ರಾಜಪಕ್ಸೆ ಹೊಸ ಪಕ್ಷ
Team Udayavani, Nov 12, 2018, 8:05 AM IST
ಕೊಲಂಬೊ: ಶ್ರೀಲಂಕಾದಲ್ಲಿ ರಾಜಕೀಯ ಸ್ಥಿತ್ಯಂತರದ ಮಧ್ಯೆಯೇ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನೇತೃತ್ವದ ಶ್ರೀಲಂಕಾ ಫ್ರೀಡಂ ಪಾರ್ಟಿಯನ್ನು (ಎಸ್ಎಲ್ಎಫ್ಪಿ) ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ ತೊರೆದಿದ್ದಾರೆ. ಅವರು ಈಗ ಶ್ರೀಲಂಕಾ ಪೀಪಲ್ಸ್ ಪಾರ್ಟಿಗೆ (ಎಸ್ಎಲ್ಪಿಪಿ). ಈ ಮೂಲಕ ತಮ್ಮ ತಂದೆಯವರೇ ಸ್ಥಾಪಿಸಿದ್ದ ಎಸ್ಎಲ್ಎಫ್ಪಿಯಿಂದ 50 ವರ್ಷಗಳ ನಂತರ ಅವರು ಹೊರಬಿದ್ದಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ರಾಜಪಕ್ಸೆ ಅಭಿಮಾನಿಗಳು ಹೊಸ ಪಕ್ಷವನ್ನು ರಚಿಸಿದ್ದರು. ಜನವರಿ 5ರಂದು ನಡೆಯಲಿರುವ ಚುನಾವಣೆಗೆ ಹೊಸ ಪಕ್ಷದಿಂದಲೇ ರಾಜಪಕ್ಸೆ ಸ್ಪರ್ಧಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.