ರಫೇಲ್ ಡೀಲ್ ಬಗ್ಗೆ ರಾಹುಲ್ ಆರೋಪಗಳೆಲ್ಲ ಸುಳ್ಳು: ಡಸಾಲ್ಟ್ ಸಿಇಓ
Team Udayavani, Nov 13, 2018, 11:24 AM IST
ಹೊಸದಿಲ್ಲಿ : ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಫೈಟರ್ ಜೆಟ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಗಳು ಸಂಪೂರ್ಣ ಸುಳ್ಳೆಂದು ಡಸಾಲ್ಟ್ ಏವಿಯೇಶನ್ ಸಿಇಓ ಎರಿಕ್ ಟ್ರ್ಯಾಪಿಯರ್ ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಟ್ರ್ಯಾಪಿಯರ್ ಅವರು, “ನಾನೇನೂ ಸುಳ್ಳು ಹೇಳುತ್ತಿಲ್ಲ; ರಾಹುಲ್ ಗಾಂಧಿ ಅವರ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದರು.
“ನಾನೇನೂ ಸುಳ್ಳು ಹೇಳುವುದಿಲ್ಲ. ರಫೇಲ್ ಡೀಲ್ ಬಗ್ಗೆ ನಾನು ಈ ಹಿಂದೆ ಮಾಡಿದ್ದ ಘೋಷಣೆಗಳು, ನೀಡಿದ್ದ ಹೇಳಿಕೆಗಳು ಸತ್ಯ. ಸುಳ್ಳು ಹೇಳುವ ಖ್ಯಾತಿ ನನಗಿಲ್ಲ. ನನ್ನ ಸಿಇಓ ಹುದ್ದೆಯಲ್ಲಿ ನೀವಿದ್ದರೆ ನೀವೂ ಸುಳ್ಳು ಹೇಳಲಾರಿರಿ’ ಎಂದು ಡಸಾಲ್ಟ್ ಏವಿಯೇಶನ್ ಸಿಇಓ ಹೇಳಿದರು.
ತಮ್ಮ ಫ್ರೆಂಚ್ ಕಂಪೆನಿ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಹಳೆಯ ಸಂಬಂಧಗಳನ್ನು ನೆನಪಿಸಿಕೊಂಡ ಟ್ರ್ಯಾಪಿಯರ್, “ನಮ್ಮ ಕಂಪೆನಿ ಭಾರತದೊಂದಿಗೆ ಮೊದಲ ಡೀಲ್ ಮಾಡಿಕೊಂಡದ್ದು 1953ರಲ್ಲಿ ; ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ರವರ ಆಡಳಿತಾವಧಿಯಲ್ಲಿ ‘ ಎಂದು ಹೇಳಿದರು.
ಡಸಾಲ್ಟ್ ಕಂಪೆನಿಯ ಭಾರತೀಯ ಆಫ್ಸಟ್ ಭಾಗೀದಾರ ಕಂಪೆನಿಯಾಗಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಕಂಪೆನಿಯನ್ನು ಆಯ್ಕೆ ಮಾಡಲಾಗಿರುವ ಬಗ್ಗೆ ಮಾತನಾಡಿದ ಟ್ರ್ಯಾಪಿಯರ್, “ಈ ಡೀಲ್‌ನಲ್ಲಿ ಹೂಡಲ್ಪಟ್ಟಿರುವ ಹಣವು ರಿಲಯನ್ಸ್ ಕಂಪೆನಿಗೆ ನೇರವಾಗಿ ಹೋಗುವುದಿಲ್ಲ. ಇದೊಂದು ಜಂಟಿ ಉದ್ಯಮವಾಗಿದೆ’ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
CongressVsAAP: ದಿಲ್ಲಿ ಪ್ಯಾರಿಸ್ ಆಗುತ್ತದೆ ಎಂದಿದ್ದ ಕೇಜ್ರಿ, ಏನೂ ಮಾಡಲಿಲ್ಲ: ರಾಹುಲ್
School Threat: ಉಗ್ರನ ಬೆಂಬಲಿಸಿದ್ದ ಸಂಸ್ಥೆ ಜತೆ ವಿದ್ಯಾರ್ಥಿಗೆ ನಂಟು!
Bengal: ಗಾಲಿಕುರ್ಚಿ ಅಲಭ್ಯತೆ: ಬೆನ್ನ ಮೇಲೆ ಪತಿಯ ಹೊತ್ತ ಮಹಿಳೆ!
MUST WATCH
ಹೊಸ ಸೇರ್ಪಡೆ
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
Ceasefire: ಇಸ್ರೇಲ್, ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ?
Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.