ಅದಮ್ಯ ಕನಸುಗಾರನ ಆದರ್ಶ ಗ್ರಾಮ ರಾಗಿಹಳ್ಳಿ
Team Udayavani, Nov 13, 2018, 10:56 AM IST
ಆನೇಕಲ್: ಅನಂತ ಕುಮಾರ್‌ರ ಕನಸಿನ ಗ್ರಾಮದಲ್ಲೂ ಸೂತಕದ ಛಾಯೆ ಆವರಿಸಿತ್ತು. 4 ವರ್ಷಗಳಿಂದ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅನಂತಕುಮಾರ್ ಆನೇಕಲ್ ತಾಲೂಕಿನ ರಾಗಿಹಳ್ಳಿ ಗ್ರಾಪಂ ಅನ್ನು ಆದರ್ಶ ಗ್ರಾಮವನ್ನಾಗಿಸಲು ಪಣ ತೊಟ್ಟಿದ್ದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ರಾಗಿಹಳ್ಳಿ ಗ್ರಾಮ ತಾಲೂಕಿನಲ್ಲೇ ಅತ್ಯಂತ ಬಡ ಪಂಚಾಯ್ತಿಯಾಗಿ ಗುರುತಿಸಲಾಗಿದೆ. ಇಂತಹ ಗ್ರಾಮವನ್ನು ರಾಜ್ಯಕ್ಕೆ ಮಾದರಿಯಾಗಿ ಮಾಡಲು ಸಂಸದ ಅನಂತಕುಮಾರ್ ಉದ್ದೇಶಿಸಿದ್ದರು. ಸುತ್ತಲೂ ಕಾಡು ಆವರಿಸಿದ್ದು, ಸುಮಾರು 16 ಪುಟ್ಟ ಪುಟ್ಟ ಹಳ್ಳಿಗಳಿಂದ ಪಂಚಾಯ್ತಿ ಕೂಡಿತ್ತು. ಇಲ್ಲಿನ ವಾಸಿಗಳು ತೀರಾ ಹಿಂದುಳಿದಿದ್ದರಿಂದ ಸರ್ವತೋಮುಖ ಪ್ರಗತಿಗೆ ಮುಂದಾಗಲು ಇದೇ ಪಂಚಾಯ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು.
ಅನಂತ ಕುಮಾರ್ ಅವರು ರಾಗಿಹಳ್ಳಿ ಪಂಚಾಯ್ತಿಯನ್ನು ಆಯ್ಕೆ ಮಾಡಿ ಕೊಂಡ ಬಳಿಕ ಇಲ್ಲಿನ ಹಳ್ಳಿಗಳ, ಪ್ರತಿ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಪ್ರಗತಿಗೆ ಏನೆಲ್ಲಾ ಸೌಲಭ್ಯ ಕಲ್ಪಿಸಬೇಕು ಎಂಬುದರ ಬಗ್ಗೆ ಅಧ್ಯಯನ ಮಾಡಿಸಿ ಅದರಂತೆ ಹಂತ ಹಂತವಾಗಿ ಹಳ್ಳಿಗರ ಸೇವೆಗೆ ಮುಂದಾಗಿದ್ದರು.
ಆರಂಭದಲ್ಲಿ ರಸ್ತೆ ಪಕ್ಕದಲ್ಲಿ ಸಸಿ ನೆಟ್ಟು ಪೋಷಿಸುವುದು, ಪ್ರತಿ ಹಳ್ಳಿಗಳಲ್ಲಿ ಸ್ವತ್ಛತೆ ಬಗ್ಗೆ ಅರಿವು ಮೂಡಿಸಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಟ್ಟು ಸ್ವತ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ನಂತರ ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಹಳ್ಳಿಗರಿಗೆ ಕೊಡಿಸುವುದರ ಬಗ್ಗೆ ಚಿಂತನೆ ನಡೆಸಿ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಬಂದು ಸರ್ಕಾರಿ ಸೌಲಭ್ಯಗಳ ಬಗ್ಗೆ ನೇರವಾಗಿ ಮಾಹಿತಿ ಕೊಡಿಸಿ ಅರ್ಜಿ ಪಡೆಯುವ ವ್ಯವಸ್ಥೆ ಮಾಡಿದರು. ಹೀಗೆ ರಾಜ್ಯಕ್ಕೆ ಮಾದರಿಯಾಗಿ ಆದರ್ಶ ಗ್ರಾಮ ಮಾಡಲು ಪಣ ತೊಟ್ಟಿದ್ದ ಅನಂತ ಕುಮಾರ್‌ರ ಬಗ್ಗೆ ಅತಿ ಹೆಚ್ಚು ನಿರೀಕ್ಷೆಗಳನ್ನು ಸ್ಥಳೀಯರು ಇಟ್ಟು ಕೊಂಡಿದ್ದರು. ಇದರ ನಡುವೆ ಅವರ ಅಕಾಲಿಕ ನಿಧನದಿಂದ ಇಡೀ ಗ್ರಾಪಂ ಶೋಕ ಸಾಗರದಲ್ಲಿದೆ.
ಗ್ರಾಮಕ್ಕೆ ಬೆಳಕು ನೀಡಲು ಬಂದವರ ಬದುಕು ಕತ್ತಲೆಯಲ್ಲಿ ಲೀನವಾಯಿತೇ ಎಂಬಂತಾಗಿದೆ. ಇಲ್ಲಿನ ಗ್ರಾಮದ ಯುವ ಮುಖಂಡ ಮುನಿರಾಜು ಮಾತನಾಡಿ, ಅನಂತಕುಮಾರ್ ಅವರು ನಮ್ಮ ಗ್ರಾಮಕ್ಕೆ ಬಂದಾಗ ನಮಗೆ ಅವರ ಪರಿಚಯ ಆಗಿರಲಿಲ್ಲ. ಎಲ್ಲಾ ರಾಜಕಾರಣಿಗಳಂತೆ ಇವರೂ ಆಶ್ವಾಸನೆ ಕೊಟ್ಟು ಹೋಗುವವರು ಅಂದು ಕೊಂಡಿದ್ದೆವು. ಆದರೆ, ಅವರ ಕಾಳಜಿ, ಉದ್ದೇಶ ದೊಡ್ಡದಿತ್ತು. ಅವರ ಅಕಾಲಿಕ ಮರಣದಿಂದ ನೋವುಂಟಾಗಿದೆ. ನಮ್ಮ ಗ್ರಾಮವನ್ನು ಆದರ್ಶಮಯವಾಗಿಸುವ ಕನಸು ಕನಸಾಗಿಯೇ ಉಳಿಯಿತು ಎಂದು ನೊಂದು ನುಡಿದರು.
ಮಂಜುನಾಥ್ ಆನೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್ʼ ರಿಲೀಸ್ ಡೇಟ್.. ಫ್ಯಾನ್ಸ್ ಖುಷ್
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Simple Life: ಬದುಕು ನಿರಾಡಂಬರವಾಗಿರಲಿ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.