ಮತ ರಾಜಕೀಯಕ್ಕೆ ರಾಮಾಯಣ ಬಳಕೆ ಸಲ್ಲ


Team Udayavani, Nov 13, 2018, 4:30 PM IST

dvg-6.jpg

ಹೊಸಪೇಟೆ: ಸಿಂಹಾಸನ ಬೇಡವೆಂದು ಕಾಡಿಗೆ ಹೋದ ರಾಮನ ಪಾತ್ರವನ್ನು ಇಂದು ಸಿಂಹಾಸನದ ಅವಕಾಶಕ್ಕಾಗಿ ಬಳಸಿಕೊಳ್ಳುತ್ತಿರುವುದು ರಾಜಕೀಯ ಅನೈತಿಕತೆ ಎಂದು ಸಾಹಿತಿ, ಚಿಂತಕ ಡಾ| ಬರಗೂರು ರಾಮಚಂದ್ರಪ್ಪ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ “ವಾಲ್ಮೀಕಿ ರಾಮಾಯಣ ಮರು ನಿರೂಪಣೆ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
 
ರಾಮಾಯಣವನ್ನು ಕೇವಲ ಸಾಹಿತ್ಯ ಕೃತಿಯಾಗಿ ಉಳಿಸಲಾಗಿಲ್ಲ. ಪಕ್ಷ ರಾಜಕೀಯ, ಸಾಂಸ್ಕೃತಿಕ,  ಸಾಮಾಜಿಕ ರಾಜಕೀಯ ಕೃತಿಯಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ರಾಮಾಯಣಕ್ಕೆ ಮರುಪ್ರವೇಶ ಅಷ್ಟು ಸುಲಭವಲ್ಲ. ಇಂದು ಶ್ರೇಷ್ಠ ಕೃತಿಯೊಂದು ರಾಜಕೀಯ ವಲಯದಲ್ಲಿ ಅಪಬಳಕೆ, ಬೌದ್ಧಿಕ ವಲಯದಲ್ಲಿ ಅಪವ್ಯಾಖ್ಯಾನಕ್ಕೆ ಒಳಗಾಗುತ್ತಿದೆ. ಮತ ರಾಜಕೀಯದ ಸಾಧನವಾಗಿ ಬಳಸಿದರೆ ಅದು ಕೃತಿಗೆ ಮಾಡುವ ಅವಮಾನ. ಇದೆಲ್ಲದರಿಂದ ರಾಮಾಯಣಕ್ಕೆ ಮುಕ್ತಿ ಸಿಗಬೇಕು. ಶ್ರೀರಾಮ
ಏಕಪಕ್ಷದ ಸಾಧನವಾಗಬೇಕೆ? ಎಂದು ನಾವೆಲ್ಲ ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಹನೀಯರ ಜಯಂತಿ ಆಚರಣೆಗಳು ಜಾತಿಗೆ ಸೀಮಿತವಾಗುತ್ತಿವೆ. ಸಾಮಾಜಿಕ ಅಸ್ಮಿತೆಯ ಕಾರಣಕ್ಕೆ ನಾವು ಸಾಧಕರನ್ನು ನೆನೆಯಬೇಕು. ಆದರೆ ಅದರ ನಿರ್ವಹಣೆಯು ಸಮಾಜದಲ್ಲಿ ಜಾತಿಯನ್ನು ಗಟ್ಟಿಗೊಳಿಸುತ್ತಿದೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ರಾಮಾಯಣವನ್ನು ಅಂತರ್‌ ಶಿಸ್ತೀಯ ಅಧ್ಯಯನದ ನೆಲೆಗೆ ಒಳಪಡಿಸಬೇಕು. ರಾಮಾಯಣದಲ್ಲಿ ಸೀತೆಯು ಸಹಿಷ್ಣುತೆಯ ಸಂಕೇತ. ಆದರೆ ಸೀತೆಯನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ? ಈಕೆಯ ಪ್ರತಿಮೆಯನ್ನು ಏಕೆ ಇಡುವುದಿಲ್ಲ ಎಂಬುದೇ ರಾಜಕಾರಣವಾಗಿದೆ. ಇದು ಮಹಿಳೆಗೆ ಮಾಡುವ ಅನಾದರ. ಅಂದರೆ ದೇಶದಲ್ಲಿ ಸಹಿಷ್ಣುತೆ ಇಲ್ಲದ್ದರಿಂದ ಸೀತೆಯನ್ನು ನೆನಪಿಸುವುದಿಲ್ಲ. ತಾರಾ, ಮಂಡೋದರಿ, ಊರ್ಮಿಳೆ, ಶಬರಿ, ಸೀತೆ ಇವರೆಲ್ಲ ರಾಮಾಯಣದಲ್ಲಿ ಭೂಮಿ ತೂಕದ ಪಾತ್ರಗಳು ಎಂದು ವಿವರಿಸಿದರು.

ಕುಲಪತಿ ಡಾ| ಮಲ್ಲಿಕಾ ಎಸ್‌.ಘಂಟಿ ಮಾತನಾಡಿ, ರಾಮಾಯಣ, ಮಹಾಭಾರತಗಳು ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದ ನೆಮ್ಮದಿ ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿ ವೆ. ಸಹಿಷ್ಣುತೆಯ ಧಾರಣಶಕ್ತಿ ಗ್ರಾಮೀಣ ಮಹಿಳೆಯರಿಗೆ ಎಲ್ಲಿಂದ ಬಂದಿದೆ? ಎಂದರೆ ರಾಮಾಯಣ, ಮಹಾಭಾರತಗಳಿಂದ. ರಾಜಕಾರಣವು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಈ ಸಂದರ್ಭದಲ್ಲಿ ಈ ಕಾವ್ಯಗಳು ಸಾಂತ್ವನ ಹೇಳುತ್ತಿವೆ ಎಂದರು.

ಚಿಂತಕ ಡಾ| ಕೃಷ್ಣಮೂರ್ತಿ ಹನೂರು ಮಾತನಾಡಿ, ರಾಮಾಯಣವು ದೇಶದ ಜೀವಂತ ವಸ್ತು ಸಂಗ್ರಹಾಲಯವಾಗಿದೆ ಎಂದು ರಾಮಾಯಣವನ್ನು ನಂಬಿ ಉಪಜೀವನ ನಡೆಸುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಬಿಚ್ಚಿಟ್ಟರು. ಡಾ| ಎಚ್‌.ಎಸ್‌. ವೆಂಕಟೇಶಮೂರ್ತಿ ಮಾತನಾಡಿ, ಸಮಾಜದ ಸಂದರ್ಭ ಹಾಗೂ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದೇ ಮರುನಿರೂಪಣೆಯಾಗಿದೆ. ಸೀತೆಯ ಪಾತಿವ್ರತ್ಯದ ನಿರೂಪಣೆಗಾಗಿ ಅಗ್ನಿಪ್ರವೇಶದ ಸಂದರ್ಭದಲ್ಲಿ ಕುವೆಂಪು ಅವರು ಶ್ರೀರಾಮನ ಶುದ್ಧತೆಯನ್ನು ತಮ್ಮ ರಾಮಾಯಣದಲ್ಲಿ ಮರುನಿರೂಪಣೆಯ ಮೂಲಕ ಹೇಳಿದ್ದಾರೆ ಎಂದು ತಿಳಿಸಿದರು.

ಕುಲಸಚಿವ ಡಾ| ಮಂಜುನಾಥ್‌ ಬೇವಿನಕಟ್ಟಿ, ವಿಚಾರ ಸಂಕಿರಣದ ಸಂಚಾಲಕ ಡಾ|ಅಮರೇಶ ಯತಗಲ್‌, ಶೈಕ್ಷಣಿಕ ಉಪಕುಲಸಚಿವ ಡಾ| ಎಸ್‌. ವೈ.ಸೋಮಶೇಖರ್‌, ಆಡಳಿತ ಉಪಕುಲಸಚಿವ ಡಾ|ಎ. ವೆಂಕಟೇಶ ಇನ್ನಿತರರಿದ್ದರು. ಇದೇ
ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ನಿಧನಕ್ಕೆ ಸಂತಾಪ ಸೂಚಿಸಲಾಯಿತು. 

ಹೊಸಪೇಟೆ: ಸಿಂಹಾಸನ ಬೇಡವೆಂದು ಕಾಡಿಗೆ ಹೋದ ರಾಮನ ಪಾತ್ರವನ್ನು ಇಂದು ಸಿಂಹಾಸನದ ಅವಕಾಶಕ್ಕಾಗಿ ಬಳಸಿಕೊಳ್ಳುತ್ತಿರುವುದು ರಾಜಕೀಯ ಅನೈತಿಕತೆ ಎಂದು ಸಾಹಿತಿ, ಚಿಂತಕ ಡಾ| ಬರಗೂರು ರಾಮಚಂದ್ರಪ್ಪ ಹೇಳಿದರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ “ವಾಲ್ಮೀಕಿ ರಾಮಾಯಣ ಮರು ನಿರೂಪಣೆ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಣವನ್ನು ಕೇವಲ ಸಾಹಿತ್ಯ ಕೃತಿಯಾಗಿ ಉಳಿಸಲಾಗಿಲ್ಲ. ಪಕ್ಷ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ರಾಜಕೀಯ ಕೃತಿಯಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ರಾಮಾಯಣಕ್ಕೆ ಮರುಪ್ರವೇಶ ಅಷ್ಟು ಸುಲಭವಲ್ಲ. ಇಂದು ಶ್ರೇಷ್ಠ ಕೃತಿಯೊಂದು
ರಾಜಕೀಯ ವಲಯದಲ್ಲಿ ಅಪಬಳಕೆ, ಬೌದ್ಧಿಕ ವಲಯದಲ್ಲಿ ಅಪವ್ಯಾಖ್ಯಾನಕ್ಕೆ ಒಳಗಾಗುತ್ತಿದೆ. ಮತ ರಾಜಕೀಯದ ಸಾಧನವಾಗಿ ಬಳಸಿದರೆ ಅದು ಕೃತಿಗೆ ಮಾಡುವ ಅವಮಾನ. ಇದೆಲ್ಲದರಿಂದ ರಾಮಾಯಣಕ್ಕೆ ಮುಕ್ತಿ ಸಿಗಬೇಕು. ಶ್ರೀರಾಮ ಏಕಪಕ್ಷದ ಸಾಧನವಾಗಬೇಕೆ? ಎಂದು ನಾವೆಲ್ಲ ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಹನೀಯರ ಜಯಂತಿ ಆಚರಣೆಗಳು ಜಾತಿಗೆ ಸೀಮಿತವಾಗುತ್ತಿವೆ. ಸಾಮಾಜಿಕ ಅಸ್ಮಿತೆಯ ಕಾರಣಕ್ಕೆ ನಾವು ಸಾಧಕರನ್ನು ನೆನೆಯಬೇಕು. ಆದರೆ ಅದರ ನಿರ್ವಹಣೆಯು ಸಮಾಜದಲ್ಲಿ ಜಾತಿಯನ್ನು ಗಟ್ಟಿಗೊಳಿಸುತ್ತಿದೆ.

ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ರಾಮಾಯಣವನ್ನು ಅಂತರ್‌ ಶಿಸ್ತೀಯ ಅಧ್ಯಯನದ ನೆಲೆಗೆ ಒಳಪಡಿಸಬೇಕು. ರಾಮಾಯಣದಲ್ಲಿ ಸೀತೆಯು ಸಹಿಷ್ಣುತೆಯ ಸಂಕೇತ. ಆದರೆ ಸೀತೆಯನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ? ಈಕೆಯ ಪ್ರತಿಮೆಯನ್ನು ಏಕೆ ಇಡುವುದಿಲ್ಲ ಎಂಬುದೇ ರಾಜಕಾರಣವಾಗಿದೆ. ಇದು ಮಹಿಳೆಗೆ ಮಾಡುವ ಅನಾದರ. ಅಂದರೆ ದೇಶದಲ್ಲಿ ಸಹಿಷ್ಣುತೆ ಇಲ್ಲದ್ದರಿಂದ ಸೀತೆಯನ್ನು ನೆನಪಿಸುವುದಿಲ್ಲ. ತಾರಾ, ಮಂಡೋದರಿ, ಊರ್ಮಿಳೆ, ಶಬರಿ, ಸೀತೆ ಇವರೆಲ್ಲ ರಾಮಾಯಣದಲ್ಲಿ ಭೂಮಿ ತೂಕದ ಪಾತ್ರಗಳು ಎಂದು ವಿವರಿಸಿದರು.

ಕುಲಪತಿ ಡಾ| ಮಲ್ಲಿಕಾ ಎಸ್‌.ಘಂಟಿ ಮಾತನಾಡಿ, ರಾಮಾಯಣ, ಮಹಾಭಾರತಗಳು ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದ
ನೆಮ್ಮದಿ ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿವೆ. ಸಹಿಷ್ಣುತೆಯ ಧಾರಣಶಕ್ತಿ ಗ್ರಾಮೀಣ ಮಹಿಳೆಯರಿಗೆ ಎಲ್ಲಿಂದ ಬಂದಿದೆ?
ಎಂದರೆ ರಾಮಾಯಣ, ಮಹಾಭಾರತಗಳಿಂದ. ರಾಜಕಾರಣವು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಈ ಸಂದರ್ಭದಲ್ಲಿ ಈ ಕಾವ್ಯಗಳು ಸಾಂತ್ವನ ಹೇಳುತ್ತಿವೆ ಎಂದರು.

ಚಿಂತಕ ಡಾ| ಕೃಷ್ಣಮೂರ್ತಿ ಹನೂರು ಮಾತನಾಡಿ, ರಾಮಾಯಣವು ದೇಶದ ಜೀವಂತ ವಸ್ತು ಸಂಗ್ರಹಾಲಯವಾಗಿದೆ ಎಂದು
ರಾಮಾಯಣವನ್ನು ನಂಬಿ ಉಪಜೀವನ ನಡೆಸುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಬಿಚ್ಚಿಟ್ಟರು. ಡಾ| ಎಚ್‌.ಎಸ್‌. ವೆಂಕಟೇಶಮೂರ್ತಿ ಮಾತನಾಡಿ, ಸಮಾಜದ ಸಂದರ್ಭ ಹಾಗೂ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದೇ  ಮರುನಿರೂಪಣೆಯಾಗಿದೆ. ಸೀತೆಯ ಪಾತಿವ್ರತ್ಯದ ನಿರೂಪಣೆಗಾಗಿ ಅಗ್ನಿಪ್ರವೇಶದ ಸಂದರ್ಭದಲ್ಲಿ ಕುವೆಂಪು ಅವರು ಶ್ರೀರಾಮನ ಶುದ್ಧತೆಯನ್ನು ತಮ್ಮ ರಾಮಾಯಣದಲ್ಲಿ ಮರುನಿರೂಪಣೆಯ ಮೂಲಕ ಹೇಳಿದ್ದಾರೆ ಎಂದು ತಿಳಿಸಿದರು.

ಕುಲಸಚಿವ ಡಾ| ಮಂಜುನಾಥ್‌ ಬೇವಿನಕಟ್ಟಿ, ವಿಚಾರ ಸಂಕಿರಣದ ಸಂಚಾಲಕ ಡಾ|ಅಮರೇಶ ಯತಗಲ್‌, ಶೈಕ್ಷಣಿಕ ಉಪಕುಲಸಚಿವ ಡಾ| ಎಸ್‌. ವೈ.ಸೋಮಶೇಖರ್‌, ಆಡಳಿತ ಉಪಕುಲಸಚಿವ ಡಾ|ಎ. ವೆಂಕಟೇಶ ಇನ್ನಿತರರಿದ್ದರು. ಇದೇ
ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಟಾಪ್ ನ್ಯೂಸ್

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Pune: Batter collapses on the field!; Video goes viral

Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!;‌ ವಿಡಿಯೋ ವೈರಲ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

suicide

Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

6-dandeli

Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.