ಈ ಮಹಿಳೆಯ ಹೊಟ್ಟೆಯಲ್ಲಿತ್ತು 1.5 ಕೆಜಿ ಕಬ್ಬಿಣ
Team Udayavani, Nov 14, 2018, 10:30 AM IST
ಅಹಮದಾಬಾದ್: ಒಂದು ಇಂಚಿನ ಕಬ್ಬಿಣದ ಮೊಳೆ, ಸೇಫ್ಟಿ ಪಿನ್, ನಟ್, ಬೋಲ್ಟ್, ಬ್ರೇಸ್ಲೆಟ್… ಏನಿದು ಪಟ್ಟಿ ಎಂದು ಯೋಚನೆಯೇ? ಅ.31ರಂದು ಗುಜರಾತ್ನ ಅಹಮದಾಬಾದ್ನ ಸರಕಾರಿ ಆಸ್ಪತೆ Åಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದ ವಸ್ತುಗಳಿವು. ಹೊಟ್ಟೆಯಿಂದ ತೆಗೆದ ವಸ್ತುಗಳನ್ನು ತೂಗಿ ನೋಡಿದಾಗ ಒಟ್ಟು 1.5 ಕೆಜಿ ತೂಕವಿತ್ತು.
ಮಹಾರಾಷ್ಟ್ರದ ಶಿರಡಿ ಮೂಲದ ಸಂಗೀತಾ (40) ಎಂಬಾಕೆ ಮಾನಸಿಕ ಕಾಯಿಲೆಗೆ ಗುರಿಯಾಗಿದ್ದಾರೆ. ರಸ್ತೆಯಲ್ಲಿ ಅಲೆ ದಾಡುತ್ತಿದ್ದ ಆಕೆಯನ್ನು ಕೋರ್ಟ್ ಆದೇಶದ ಮೇರೆಗೆ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ತುಂಬಾ ಹೊಟ್ಟೆನೋವು ಎಂದು ಹೇಳಿದ ಹಿನ್ನೆಲೆಯಲ್ಲಿ ವೈದ್ಯರ ತಂಡ ಆಕೆಯನ್ನು ಪರೀಕ್ಷೆಗೆ ಒಳಪಡಿಸಿತು. ಎಕ್ಸ್ ರೇ ತೆಗೆದು ನೋಡಿದಾಗ ಅಚ್ಚರಿಗೆ ಒಳಗಾಗುವ ಸರದಿ ವೈದ್ಯರದ್ದು. ಆಕೆಯ ಹೊಟ್ಟೆಯಲ್ಲಿ ಮೊಳೆ, ಸೇಫ್ಟಿ ಪಿನ್, ನಟ್, ಬೋಲ್ಟ್ ಕಂಡು ಬಂತು. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯ ಲಾಯಿತು ಎಂದು ಹಿರಿಯ ಸರ್ಜನ್ ಡಾ.ನಿತಿನ್ ಪಾರ್ಮರ್ ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆಯಂತೂ ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ನಡೆಯಿತು.
ಕಬ್ಬಿಣದ ವಸ್ತುಗಳನ್ನು ತಿನ್ನುವ “ಆ್ಯಕ್ಯು ಪಾಗಿÂಯಾ’ (Acuphagia) ಎಂಬ ಕಾಯಿಲೆ ಇದಾಗಿದೆ. ಮಾನಸಿಕವಾಗಿ ಅಸ್ವಸ್ಥತೆಯಿಂದ ಬಳಲುತ್ತಿರುವವರು ಜೀರ್ಣವಾಗದ ವಸ್ತುಗಳನ್ನು ತಿನ್ನುತ್ತಾರೆ. ವರ್ಷಕ್ಕೆ ಒಂದು ಇಂಥ ಪ್ರಕರಣಗಳು ವರದಿಯಾಗುತ್ತವೆ ಎಂದು ಪಾರ್ಮರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.