ಕಾಶ್ಮೀರಿ ಯುವಕರಿಗೆ ತಪ್ಪು ಮಾರ್ಗದರ್ಶನ: ಜ|ರಾವತ್ ಖಡಕ್ ಎಚ್ಚರಿಕೆ
Team Udayavani, Nov 13, 2018, 12:08 PM IST
ಹೊಸದಿಲ್ಲಿ : ಜಮ್ಮು ಕಾಶ್ಮೀರದ ಯುವಕರಿಗೆ ತಪ್ಪು ಮಾರ್ಗದರ್ಶನ ನೀಡಿ ಅವರನ್ನು ಹಿಂಸೆಗೆ ಇಳಿಸುವವರಿಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕಟುವಾದ ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರಿ ಯುವಕರು ತಮ್ಮ ಕಾಲನಿಗಳಲ್ಲಿ ಮತ್ತು ಮಸೀದಿಗಳಲ್ಲಿ ಹರಡಲಾಗುವ ವದಂತಿಗಳನ್ನು ನಂಬಿ ತಪ್ಪು ದಾರಿಗೆ ಇಳಿದು ಹಿಂಸೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ಜನರಲ್ ರಾವತ್ ಹೇಳಿದರು.
ಮೌಲ್ವಿಗಳು ಮಸೀದಿಗಳಲ್ಲಿ, ಮದ್ರಸಗಳಲ್ಲಿ ಕಾಶ್ಮೀರಿ ಯುವಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಯುವಕರು ಬೀದಿಗೆ ಇಳಿಯುತ್ತಿದ್ದಾರೆ; ರಾಜ್ಯ ಸರಕಾರ ಮತ್ತು ಸೇನಾ ಪಡೆಗಳ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಿಗೆ ಇಳಿಯುತ್ತಿದ್ದಾರೆ ಎಂದು ಜ| ರಾವತ್ ಹೇಳಿದರು.
ಜಮ್ಮು ಕಾಶ್ಮೀರದ ಜನರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳದೆ ವಿವೇಕದಿಂದ ವರ್ತಿಸಿ ಶಾಂತಿಯನ್ನು ಕಾಪಿಡಬೇಕು ಎಂದು ರಾವತ್ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
House arrest: ಮಾರಾಮಾರಿ ಪ್ರಕರಣ; ಕೆಟಿಆರ್ ಸೇರಿ ಬಿಆರೆಸ್ ಪ್ರಮುಖರ ಗೃಹ ಬಂಧನ
Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ
MVA: ಏಕಾಂಗಿ ಸ್ಪರ್ಧೆ ಮಾತು: ಅಘಾಡಿ ಬಿರುಕು ವದಂತಿಗೆ ಪುಷ್ಟಿ ನೀಡಿದ ಪವಾರ್
ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್
Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.