ಮಿಥಾಲಿ ಮಿಂಚು; ಭಾರತಕ್ಕೆ ಶರಣಾದ ಪಾಕ್
Team Udayavani, Nov 13, 2018, 6:00 AM IST
ಪ್ರೊವಿಡೆನ್ಸ್ (ಗಯಾನಾ): ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರ ಅರ್ಧ ಶತಕದ ಸಾಹಸದಿಂದ ರವಿವಾರ ರಾತ್ರಿಯ ವನಿತಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ, ಭಾರತದ ಕಳಪೆ ಕ್ಷೇತ್ರರಕ್ಷಣೆಯ ಲಾಭವನ್ನೆತ್ತಿ 7 ವಿಕೆಟಿಗೆ 133 ರನ್ ಗಳಿಸಿತು. ಭಾರತ 19 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 137 ರನ್ ಬಾರಿಸಿ ಸತತ 2ನೇ ಜಯವನ್ನು ಒಲಿಸಿಕೊಂಡಿತು. ಇದಕ್ಕೂ ಮುನ್ನ ಹರ್ಮನ್‌ಪ್ರೀತ್ ಪಡೆ ನ್ಯೂಜಿಲ್ಯಾಂಡನ್ನು ಕೆಡವಿತ್ತು. ಇನ್ನೊಂದೆಡೆ ಪಾಕಿಸ್ಥಾನ ಸತತ 2 ಪಂದ್ಯಗಳಲ್ಲೂ ಸೋಲನುಭವಿಸಿದ್ದು, ನಾಕೌಟ್ ಹಾದಿ ಬಹುತೇಕ ಮುಚ್ಚಿದೆ. ಮೊದಲ ಮುಖಾಮುಖೀಯಲ್ಲಿ ಅದು ಆಸ್ಟ್ರೇಲಿಯಕ್ಕೆ ಶರಣಾಗಿತ್ತು.
ಸತತ 2 ಜಯದಿಂದಾಗಿ ಆಸ್ಟ್ರೇಲಿಯ ಮತ್ತು ಭಾರತ ತಂಡಗಳು “ಬಿ’ ವಿಭಾಗದಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಆಸೀಸ್ ರನ್‌ರೇಟ್‌ನಲ್ಲಿ ಭಾರತಕ್ಕಿಂತ ಮುಂದಿದೆ. ಭಾರತ 1.162, ಆಸ್ಟ್ರೇಲಿಯ 3.73 ರನ್‌ರೇಟ್ ಹೊಂದಿದೆ.
ಭಾರತಕ್ಕೆ 10 ಪೆನಾಲ್ಟಿ ರನ್!
ಚೇಸಿಂಗ್ ಆರಂಭಿಸುವ ಮೊದಲೇ ಭಾರತದ ಖಾತೆಗೆ 10 ಪೆನಾಲ್ಟಿ ರನ್ ಸೇರ್ಪಡೆಯಾದದ್ದು ಈ ಪಂದ್ಯದ ವಿಶೇಷ. ಬ್ಯಾಟಿಂಗ್ ವೇಳೆ ಪಾಕಿಸ್ಥಾನಿ ಆಟಗಾರ್ತಿಯರು 2 ಸಲ ಪಿಚ್‌ನ ಅಪಾಯಕಾರಿ ಜಾಗದಲ್ಲಿ ಓಡಿದ್ದೇ ಇದಕ್ಕೆ ಕಾರಣ. ತಲಾ 5 ರನ್ನಿನಂತೆ 10 ರನ್ನನ್ನು ದಂಡದ ರೂಪದಲ್ಲಿ ತೆತ್ತ ಪಾಕ್ ಆಟಗಾರ್ತಿಯರು ಕೊನೆಗೆ ಸೋಲಿನ ದಂಡವನ್ನು ತೆರಬೇಕಾಯಿತು. ಪಾಕ್ ಬ್ಯಾಟಿಂಗ್ ವೇಳೆ ಭಾರತ 5 ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿ ತನ್ನ ಕಳಪೆ ಕ್ಷೇತ್ರರಕ್ಷಣೆ ಪ್ರದರ್ಶಿಸಿತ್ತು.
ಮಿಥಾಲಿ ಅರ್ಧ ಶತಕ
ನ್ಯೂಜಿಲ್ಯಾಂಡ್ ಎದುರಿನ ಮೊದಲ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಯದಿದ್ದ ಮಿಥಾಲಿ ರಾಜ್ ಪಾಕ್ ಎದುರು ಇನ್ನಿಂಗ್ಸ್ ಆರಂಭಿಸಿ 47 ಎಸೆತಗಳಿಂದ 56 ರನ್ ಸಿಡಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಸೇರಿತ್ತು. ಸ್ಮತಿ ಮಂಧನಾ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಮೊದಲ ವಿಕೆಟಿಗೆ 9.3 ಓವರ್‌ಗಳಿಂದ 73 ರನ್ ಗಳಿಸುವಲ್ಲಿ ನೆರವಾದರು. ಮಂಧನಾ ಗಳಿಕೆ 26 ರನ್ (28 ಎಸೆತ, 4 ಬೌಂಡರಿ). 18ರ ಹರೆಯದ ಜೆಮಿಮಾ ರೋಡ್ರಿಗಸ್ 21 ಎಸೆತಗಳಿಂದ 16 ರನ್ ಮಾಡಿದರು (1 ಬೌಂಡರಿ).
ಭಾರತದ ಗೆಲುವಿನ ವೇಳೆ ನಾಯಕಿ ಹರ್ಮನ್‌ಪ್ರೀತ್ ಕೌರ್ 14 ರನ್, ವೇದಾ ಕೃಷ್ಣಮೂರ್ತಿ 8 ರನ್ ಗಳಿಸಿ ಅಜೇಯರಾಗಿದ್ದರು.
ಭಾರತ ತನ್ನ ಮುಂದಿನ ಪಂದ್ಯವನ್ನು ಗುರುವಾರ ಅಯರ್‌ಲ್ಯಾಂಡ್ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-7 ವಿಕೆಟಿಗೆ 133 (ಬಿಸ್ಮಾ ಮರೂಫ್ 53, ನಿದಾ ದರ್ 52, ಪೂನಂ ಯಾದವ್ 22ಕ್ಕೆ 2, ಡಿ. ಹೇಮಲತಾ 34ಕ್ಕೆ 2). ಭಾರತ-19 ಓವರ್‌ಗಳಲ್ಲಿ 3 ವಿಕೆಟಿಗೆ 137 (ಮಿಥಾಲಿ ರಾಜ್ 56, ಸ್ಮತಿ ಮಂಧನಾ 26, ಜೆಮಿಮಾ ರೋಡ್ರಿಗಸ್ 16, ನಿದಾ ದರ್ 17ಕ್ಕೆ 1, ದಿಯಾನಾ ಬೇಗ್ 19ಕ್ಕೆ 1).
ಪಂದ್ಯಶ್ರೇಷ್ಠ: ಮಿಥಾಲಿ ರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.