ಗುಂಪು ಕೃಷಿ ಯೋಜನೆ ರೈತರಿಗೆ ಉಪಯೋಗವಾಗಲಿ 


Team Udayavani, Nov 12, 2018, 6:00 AM IST

editorial.png

ಉತ್ತರಖಂಡದ ಮಾದರಿಯಲ್ಲಿ ರಾಜ್ಯದಲ್ಲೂ ಗುಂಪು ಕೃಷಿ ಯೋಜನೆ ಜಾರಿಗೊಳಿಸಲು ಸರಕಾರ ಮುಂದಾಗಿರುವುದು ಒಂದು ಉತ್ತಮ ನಿರ್ಧಾರ. ಕೃಷಿ ಕ್ಷೇತ್ರದ ಬಿಕ್ಕಟ್ಟಿನ ನಿವಾರಣೆಯೆಂದರೆ ರೈತರಿಗೆ ಸಾಲ ಕೊಡುವುದು, ಅನಂತರ ಅದನ್ನು ಮನ್ನಾ ಮಾಡುವುದು ಎಂಬ ಸೀಮಿತ ಚಿಂತನೆಯಿಂದ ಕೊನೆಗೂ ಸರಕಾರ ಹೊರ ಬಂದಿರುವುದರ ಸೂಚನೆ ಇದು.

ಗುಂಪು ಕೃಷಿ ಅಥವಾ ಕ್ಲಸ್ಟರ್‌ ಫಾರ್ಮಿಂಗ್‌ ಹಲವು ದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿರುವ ಪ್ರಯೋಗ. ವಿದೇಶಗಳಲ್ಲಿ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಉದ್ದೇಶದಿಂದ ಗುಂಪು ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಇಸ್ರೇಲ್‌ನಂತಹ ದೇಶಗಳು ಬಹಳ ವರ್ಷಗಳ ಹಿಂದೆಯೇ ಈ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಅಲ್ಲೆಲ್ಲ  ಕೃಷಿಯೆಂದರೆ ಬರೀ ರೈತರ ಕಾಯಕ ಮಾತ್ರವಲ್ಲ ಅದರಲ್ಲಿ ಸರಕಾರದ ಸಕ್ರಿಯ ಭಾಗೀದಾರಿಕೆಯೂ ಇರುತ್ತದೆ. ನಾವು ಈ ನಿಟ್ಟಿನಲ್ಲಿ ಇನ್ನೂ ಬಹಳ ಹಿಂದೆ ಇದ್ದರೂ ಕನಿಷ್ಠ ಈಗಲಾದರೂ ಹೊಸ ಅನ್ವೇಷಣೆಯತ್ತ ಸರಕಾರಗಳು ಮುಂದಾಗುತ್ತಿವೆ ಎನ್ನುವುದು ಸ್ವಾಗತಾರ್ಹ ಅಂಶ. 

ದೇಶದ ಕೃಷಿ ಕ್ಷೇತ್ರ ಕುಂಟ ತೊಡಗಿ ದಶಕಗಳೇ ಕಳೆದಿದೆ. ಬರ ಮತ್ತು ಅತಿವೃಷ್ಟಿ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ಸರಕಾರಗಳು ಸಾಲ ಮನ್ನಾದಂಥ ತಾತ್ಕಾಲಿಕ ಉಪಶಮನಕ್ಕೆ ಕೊಟ್ಟಷ್ಟು ಆದ್ಯತೆಯನ್ನು ಸಮಗ್ರವಾಗಿ ಕೃಷಿ ಪದ್ಧತಿಯನ್ನು ಬದಲಾಯಿ ಸುವತ್ತ ನೀಡಿಲ್ಲ ಎನ್ನುವುದು ವಾಸ್ತವ. ದೇಶದಲ್ಲಿ ಶೇ 75ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದರೂ, ಕೃಷಿ ಕ್ಷೇತ್ರ ಇನ್ನೂ ಆಳುವವರಿಗೆ ಆದ್ಯತೆಯಾಗಿಲ್ಲ. ಚುನಾವಣೆ ಬಂದಾಗ ರೈತರಿಗೆ ಒಂದಷ್ಟು ಕೊಡುಗೆಗಳನ್ನು ಘೋಷಿಸುವುದಷ್ಟೇ ಕೃಷಿ ಕ್ಷೇತ್ರದಲ್ಲಿ ಮಾಡುವ ಸುಧಾರಣೆ ಎಂದು ರಾಜಕೀಯ ವ್ಯವಸ್ಥೆ ಭಾವಿಸಿದೆ. ಇಂಥ ಸಂದರ್ಭದಲ್ಲಿ ಸರಕಾರವೊಂದು ಹೊಸ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಕೇಳಿದಾಗ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. 

ದೇಶದಲ್ಲಿರುವ ಕೃಷಿಕರಲ್ಲಿ ಶೇ. 80ಕ್ಕೂ ಹೆಚ್ಚು ಮಂದಿ ಸಣ್ಣ ಹಿಡುವಳಿದಾರರು ಅಂದರೆ ತುಂಡು ಜಮೀನುಗಳಲ್ಲಿ ಕೃಷಿ ಮಾಡುವವರು. ಪ್ರಸ್ತುತ ಕೃಷಿಕಾರ್ಯ ನಡೆಸಲು ಭಾರೀ ಖರ್ಚು ತಗಲುತ್ತಿದೆ ಎನ್ನುವುದು ಕೃಷಿಕರ ದೂರು. ಒಂದೆರಡು ಎಕರೆ ಕೃಷಿ ಜಮೀನು ಹೊಂದಿರುವವರು ಈಗ ಪೂರ್ತಿ ಬೇಸಾಯವನ್ನು ನಂಬಿ ಬದುಕುವ ಸ್ಥಿತಿಯಲ್ಲಿಲ್ಲ. 

ಭಾರತದ ಕೃಷಿ ಈಗಲೂ ಮಳೆಯನ್ನೇ ಅವಲಂಬಿಸಿದೆ. ಬರದಂಥ ಸಂದರ್ಭದಲ್ಲಿ ಹಾಕಿದ ಬಂಡವಾಳವೂ ಕೈಗೆ ಬಾರದೆ ಹತಾಶರಾಗುತ್ತಿರುವ ರೈತರು ಸಾಲ ತೀರಿಸುವ ದಾರಿಕಾಣದೆ ಕೊನೆಗೆ ಆತ್ಮಹತ್ಯೆಯತ್ತ ಮುಖ ಮಾಡುತ್ತಿರುವ ದುರಂತ ಕತೆಗಳನ್ನು ಕಳೆದ ಹಲವಾರು ವರ್ಷಗಳಿಂದ ಕೇಳುತ್ತಿದ್ದೇವೆ. ಗ್ರಾಮೀಣ ಭಾಗಗಳಲ್ಲಿ ಕೃಷಿ ಈಗ ಆಕರ್ಷಣೀಯ ಕಸುಬಾಗಿ ಉಳಿದಿಲ್ಲ. ತುಂಡು ಜಮೀನು ಹೊಂದಿರುವ ರೈತರ ಮಕ್ಕಳು ಕೃಷಿಯಿಂದ ವಿಮುಖರಾಗಿ ಪಟ್ಟಣದತ್ತ ಹೋಗುತ್ತಿದ್ದಾರೆ. ರೈತರು ಕೂಡಾ ಕೃಷಿ ಮಾಡಿ ಕೈಸುಟ್ಟುಕೊಳ್ಳುವುದಕ್ಕಿಂತ ಪಾಳು ಬಿಡುವುದೇ ಉತ್ತಮವೆಂದು ಭಾವಿಸಿದಂತಿದೆ. 

ಹೀಗಾಗಿ ಭಾರೀ ಪ್ರಮಾಣದಲ್ಲಿ ಕೃಷಿ ಭೂಮಿ ಪಾಳು ಬೀಳುತ್ತಿದೆ ಇಲ್ಲವೇ ಸೈಟುಗಳಾಗಿ, ಬಡಾವಣೆಗಳಾಗಿ ಬದಲಾಗುತ್ತಿವೆ. ಈ ಸಮಸ್ಯೆಗೆ ಗುಂಪು ಕೃಷಿ ಉತ್ತಮ ಪರಿಹಾರವಾಗಬಲ್ಲುದು. ಕೃಷಿಯಿಂದ ವಿಮುಖವಾಗಿರುವ ಯುವ ಸಮುದಾಯವನ್ನು ಕೃಷಿಯಲ್ಲಿ ತೊಡಗಿ ಕೊಳ್ಳುವಂತೆ ಮಾಡುವುದು ಈಗ ನಮ್ಮ ಮುಂದಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಗುಂಪು ಕೃಷಿಯನ್ನು ಯುವ ಕೇಂದ್ರಿತವನ್ನಾಗಿ ಮಾಡುವ ಅಗತ್ಯ ಇದೆ. 

ಗುಂಪು ಕೃಷಿಯಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯ ಎನ್ನುವುದು ನಿಜ. ಇದೇ ವೇಳೆ ಕೃಷಿ ಉತ್ಪನ್ನಕ್ಕೆ ಸಮರ್ಪಕವಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಡುವುದು ಕೂಡಾ ಅಷ್ಟೇ ಅಗತ್ಯ ಎನ್ನುವುದನ್ನು ಸರಕಾರ ಮನಗಾಣಬೇಕು. ಈಗಲೂ ಭಾರತದ ಕೃಷಿ ಮಾರುಕಟ್ಟೆ ದಲ್ಲಾಳಿಗಳ ಹಿಡಿತದಲ್ಲೇ ಇದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಬಹಳಷ್ಟು ಪ್ರಯತ್ನ ಮಾಡಿದೆ ಎನ್ನುವುದು ನಿಜವಾಗಿದ್ದರೂ, ಇನ್ನೂ ಈ ನಿಟ್ಟಿನಲ್ಲಿ ಆಗಬೇಕಿರುವುದು ಬಹಳಷ್ಟು ಇದೆ. ಅನೇಕ ಸಂದರ್ಭಗಳಲ್ಲಿ ಕೃಷಿ ಉತ್ಪನ್ನಕ್ಕೆ ಸಿಗುವ ಬೆಲೆಯೇ ರೈತರಿಗೆ ಕೃಷಿಯ ಮೇಲೆ ವೈರಾಗ್ಯ ಮೂಡುವಂತೆ ಮಾಡುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. 

ಕೇಂದ್ರ ಸರಕಾರ 2022ಕ್ಕಾಗುವಾಗ ರೈತರ ಆದಾಯವನ್ನು ದ್ವಿಗುಣ ಗೊಳಿಸುವ ಗುರಿಯನ್ನೇನೋ ಇಟ್ಟುಕೊಂಡಿದೆ. ಇದು ಕಾರ್ಯರೂಪಕ್ಕೆ ಬರಬೇಕಾದರೆ ರಾಜ್ಯಗಳ ಪಾತ್ರವೂ ಮುಖ್ಯ. ಗುಂಪು ಕೃಷಿಯಂಥ ಪ್ರಯೋಗಗಳು ಈ ಗುರಿಗೆ ಪೂರಕವಾಗಿರಲಿ. 

ಟಾಪ್ ನ್ಯೂಸ್

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.