ಸೊಳ್ಳೆ ಉತ್ಪಾದನಾ ತಾಣವಾಗುತ್ತಿರುವ ಪಡುಬಿದ್ರಿ ಪೇಟೆಯ ಕೊಳಚೆ ಗುಂಡಿ
Team Udayavani, Nov 14, 2018, 1:12 PM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆಯಲ್ಲಿ ಸ್ಥಗಿತಗೊಂಡಂತಿರುವ ಆಮೆ ನಡಿಗೆಯ ಚರಂಡಿ ಕಾಮಗಾರಿಯಿಂದಾಗಿ ಪಡುಬಿದ್ರಿ ಪೇಟೆಯ ಮಧ್ಯಭಾಗದಲ್ಲೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಡುಗಟ್ಟಿ ನಿಂತಿರುವ ಕೊಳಚೆ ಗುಂಡಿಯೊಂದು ಸೊಳ್ಳೆಗಳ ಉತ್ಪಾದನಾ ತಾಣವಾಗಿ ಮಾರ್ಪಟ್ಟಿದೆ.
ಸಾರ್ವಜನಿಕರಿಗೆ ಕೊಳಚೆ ಓಕುಳಿ
ಕಳೆದ 2 ತಿಂಗಳುಗಳಿಂದ ಕಾರ್ಕಳ ಜಂಕ್ಷನ್ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಪಡುಬಿದ್ರಿ ಗ್ರಾ. ಪಂ. ನ ಕೇರಿ ವಾರ್ಡ್‌ನ ಕೊಳಚೆ ನೀರು ಹೆದ್ದಾರಿಯಲ್ಲಿನ ಅರೆಬರೆ ಮೋರಿಯ ಮೂಲಕ ಹರಿದು ಕಾರ್ಕಳ ಜಂಕ್ಷನ್ ಬಳಿಯಲ್ಲಿ ಸಂಗ್ರಹಗೊಂಡಿದೆ. ಇದರಿಂದ ಅಲ್ಲಿಂದ ಹಾದು ಹೋಗುವ ಜನ ಸಾಮಾನ್ಯರಿಗೆ ವಾಹನ ಚಾಲಕರಿಗೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಈ ನಿಂತ ನೀರಲ್ಲಿ ಸೊಳ್ಳೆಗಳು ಹುಟ್ಟಿಕೊಳ್ಳುತ್ತಿದೆ. ಜತೆಗೆ ಕೊಳಚೆ ನೀರು ರಸ್ತೆಯಲ್ಲೇ ಹರಿದು ಬಸ್ಸಿಗಾಗಿ ಕಾದು ನಿಲ್ಲುವ ಸಾರ್ವಜನಿಕರ ಮೇಲೆ ಸಿಂಪರಣೆಯಾಗುತ್ತಿದೆ.
ಸೂಕ್ತ ಕ್ರಮಕ್ಕಾಗಿ ಪಂಚಾಯತ್‌ಗೆ ಪತ್ರ
ಕೊಳಚೆ ಸಮಸ್ಯೆ ಪರಿಹಾರ ಗ್ರಾ. ಪಂ. ಜವಾಬ್ದಾರಿಯಾಗಿದೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ. ಪಂ. ಗೆ ಪತ್ರ ಬರೆಯಲಾಗುವುದು.
-ಡಾ | ಬಿ. ಬಿ. ರಾವ್, ವೈದ್ಯಾಧಿಕಾರಿ, ಪಡುಬಿದ್ರಿ ಪ್ರಾ.ಆ.ಕೇಂದ್ರ
ಕೊಳಚೆ ಗುಂಡಿಗಳು ನಿರ್ಮಾಣವಾದರೆ ಪಂಚಾಯತ್ ಖಾಲಿ ಮಾಡಲಿದೆ
ಕೊಳಚೆ ಸಮಸ್ಯೆಯನ್ನು ಹಾಗೆಯೇ ಬಿಡಲಾಗದು. ಈ ಕುರಿತಾಗಿ ಕೇರಿಯ ನಿವಾಸಿಗಳಲ್ಲೇ ಅರಿವು ಮೂಡಿಸುವ ಕ್ರಮವನ್ನು ಪಂಚಾಯತ್ ಕೈಗೊಳ್ಳಲಿದೆ. ಮನೆ ಹಿತ್ತಿಲಲ್ಲೇ ಕೊಳಚೆ ಗುಂಡಿ ನಿರ್ಮಿಸುವಂತೆ ಮನವರಿಕೆ ಮಾಡಿಕೊಡಲಾಗುವುದು. ಅದನ್ನು ಸುಮಾರು 4 ತಿಂಗಳಿಗೊಮ್ಮೆ ಪಂಚಾಯತ್ ಖಾಲಿ ಮಾಡಿಸುವ ಕ್ರಮ ಕೈಗೊಳ್ಳಲಾಗುವುದು.
-ಪಂಚಾಕ್ಷರೀ ಸ್ವಾಮಿ,
ಪಂಚಾಯತ್ ಪಿಡಿಒ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.