ದರ ಇಳಿಕೆ: ಉತ್ಪಾದನೆ ಇಳಿಕೆ ತೈಲ ರಾಷ್ಟ್ರಗಳ ನಿರ್ಧಾರ
Team Udayavani, Nov 12, 2018, 8:40 AM IST
ಹೊಸದಿಲ್ಲಿ /ದುಬೈ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಇಳಿಕೆ ಕಾಣುತ್ತಿದೆ. ರವಿವಾರ ಪೆಟ್ರೋಲ್ ಲೀಟರ್ಗೆ 16 ಪೈಸೆ ಹಾಗೂ ಡೀಸೆಲ್ ಲೀಟರ್ಗೆ 12 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 78.35 (16 ಪೈಸೆ ಇಳಿಕೆ), ಪ್ರತಿ ಲೀಟರ್ ಡೀಸೆಲ್ ದರ 72.85 ರೂ. (12 ಪೈಸೆ ಇಳಿಕೆ) ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಇಳಿಯುತ್ತಿರುವುದರಿಂದಾಗಿ ಇನ್ನೂ ಕೆಲವು ದಿನಗಳವರೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಯಲಿದೆ. ಈ ಮಧ್ಯೆ ದುಬೈನಲ್ಲಿ ನಡೆದ ತೈಲ ಉತ್ಪಾದಕ ರಾಷ್ಟ್ರಗಳ ಮುಖಂಡರ ಸಭೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಉತ್ಪಾದನೆಯನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ.
ಇರಾನ್ ಮೇಲೆ ಅಮೆರಿಕ ನಿಷೇಧ ಹೇರಿರುವುದರಿಂದ ಬೇಡಿಕೆ ಪೂರೈಕೆಗಾಗಿ ಸೌದಿ ಅರೇಬಿಯಾ, ರಷ್ಯಾ ಹಾಗೂ ಅಮೆರಿಕ ಉತ್ಪಾದನೆ ಪ್ರಮಾಣವನ್ನು ಹೆಚ್ಚು ಮಾಡಿದ್ದವು. ಈ ಸಭೆಯ ನಿರ್ಧಾರ ಜಾರಿಗೆ ಬರಲು ಇನ್ನೂ ಕೆಲವು ದಿನಗಳು ಬೇಕಾಗಿದ್ದು, ಅಲ್ಲಿಯವರೆಗೂ ಬೆಲೆ ಇಳಿಕೆ ಮುಂದುವರಿಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.