ಸೈಟ್ ಕೊಡಿಸುವುದಾಗಿ ವಂಚಿಸಿದ ಮೂವರ ಬಂಧನ
Team Udayavani, Nov 13, 2018, 12:00 PM IST
ಬೆಂಗಳೂರು: ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಹೇಳಿ 6 ಲಕ್ಷ ರೂ. ವಂಚಿಸಿದ್ದ ಅಪ್ಪ-ಮಗ ಸೇರಿ ಮೂವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಬೆಳ್ಳಂದೂರು ನಿವಾಸಿ ಷಣ್ಮುಗ (64), ಪುತ್ರ ದಿಲೀಪ್ (32), ಆಪ್ತ ನಾಗರಾಜ್ (44) ಬಂಧಿತರು. ಆರೋಪಿಗಳು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಬಸವನಗುಡಿ ನಿವಾಸಿ ಸತ್ಯನಾರಾಯಣ ಎಂಬುವವರಿಗೆ ನಿವೇಶನ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದರು ಎಂದು ಪೊಲೀಸರು ಹೇಳಿದರು.
ಕೆಲ ತಿಂಗಳ ಹಿಂದೆ ಖಾಸಗಿ ಕಂಪನಿ ಉದ್ಯೋಗಿ ಸತ್ಯನಾರಾಯಣ್ ಅವರನ್ನು ಆರೋಪಿ ಷಣ್ಮುಗ ಪರಿಚಯಿಸಿಕೊಂಡಿದ್ದು, ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ನಂಬಿಸಿದ್ದ. ಇತ್ತೀಚೆಗೆ ಆರೋಪಿ ಷಣ್ಮುಗ ಸರ್ಜಾಪುರ ರಸ್ತೆಯಲ್ಲಿರುವ ಗೋಪಿ ಎಂಬುವರ ನಿವೇಶನ ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ಸತ್ಯನಾರಾಯಣ್ಗೆ ಹೇಳಿದ್ದ. ಇದನ್ನು ನಂಬಿದ ಸತ್ಯನಾರಾಯಣ್ ಹಂತ-ಹಂತವಾಗಿ ಷಣ್ಮುಗ, ಇವರ ಮಗ ದಿಲೀಪ್ ಮತ್ತು ಆಪ್ತ ನಾಗರಾಜ್ಗೆ ಹಂತ-ಹಂತವಾಗಿ 6 ಲಕ್ಷ ರೂ. ಸಂದಾಯ ಮಾಡಿದ್ದಾರೆ.
ಹಣ ಪಡೆದು ಬಹಳ ದಿನಗಳಾದರೂ ಆರೋಪಿಗಳು ನಿವೇಶನ ಕೊಡಿಸುವ ಬಗ್ಗೆ ಮಾತನಾಡಿಲ್ಲ. ಅನುಮಾನಗೊಂಡ ಸತ್ಯನಾರಾಯಣ್ ಆರೋಪಿಗಳನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದರಿಂದ ಆತಂಕಗೊಂಡ ಸತ್ಯನಾರಾಯಣ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.