ರಣಜಿ: ಮುನ್ನಡೆಗಾಗಿ ಕರ್ನಾಟಕ ಹೋರಾಟ


Team Udayavani, Nov 14, 2018, 8:30 AM IST

x-50.jpg

ನಾಗ್ಪುರ: ಕೊನೆಯ ಹಂತದಲ್ಲಿ ಅನಿರೀಕ್ಷಿತವಾಗಿ ಸಿಡಿದು ನಿಂತ ವಿದರ್ಭ ಬ್ಯಾಟ್ಸ್‌ಮನ್‌ಗಳು, ಇದಕ್ಕೆ ಪ್ರತಿಯಾಗಿ ತಡವರಿಸುತ್ತಲೇ ಗೌರವಾರ್ಹ ಮೊತ್ತ ಮುಟ್ಟಿರುವ ಕರ್ನಾಟಕ, ಪ್ರವಾಸಿಗರನ್ನು ಕಡಿಮೆ ಮೊತ್ತಕ್ಕೆ ಆಲೌಟ್‌ ಮಾಡುವ ಉದ್ದೇಶದಲ್ಲಿರುವ ವಿದರ್ಭ, ಆತಿಥೇಯರ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿ ಕರ್ನಾಟಕ…ಇದಿಷ್ಟು ಕರ್ನಾಟಕ-ವಿದರ್ಭ ರಣಜಿ ಪಂದ್ಯದ ಎರಡನೇ ದಿನದ ಮುಖ್ಯಾಂಶಗಳು.

ಮೊದಲ ದಿನ 8 ವಿಕೆಟ್‌ ಕಳೆದುಕೊಂಡು 245 ರನ್‌ ಗಳಿಸಿದ್ದ ವಿದರ್ಭ, ಎರಡನೇ ದಿನ ಹೆಚ್ಚುವರಿಯಾಗಿ 62 ರನ್‌ ಪೇರಿಸಿ ಆಲೌಟಾಯಿತು. ವಿದರ್ಭದ ಅಂತಿಮ ಎರಡು ವಿಕೆಟನ್ನು ಬೇಗ ಉರುಳಿಸುವ ಯೋಜನೆ ಹೊಂದಿದ್ದ ಕರ್ನಾಟಕ ವೈಫ‌ಲ್ಯ ಅನುಭವಿಸಿತು. ವಿದರ್ಭ ಇನ್ನಿಂಗ್ಸ್‌ ಒಂದು ರೀತಿ ನೋಡಿದರೆ ಬೃಹತ್‌ ಮೊತ್ತಕ್ಕೆ ಬೆಳೆಯಿತು. ಇದರಿಂದಾಗಿ ಕರ್ನಾಟಕ ತುಸು ಒತ್ತಡಕ್ಕೆ ಸಿಲುಕಿದೆ. ವಿದರ್ಭದ 307 ರನ್ನಿಗೆ ಉತ್ತರವಾಗಿ ಕರ್ನಾಟಕ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದು 208 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಕರ್ನಾಟಕ ಇನ್ನೂ 99 ರನ್‌ ಗಳಿಸಬೇಕಾಗಿದೆ. ಆದರೆ ನಾಗ್ಪುರದ ಪಿಚ್‌ ಬೌಲಿಂಗ್‌ಗೆ ಅದರಲ್ಲೂ ಸ್ಪಿನ್‌ ಬೌಲಿಂಗ್‌ಗೆ ಹೆಚ್ಚು ನೆರವು ನೀಡುತ್ತಿರುವುದರಿಂದ ರಾಜ್ಯಕ್ಕೆ ಇನ್ನುಳಿದಿರುವ 5 ವಿಕೆಟ್‌ಗಳಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಕುಸಿದ ಕರ್ನಾಟಕ 
ಭಾರೀ ಮೊತ್ತ ಪೇರಿಸಿಕೊಳ್ಳುವ ಯೋಜನೆ ಯಲ್ಲಿದ್ದ ಕರ್ನಾಟಕ ವಿದರ್ಭದ ಬಿಗು ದಾಳಿಗೆ ಕುಸಿಯಿತು. ಮೊದಲ ಐದು ವಿಕೆಟ್‌ಗಳನ್ನು ಕೇವಲ 87 ರನ್‌ಗಳಿಗೆ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ರವಿಕುಮಾರ್‌ ಸಮರ್ಥ್, ಕೆ.ವಿ. ಸಿದ್ಧಾರ್ಥ್, ಕರುಣ್‌ ನಾಯರ್‌, ಸ್ಟುವರ್ಟ್‌ ಬಿನ್ನಿ ಅಲ್ಪ ಮೊತ್ತಕ್ಕೆ ಔಟಾದ ಕಾರಣ ತಂಡದ ಜಂಘಾಬಲವೇ ಉದುರಿದಂತಾಗಿತ್ತು. ಆ ಹಂತದಲ್ಲಿ ನಿಶ್ಚಲ್‌ ಅವರನ್ನು ಸೇರಿಕೊಂಡ ಶ್ರೇಯಸ್‌ ಗೋಪಾಲ್‌ ತಂಡವನ್ನು ಆಧರಿಸಿದರು. ಐದನೇ ವಿಕೆಟಿಗೆ ಅವರಿಬ್ಬರು 62 ರನ್ನುಗಳ ಜತೆಯಾಟ ನಡೆಸಿದರು. ಇದರಿಂದಾಗಿ 149 ರನ್‌ಗಳಾಗುವವರೆಗೆ ವಿಕೆಟ್‌ ಪತನವಾಗಲಿಲ್ಲ. ಮುಂದೆ ಈ ಮೊತ್ತ ಇನ್ನಷ್ಟು ಏರಿ 208ಕ್ಕೆ ಮುಟ್ಟಿತು. ಅಷ್ಟರಲ್ಲಿ ದಿನದಾಟ ಮುಗಿದಿದ್ದರಿಂದ ರಾಜ್ಯ ಹೆಚ್ಚಿನ ಅಪಾಯದಿಂದ ಬಚಾವಾಯಿತು.

ಸಂಕ್ಷಿಪ್ತ ಸ್ಕೋರು
ವಿದರ್ಭ 307; ಕರ್ನಾಟಕ 5 ವಿಕೆಟಿಗೆ 208 (ನಿಶ್ಚಲ್‌ 66 ಬ್ಯಾಟಿಂಗ್‌, ಸ್ಟುವರ್ಟ್‌ ಬಿನ್ನಿ 20, ಶ್ರೇಯಸ್‌ ಗೋಪಾಲ್‌ 30, ಶರತ್‌ 46 ಬ್ಯಾಟಿಂಗ್‌).

ನಿಶ್ಚಲ್‌, ಶರತ್‌ ತಾಳ್ಮೆಯ ಬ್ಯಾಟಿಂಗ್‌
ಕರ್ನಾಟಕದ ಪರ ಡಿ.ನಿಶ್ಚಲ್‌ ಅತ್ಯಂತ ತಾಳ್ಮೆಯ ಬ್ಯಾಟಿಂಗ್‌ ಮೂಲಕ ತಂಡದ ನೆರವಿಗೆ ನಿಂತಿದ್ದಾರೆ. ಟೆಸ್ಟ್‌  ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಹ ಅಸಾಮಾನ್ಯ ತಾಳ್ಮೆ ಪ್ರದರ್ಶಿಸಿದ ನಿಶ್ಚಲ್‌ ತಮ್ಮ ಅಜೇಯ 66 ರನ್‌ಗಳ ಇನ್ನಿಂಗ್ಸ್‌ಗಾಗಿ 209 ಎಸೆತ ಬಳಸಿಕೊಂಡರು. ಅದರಲ್ಲಿ ಕೇವಲ 4 ಬೌಂಡರಿ ಇದೆ ಎನ್ನುವುದು ಗಮನಾರ್ಹ. ಕರ್ನಾಟಕದ ಶೀಘ್ರ ಕುಸಿತ ತಪ್ಪಿಸಿದ್ದೇ ಈ ಇನ್ನಿಂಗ್ಸ್‌. 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಬಿ.ಆರ್‌. ಶರತ್‌ ಕೂಡ ಉತ್ತಮ ಆಟವಾಡಿ ನಿಶ್ಚಲ್‌ಗೆ ನೆರವು ನೀಡಿದರು. ನಿಶ್ಚಲ್‌ಗೆ ಹೋಲಿಸಿದರೆ ಶರತ್‌ ವೇಗವಾಗಿ ಆಡಿದರು. 76 ಎಸೆತ ಎದುರಿಸಿದ ಅವರು 9 ಬೌಂಡರಿಗಳೊಂದಿಗೆ 46 ರನ್‌ ಗಳಿಸಿದರು.ಈ ಇಬ್ಬರು ಆಟಗಾರರು ಅಜೇಯರಾಗಿ ಬ್ಯಾಟ್‌ ಹಿಡಿದು ನಿಂತಿದ್ದಾರೆ. ಬುಧವಾರ ಇವರಿಬ್ಬರ ಯಶಸ್ಸಿನ ಮೇಲೆ ಕರ್ನಾಟಕ ಹೆಚ್ಚುವರಿ ಯಾಗಿ ಎಷ್ಟು ರನ್‌ ಗಳಿಸುತ್ತದೆ ಎನ್ನುವುದು ತೀರ್ಮಾನವಾಗುತ್ತದೆ. ಅವರಿಬ್ಬರ ಆಟವನ್ನು ಗಮನಿಸಿದರೆ ರಾಜ್ಯ ತಂಡ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. 

ಟಾಪ್ ನ್ಯೂಸ್

ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಐವರು ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5 ವೈದ್ಯರು ಸ್ಥಳದಲ್ಲೇ ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

1-ddssas

Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್

Naxal BIG

Maoist; 15 ಲಕ್ಷ ರೂ.ಇನಾಮು ಹೊಂದಿದ್ದ ಮಾವೋವಾದಿ ಕಮಾಂಡರ್ ಆಂತರಿಕ ಕಲಹದಲ್ಲಿ ಹ*ತ್ಯೆ

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

8-

Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

IPl-RCb

IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಐವರು ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5 ವೈದ್ಯರು ಸ್ಥಳದಲ್ಲೇ ಮೃತ್ಯು

11(1

Udupi: ಇಲ್ಲಿ ಹೊಂಡಗಳೇ ಸ್ಪೀಡ್‌ ಬ್ರೇಕರ್‌ಗಳು!

10-uv-fusion

Rainy Season: ಮೊಬೈಲ್‌ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

1-ddssas

Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.