೆಳಕಿನ ಹಬ್ಬ “ದೀಪಾವಳಿ’ ಕಂಟಕವಾಗಿ ಪರಿಣಮಿಸಿದೆಯೇ ?! – ಇಂಥಹದ್ದೊಂದು ಅನುಮಾನ ಗಣಿ ಜಿಲ್ಲೆಯ ಜನರನ್ನು ಕಾಡುತ್ತಿದೆ.
ರೆಡ್ಡಿಯವರು ಮೂರು ಬಾರಿಯೂ “ದೀಪಾವಳಿ’ ಆಸುಪಾಸಿನಲ್ಲೇ ಜೈಲು ಸೇರಿರುವುದು ಜನರ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.
ಅಕ್ರಮ ಗಣಿಗಾರಿಕೆ ಆರೋಪದಡಿ 2011 ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ರೆಡ್ಡಿಯವರನ್ನು ಆಂಧ್ರದ ಸಿಬಿಐ ಅ ಧಿಕಾರಿಗಳು ಬಂ ಧಿಸಿದ್ದರು. ಆ ವರ್ಷ ಅಕ್ಟೋಬರ್ 26ರಂದು ದೀಪಾವಳಿ. ಹಬ್ಬಕ್ಕೂ ಒಂದೂವರೆ ತಿಂಗಳ ಮುನ್ನ ರೆಡ್ಡಿ ಜೈಲು ಸೇರಿದ್ದರು. 2014ರವರೆಗೆ ಸತತ 4 ವರ್ಷ ಜೈಲಿನಲ್ಲಿದ್ದ ರೆಡ್ಡಿ ಹಬ್ಬ ಆಚರಿಸಲಿಲ್ಲ.
2015 ಜನವರಿ 20ರಂದು ರೆಡ್ಡಿ ಜೈಲಿನಿಂದ ಬಿಡುಗಡೆಯಾಗಿದ್ದರು. ಅದೇ ವರ್ಷ ನ. 20ರಂದು ವಿಶೇಷ ತನಿಖಾದಳ (ಎಸ್ಐಟಿ)ದಿಂದ ಬಂಧನಕ್ಕೊಳಗಾದರು. ಆ ವರ್ಷ ನ.11ಕ್ಕೆ ದೀಪಾವಳಿ. ಕುಟುಂಬ ಸದಸ್ಯರ ಜತೆ ಹಬ್ಬ ಆಚರಿಸಿದ 9 ದಿನಗಳಲ್ಲೇ ಬಂಧನವಾಗಿದ್ದರು. ಆಗ ಕೇವಲ 10 ದಿನಗಳಿಗೆ ಜಾಮೀನು ದೊರೆತಿದ್ದ ಹಿನ್ನೆಲೆಯಲ್ಲಿ ನ.30ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.
ಅದೇ ರೀತಿ ಈಗ ಇಡಿ ಡೀಲ್ ಪ್ರಕರಣ ರೆಡ್ಡಿಗೆ ಮುಳುವಾಗಿದೆ. ನವೆಂಬರ್ 6, 7, 8ರಂದು ದೀಪಾವಳಿ. ನ. 7ರಂದೇ ಬೆಂಗಳೂರಿನ ಸಿಸಿಬಿ ಪೊಲೀಸರು ರೆಡ್ಡಿಗಾಗಿ ಹುಡುಕಾಟ ಆರಂಭಿಸಿದ್ದರು. 10ರಂದು ರೆಡ್ಡಿಯವರೇ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದು, ನ.11 ರಂದು ಬಂಧನಕ್ಕೊಳಗಾಗಿದ್ದಾರೆ. ಈಗಲೂ ರೆಡ್ಡಿ ದೀಪಾವಳಿ ಮುಗಿದು ಮೂರೆೇ ದಿನಗಳಲ್ಲಿ ಪುನಃ ಜೈಲು ಪಾಲಾಗಿದ್ದಾರೆ. ಇದರಿಂದ ರೆಡ್ಡಿಗೆ ದೀಪಾವಳಿ ಹಬ್ಬ ಮತ್ತು ನವೆಂಬರ್ ತಿಂಗಳು ಕಂಟಕವಾಗಿ ಪರಿಣಮಿಸಿದೆ. ಈ ದಿನಗಳಲ್ಲೇ ಅವರು ಅತಿ ಹೆಚ್ಚು ಬಾರಿ ಬಂಧನಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.