ಚಿನ್ನದ ಒಡೆಯರಾಗುವುದಕ್ಕೂ ಅವಕಾಶ ಇದೆ, ಆಯ್ಕೆ ನಿಮ್ಮದು !


Team Udayavani, Nov 12, 2018, 12:24 PM IST

ನಗ ಎಂದೂ ನಗಣ್ಯ ಅಲ್ಲ! Top Ten ಹೂಡಿಕೆಯಲ್ಲಿ  ಚಿನ್ನ ಹೇಗೆ ? ಟಾಪ್ ಟೆನ್ ಹೂಡಿಕೆ ಆಯ್ಕೆಗಳಲ್ಲಿ ಕೊನೆಯ ಹತ್ತನೇ ಸ್ಥಾನದಲ್ಲಿ ಚಿನ್ನ ಇದೆ. ಇಂಗ್ಲಿಷ್ನಲ್ಲಿ  ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬ ಮಾತಿದೆ. ಟಾಪ್ ಟೆನ್ ಹೂಡಿಕೆ ಪಟ್ಟಿಯಲ್ಲಿ ಚಿನ್ನ ಕೊನೆಯ ಸ್ಥಾನದಲ್ಲಿದೆಯಾದರೂ ಅದು ಎಷ್ಟು ಮಾತ್ರಕ್ಕೂ  ನಗಣ್ಯ ಹೂಡಿಕೆಯ ಆಯ್ಕೆ ಅಲ್ಲ ! ನಗಣ್ಯ ಎನ್ನುವಲ್ಲಿ ನಗ ಇರುವುದನ್ನು ಕೂಡ ನಾವು ಮನಗಾಣಬೇಕು. ಆದುದರಿಂದ ನಗ ಎಂದೂ ನಗಣ್ಯ ಆಗಲಾರದು.

ಅಂದ ಹಾಗೆ ದೀಪಾವಳಿಯ ಈ ಹಬ್ಬದ ದಿನಗಳಲ್ಲಿ  22 ಕ್ಯಾರೆಟ್ ಆಭರಣ ಚಿನ್ನದ ಧಾರಣೆ  ಗ್ರಾಮಿಗೆ  2,980 ರೂ. ಇದೆ. ಈ ಧಾರಣೆಯಲ್ಲಿ  ಚಿನ್ನ ಬಹುತೇಕ ಗರಿಷ್ಠ ಮಟ್ಟ  ತಲುಪಿದೆ ಎನ್ನಬಹುದಾದರೂ ಸದ್ಯದಲ್ಲೇ ಚಿನ್ನ 3,000 ರೂ. ಮುಟ್ಟಲೂ ಬಹುದಾಗಿದೆ. ಹಾಗಿರುವಾಗ ಚಿನ್ನದಲ್ಲಿ ಹಣ ಹೂಡಬೇಕೇ ? ಚಿನ್ನವನ್ನು ಈ ಉತ್ತಮ ಬೆಲೆಗೆ ಮಾರಬೇಕೇ ? ತಟಸ್ಥವಾಗಿ ಇರುವುದೇ ಲೇಸೇ? ಎಂಬಿತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜ.

ಹೂಡಿಕೆಯಾಗಿ ಚಿನ್ನ ನಿಜಕ್ಕೂ ಒಂದು ಹೂಡಿಕೆಯ ಮಾಧ್ಯಮ ಹೌದೇ ಅಲ್ಲವೇ ಎಂಬ ಬಗ್ಗೆ ಹೂಡಿಕೆ ಪರಿಣತರಲ್ಲಿ ಅಂದಿಗೂ, ಇಂದಿಗೂ, ಎಂದೆಂದಿಗೂ ಮುಗಿಯದ ಚರ್ಚೆ, ವಿಭಿನ್ನ ಅಭಿಪ್ರಾಯ ಇದ್ದೇ ಇದೆ. ಅನೇಕ ಪರಿಣತರ ಅಭಿಪ್ರಾಯದಲ್ಲಿ ಚಿನ್ನದ ಮೇಲಿನ ಹೂಡಿಕೆ ಒಂದು ಡೆಡ್ ಇನ್ವೆಸ್ಟ್ಮೆಂಟ್ ! ಇದಕ್ಕೆ ಮುಖ್ಯ ಕಾರಣ ಚಿನ್ನವನ್ನು  ಆಭರಣ ರೂಪಕ್ಕೆ ತಂದಾಗ ಅದರಲ್ಲಿ ಹೂಡಿಕೆದಾರನ ಶತ್ರುವಾಗಿ ವೇಸ್ಟೇಜ್ ಕಾಣಿಸಿಕೊಳ್ಳುತ್ತಾನೆ. ಏಕೆಂದರೆ ಆಭರಣಕ್ಕೆ ಬರುವಲ್ಲಿ  ಉಂಟಾಗುವ ಈ ವೇಸ್ಟೇಜ್ ಹೂಡಿಕೆದಾರನ ಮಟ್ಟಿಗೆ ಸಂಪೂರ್ಣ ನಷ್ಟದ ಬಾಬ್ತು !

ಈ ವೇಸ್ಟೇಜ್ ಎಂಬುದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲಾಗುತ್ತದೆ. ಎಲ್ಲರಗೂ ತಿಳಿದ ಹಾಗೆ ಅಪ್ಪಟ ಚಿನ್ನದಿಂದ ಆಭರಣ ತಯಾರಿಸಲಾಗದು. ಅದಕ್ಕೆ ಸ್ವಲ್ಪಾಂಶ ಬೆಳ್ಳಿ ಅಥವಾ ತಾಮ್ರ ಸೇರಿಸಿದರೆ ಮಾತ್ರವೇ ಅದು ಕುಶಲ ಕರ್ಮಿಯ ಪರಿಣತ ಹಸ್ತದಲ್ಲಿ ಅತ್ಯಾಕರ್ಷಕ ಒಡವೆಯಾಗಿ ಪರಿವರ್ತಿತವಾಗುತ್ತದೆ. ಈ ಪ್ರಕ್ರಿಯೆಯಲ್ಲಿ  ಆಭರಣ ಚಿನ್ನವು ಮಿಶ್ರ ಲೋಹದಿಂದ ಕೂಡಿದುದಾಗಿರುತ್ತದೆ.

ಹಾಗಾಗಿ ಚಿನ್ನಾಭರಣ ತಯಾರಿಯಲ್ಲಿ ನಷ್ಟವಾಗುವ ಚಿನ್ನದ ಪ್ರಮಾಣ ಮತ್ತು ಒಡವೆಗೆ ತಗಲುವ ಮಜೂರಿ ವೆಚ್ಚ ಇವು ಮತ್ತೆಂದೂ ಮರಳಿ ಬಾರದ ವೆಚ್ಚಗಳು. ಎಂದರೆ ಚಿನ್ನದ ಒಡವೆಯೊಂದನ್ನು ಮಾರಲು ಹೋದಾಗ ಅಥವಾ ಅದನ್ನು ಕರಗಿಸಿ ಬೇರೊಂದು ವಿನ್ಯಾಸದ ಆಭರಣದ ಮಾಡಲು ಮುಂದಾದಾಗ ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜ್ಗಳು ನಷ್ಟದ ಬಾಬತ್ತಾಗುತ್ತವೆ. ಒಡವೆಯಲ್ಲಿನ ಇತರೇ ಲೋಹಗಳ ಪ್ರಮಾಣ ಕಳೆದು ಉಳಿಯುವ ಚಿನ್ನಕ್ಕೆ ಮಾತ್ರವೇ ಬೆಲೆ ಎಂದರ್ಥ.

ಉದಾಹರಣಗೆ ನಾವು 70,000 ರೂ. ಮೌಲ್ಯದ ಒಂದು ಸುಂದರ ಚಿನ್ನದ ನೆಕ್ಲೇಸ್ ಕೊಂಡಾಗ ಅದರ ಮಜೂರಿ ವೆಚ್ಚವೇ 20,000 ರೂ ಗಳಷ್ಟಿರುತ್ತದೆ. ಎಂದರೆ ಅದೇ ನೆಕ್ಲೇಸನ್ನು ನಾವು ಕಾಲಕ್ರಮದಲ್ಲಿ  ಮಾರಲು ಹೋದಾಗ, ಅಥವಾ ಕರಗಿಸಿ ಬೇರೋಂದು ವಿನ್ಯಾಸನ ಒಡವೆ ಮಾಡಲು ಮುಂದಾಗುವಾಗ ನಮಗೆ ದಕ್ಕುವುದು ನಿಜವಾದ ಚಿನ್ನದ ಬೆಲೆ ಮಾತ್ರ; ಎಂದರೆ 50,000 ರೂ; ಉಳಿದ 20,000 ರೂ. ನಷ್ಟ ದ ಹೊರೆಯನ್ನು ನಾವು ಅನುಭವಿಸಲೇಬೇಕು !

ಸಾಮಾನ್ಯವಾಗಿ ಚಿನ್ನಾಭರಣದಲ್ಲಿ ಮೇಕಿಂಗ್ ಚಾರ್ಜ್ ಶೇ.6ರಿಂದ 14ರ ವರೆಗೆ ಇರುತ್ತದೆ; ಕೆಲವೊಮ್ಮೆ ಇದು ಶೇ.25ರ ವರೆಗೂ ಹೋಗುವುದುಂಟು. ಇದಕ್ಕೆ ಮುಖ್ಯ ಕಾರಣ ಚಿನ್ನಾಭರಣದ ಅತ್ಯಾಕರ್ಷಕ ವಿನ್ಯಾಸ, ಕುಸುರಿ ಕೆಲಸ.

ಹೂಡಿಕೆ ದೃಷ್ಟಿಯಿಂದ ಚಿನ್ನವನ್ನು ನಾಣ್ಯ, ಬಾರ್ ರೂಪದಲ್ಲಿ ಖರೀದಿಸುವುದೇ ಸೂಕ್ತ ಎನಿಸುತ್ತದೆ. ಈ ಮಾಧ್ಯಮದಲ್ಲಿ ಯಾವುದೇ ಮೇಕಿಂಗ್ ಚಾರ್ಜ್, ವೇಸ್ಟೇಜ್ ನಷ್ಟ ಮುಂತಾಗಿ ಯಾವುದೂ ಇರುವುದಿಲ್ಲ. ಹಾಗಿದ್ದರೂ ಇವುಗಳನ್ನು ಒಳ್ಳೆಯ ಧಾರಣೆ ಬಂದಾಗ ಮಾರಲು ಚಿನ್ನಾಭರಣ ಮಳಿಗೆಗೆ ಹೋದರೆ ಅವರು ಅಂದಿನ ಮಾರುಕಟ್ಟೆ ಧಾರಣೆಯನ್ನು ಪರಿಗಣಿಸುವರಾದರೂ ನಮಗೆ ಕೊಡಬೇಕಾದ ನಗದು ಮೊತ್ತದಲ್ಲಿ ಶೇ.1ನ್ನು ಕಳೆದು ಕೊಡುತ್ತಾರೆ ಎನ್ನುವುದು ಗಮನಾರ್ಹ.

ಚಿನ್ನದ ಅಂತಾರಾಷ್ಟ್ರೀಯ ಬೆಲೆಗೂ ದೇಶೀಯ ಧಾರಣೆಗೂ ವ್ಯತ್ಯಾಸ ಇರುವುದನ್ನು ನಾವು ಯಾವತ್ತೂ ಕಾಣಬಹುದು. ಉದಾಹರಣೆಗೆ ಈ ದಿನಗಳಲ್ಲಿ ಅಂತಾರಾಷ್ಟ್ರೀಯ ಚಿನ್ನದ ಬೆಲೆ ಶೇ.6ರಷ್ಟು ಕಡಿಮೆಯಾಗಿದೆ. ಆದರೆ ಇದೇ ವೇಳೆ ಭಾರತದಲ್ಲಿ ಚಿನ್ನದ ಧಾರಣೆ ಶೇ.8ರಷ್ಟು ಏರಿದೆ. ಭಾರತದಲ್ಲಿ ವಿಶ್ವದಲ್ಲೇ ಅತ್ಯಧಿಕ ಎನಿಸುವಷ್ಟು  ಹಳದಿ ಲೋಹದ ಮೇಲಿನ ಮೋಹ ಇರುವುದೇ ಇದಕ್ಕೆ ಒಂದು ಕಾರಣವಾದರೆ ಇನ್ನೂ ಹಲವಾರು ಕಾರಣಗಳೂ ಇವೆ.

ಅಂತಾರಾಷ್ಟ್ರೀಯ ಚಿನ್ನದ ಧಾರಣೆ ಇಳಿಯುವುದಕ್ಕೆ ಮುಖ್ಯ ಕಾರಣ ಅಮೆರಿಕದ ಡಾಲರ್ ಬಲಿಷ್ಠವಾಗುತ್ತಿರುವುದು. ಅಮೆರಿಕನ್ ಡಾಲರ್ ತನ್ನ ಬಲಿಷ್ಠತೆಯಿಂದಾಗಿ  ಇಡಿಯ ವಿಶ್ವಕ್ಕೇ ವಾಣಿಜ್ಯ ಕರೆನ್ಸಿಯಾಗಿ ಭದ್ರ ಸ್ಥಾನವನ್ನು ಪಡೆದಿದೆ. ಹಾಗಾಗಿ ಡಾಲರ್ ಮೌಲ್ಯ ಏರಿದರೆ  ಅಂತಾರಾಷ್ಟ್ರೀಯ ಚಿನ್ನದ ಮೌಲ್ಯ ಇಳಿಮುಖವಾಗುತ್ತದೆ.

ಡಾಲರ್ ಮತ್ತು ಚಿನ್ನಕ್ಕೆ ಸರಿಸಮನಾಗಿ ಎಲ್ಲ ದೇಶಗಳ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಇನ್ನೊಂದು ವಸ್ತು ಎಂದರೆ ಅಂತಾರಾಷ್ಟ್ರೀಯ ಕಚ್ಚಾ ತೈಲ. ತನ್ನ ಆವಶ್ಯಕತೆಯ ಶೇ.80ರಷ್ಟು ಕಚ್ಚಾ ತೈಲವನ್ನು ಆಮದಿಸಿಕೊಳ್ಳುವ ಭಾರತದ ಆರ್ಥಿಕತೆಯ ಮೇಲೆ ತೈಲ ಬೆಲೆಯಲ್ಲಾಗುವ ಏರಿಕೆಯಿಂದಾಗುವ ಪರಿಣಾಮ ಅತ್ಯಪಾರ. ಏಕೆಂದರೆ ತೈಲ ಆಮದು ವೆಚ್ಚವನ್ನು ಭಾರತ ಡಾಲರ್ ಮೂಲಕ ಪಾವತಿಸಬೇಕು.

ಹಾಗೆಯೇ ಭಾರತೀಯರು ಮುಂದಿಡುವ ಚಿನ್ನದ ಬೇಡಿಕೆಯನ್ನು ಈಡೇರಿಸಲು ಕೂಡ ಭಾರತ ಸರಕಾರ ಚಿನ್ನವನ್ನು ಆಮದಿಸಿ ಅದರ ವೆಚ್ಚವನ್ನು ಡಾಲರ್ ಮೂಲಕ ಪಾವತಿಸಬೇಕು ! ಆದುದರಿಂದ ಚಿನ್ನ, ಡಾಲರ್ ಮತ್ತು ತೈಲ ಇವು ಎಲ್ಲ ದೇಶಗಳ ಆರ್ಥಿಕತೆಯನ್ನು ನಿಯಂತ್ರಿಸುವ, ಪ್ರಭಾವ ಬೀರುವ ಬಲಿಷ್ಠ  ಸಾಧನಗಳಾಗಿವೆ.

ಚಿನ್ನದ ಮೇಲಿನ ಹೂಡಿಕೆ ಮೇಲ್ನೋಟಕ್ಕೆ ಸುಭದ್ರ, ಆಕರ್ಷಕ ಅನ್ನಿಸಿದರೂ ಪರಿಣತರ ಲೆಕ್ಕಾಚಾರಗಳ ಪ್ರಕಾರ ಇದರಲ್ಲಿ ವಾಸ್ತವತೆ ಇಲ್ಲ. ಯಾವುದೇ ಹೂಡಿಕೆಯು ಶೇ.15ರ ಇಳುವರಿಯನ್ನು (ಲಾಭವನ್ನು)ತಂದುಕೊಟ್ಟರೆ ಅದು ಅತ್ಯಾಕರ್ಷಕ ಹೂಡಿಕೆ ಎನಿಸಿಕೊಳ್ಳುತ್ತದೆ. ಆದರೆ ಚಿನ್ನದ ವಿಷಯದಲ್ಲಿ ಹಾಗಿಲ್ಲ ಎನ್ನುತ್ತಾರೆ ಪರಿಣತರು. ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆಯ ಮೌಲ್ಯವನ್ನು ಸ್ವಲ್ಪ ಮಟ್ಟಿಗೆ ಮಾತ್ರವೇ ಚಿನ್ನ ತಾಳಿಕೊಳ್ಳುತ್ತದೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

ಅದೇನಿದ್ದರೂ ಚಿನ್ನವನ್ನು ಒಡವೆಯ ರೂಪದಲ್ಲಿ ಹೂಡಿಕೆ ಉದ್ದೇಶದಿಂದ ಖರೀದಿಸುವುದು ಅಷ್ಟೇನೂ ಸೂಕ್ತವಲ್ಲ. ವೇಸ್ಟೇಜ್, ಮೇಕಿಂಗ್ ಚಾರ್ಜ್ ಎಂದೆಲ್ಲ ತಗಲುವ ನಷ್ಟದ ಬಾಬ್ತು ದೇವರಿಗೇ ಪ್ರೀತಿ ಎನ್ನುವುದು ಸತ್ಯ.

ಹಾಗಿರುವಾಗ ಹೂಡಿಕೆಯ ಉದ್ದೇಶದಲ್ಲಿ  ಚಿನ್ನವನ್ನು ನಾಣ್ಯದ ರೂಪದಲ್ಲಿ, ಬಾರ್ ಅಥವಾ ಗಟ್ಟಿ ರೂಪದಲ್ಲಿ ಖರೀದಿಸುವುದರಲ್ಲೇ ಬುದ್ಧಿವಂತಿಕೆ ಇರುತ್ತದೆ. ಹಾಗೆಯೇ ಗೋಲ್ಡ್ ಇಟಿಎಫ್ ಮೂಲಕವೂ ಚಿನ್ನವನ್ನು ಆನ್ ಲೈನ್ನಲ್ಲಿ ಅಭೌತಿಕ ರೂಪದಲ್ಲಿ ಖರೀದಿಸಬಹುದಾಗಿದೆ. ಗೋಲ್ಡ್ ಇಟಿಎಫ್ ಖರೀದಿ ಮತ್ತು ಮಾರಾಟಕ್ಕೆ  ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ವೇದಿಕೆ ಕಲ್ಪಿಸುತ್ತವೆ. ಇನ್ನೂ ಒಂದು ಆಯ್ಕೆ ಎಂದರೆ ಗೋಲ್ಡ್ ಬಾಂಡ್ ಗಳನ್ನು  ಖರೀದಿಸುವ ಮೂಲಕ ಪೇಪರ್-ಚಿನ್ನದ ಒಡೆಯರಾಗುವುದಕ್ಕೂ ಅವಕಾಶ ಇದೆ. ಆಯ್ಕೆ ನಿಮ್ಮದು !

ಟಾಪ್ ನ್ಯೂಸ್

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.